ಕೊಲೆ ಯತ್ನ: ಕಲ್ಲಡ್ಕ ಪ್ರಭಾಕರ್‌ ಭಟ್‌ ಕಾರು ಚಾಲಕ ಯತಿರಾಜ್‌ ಬಂಧನ 

7

ಕೊಲೆ ಯತ್ನ: ಕಲ್ಲಡ್ಕ ಪ್ರಭಾಕರ್‌ ಭಟ್‌ ಕಾರು ಚಾಲಕ ಯತಿರಾಜ್‌ ಬಂಧನ 

Published:
Updated:

ಮಂಗಳೂರು: ಕುದ್ರೆಬೆಟ್ಟು ಬಾಳ್ತಿಲ ಗ್ರಾಮದಲ್ಲಿ ಕಾಂತಪ್ಪ ಪೂಜಾರಿ ಎಂಬುವವರ ಮೇಲೆ ಹಲ್ಲೆ ನಡೆಸಿರುವ ಸಂಬಂಧ ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್‌ ಕಾರು ಚಾಲಕ ಎನ್ನಲಾದ ಯತಿರಾಜ್‌ ಮತ್ತು ಇತರ ಮೂವರು ಯುವಕರನ್ನು ಬುಧವಾರ ಬಂಧಿಸಲಾಗಿದೆ.

ಜುಲೈ 3ರಂದು ಚಂದ್ರಪ್ರಭಾ (24) ಅವರ ಮನೆಗೆ ನುಗ್ಗಿದ ಯತಿರಾಜ್‌ ಹಾಗೂ ಇತರ ಯುವಕರು, ಚಂದ್ರಪ್ರಭಾ ತಂದೆ ಕಾಂತಪ್ಪ ಪೂಜಾರಿ ಮೇಲೆ ಹಲ್ಲೆ ನಡೆಸಿದ್ದಾರೆ. ಇದನ್ನು ತಡೆಯಲು ಹೋದ ಚಂದ್ರಪ್ರಭಾ ಹಣೆ, ತಲೆ ಹಾಗೂ ಕಾಲಿಗೆ ಗಾಯವಾಗಿದೆ. 

ಆಯುಧಗಳ ಸಮೇತ ಪರಾರಿಯಾಗಿದ್ದ ಆರೋಪಿಗಳನ್ನು ಬಂಟ್ವಾಳ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ. 
 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !