ಮೂಡುಬಿದಿರೆ: ಕಲ್ಲಬೆಟ್ಟು ಸೇವಾ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಕ್ಕೆ ಕಳೆದ ವರ್ಷ ಜುಲೈ 10ರಂದು ನಡೆದ ಚುನಾವಣೆಯ ಫಲಿತಾಂಶ ಪ್ರಕಟಣೆಗೆ ಕೊನೆಗೂ ಮಂಗಳೂರು ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕೋರ್ಟ್ ಅನುಮತಿ ನೀಡಿದ್ದು ಜೂನ್ 3ರಂದು ಫಲಿತಾಂಶ ಪ್ರಕಟವಾಗಲಿದೆ.

ಕಲ್ಲಬೆಟ್ಟು ಸೇವಾ ಸಹಕಾರ ಸಂಘದ 12 ನಿರ್ದೇಶಕರ ಸ್ಥಾನಕ್ಕೆ 2025ರ ಜುಲೈ 10ರಂದು ಚುನಾವಣೆ ನಡೆದಿತ್ತು. ಆದರೆ ಕನಿಷ್ಠ ಎರಡು ಮಹಾಸಭೆಗಳಿಗೆ ಹಾಜರಾಗದ ಮತ್ತು ಕನಿಷ್ಠ ವ್ಯವಹಾರ ನಡೆಸದ ಸದಸ್ಯರಿಗೆ ಸೊಸೈಟಿ ಮತದಾನದ ಹಕ್ಕನ್ನು ನಿರಾಕರಿಸಿ ಅನರ್ಹಗೊಳಿಸಿತ್ತು. ಇದರ ವಿರುದ್ಧ ಕೆಲವರು ಹೈಕೋರ್ಟ್ ಮೆಟ್ಟಲೇರಿ ಮತದಾನದ ಹಕ್ಕನ್ನು ಮರಳಿ ಪಡೆದಿದ್ದರು. ಕೋರ್ಟ್ ಆದೇಶದಂತೆ ಈ ಸದಸ್ಯರ ಮತಗಳನ್ನು ಎಣಿಕೆ ಸಂದರ್ಭ ಪ್ರತ್ಯೇಕವಾಗಿರಿಸುವಂತೆ ಹಾಗೂ ಚುನಾವಣೆ ಪ್ರಕ್ರಿಯೆ ಮುಗಿದ ಬಳಿಕ ಅದರ ಬಗ್ಗೆ ತೀರ್ಮಾನಿಸುವಂತೆ ಹೇಳಿತ್ತು. ಅಲ್ಲಿಯವರೆಗೆ ಚುನಾವಣೆ ಫಲಿತಾಂಶ ಘೋಷಣೆಯನ್ನು ಕೋರ್ಟ್ ತಡೆ ಹಿಡಿದಿತ್ತು. ಆಡಳಿತಾಧಿಕಾರಿಗಳ ಅವಧಿಯಲ್ಲೇ ಚುನಾವಣೆ ನಡೆದಿದ್ದರೂ ಕಾನೂನು ಹೋರಾಟದ ಕಾರಣದಿಂದ ಫಲಿತಾಂಶವನ್ನು ಕಾಯ್ದಿರಿಸಲಾಗಿತ್ತು.

ಈ ನಡುವೆ, ಮಂಗಳೂರು ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರ ನ್ಯಾಯಾಲಯದಲ್ಲಿ ದಾಖಲಾಗಿದ್ದ ದಾವೆ ಪ್ರಕರಣದ ವಿಚಾರಣೆ ಪೂರ್ಣಗೊಂಡು, ಮೇ 25ರಂದು ಅಂತಿಮ ಆದೇಶ ಹೊರ ಬಿದ್ದಿದ್ದು ಜೂನ್ 3 ರಂದು ಫಲಿತಾಂಶ ಪ್ರಕಟವಾಗಲಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-29-1428185984

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.