ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಕ್ಯಪದವು: ಮೈರ 10ನೇ ವರ್ಷದ ‘ಸತ್ಯ-ಧರ್ಮ’ ಕಂಬಳಕ್ಕೆ ಚಾಲನೆ

Last Updated 27 ನವೆಂಬರ್ 2022, 2:59 IST
ಅಕ್ಷರ ಗಾತ್ರ

ಬಂಟ್ವಾಳ: ಸನಾತನ ಸಂಸ್ಕೃತಿಗೆ ಕೆಲವೆಡೆ ಅಪಚಾರ ಎಸಗುತ್ತಿರುವ ಪ್ರಸಕ್ತ ಕಾಲಘಟ್ಟದಲ್ಲಿ ತುಳುನಾಡಿನ ಕೃಷಿಕರ ಸಂಸ್ಕೃತಿಯ ಪ್ರತೀಕವಾಗಿರುವ ಕಂಬಳ ಮತ್ತು ದೈವಾರಾಧನೆಗೆ ನಿಕಟ ಸಂಬಂಧ ಇದೆ ಎಂದು ಉಳಿ ಗೋಪಾಕೃಷ್ಣ ದೇವಸ್ಥಾನದ ಪ್ರಧಾನ ಅರ್ಚಕ ಯೋಗೀಂದ್ರ ಭಟ್ ಹೇಳಿದರು.

ಇಲ್ಲಿನ ಉಳಿ ಗ್ರಾಮದ ಕಕ್ಯಪದವು ಮೈರ ಬರ್ಕೆಜಾಲು ಎಂಬಲ್ಲಿ ಶನಿವಾರ ಆರಂಭಗೊಂಡ ಪ್ರಸಕ್ತ ವರ್ಷದ ಪ್ರಥಮ ಕಂಬಳ ಸತ್ಯ-ಧರ್ಮ ಜೋಡುಕರೆ ಬಯಲು ಕಂಬಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕಿಯೋನಿಕ್ಸ್ ಅಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ ಮಾತನಾಡಿ, ತುಳುನಾಡಿನ ಸಂಸ್ಕೃತಿ ಉಳಿವಿಗೆ ಎಲ್ಲರ ಸಹಕಾರದ ಅಗತ್ಯವಿದೆ ಎಂದರು.

ಮಣಿನಾಲ್ಕೂರು ಬಿಲ್ಲವ ಸಂಘದ ಅಧ್ಯಕ್ಷ ಸಂಜೀವ ಪೂಜಾರಿ ಕಟದಡೆ ದಶಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿದರು.

ಕಂಬಳ ಸಮಿತಿ ಅಧ್ಯಕ್ಷ ಕುಸುಮಾಧರ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ರೋಹಿತ್ ಹೆಗ್ಡೆ ಎರ್ಮಾಳ್, ಬಿಜೆಪಿ ಕ್ಷೇತ್ರಾ ಅಧ್ಯಕ್ಷ ದೇವಪ್ಪ ಪೂಜಾರಿ, ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಆನಂದ ಎ.ಶಂಭೂರು, ಸ್ಕ್ಯಾಡ್ಸ್ ಅಧ್ಯಕ್ಷ ರವೀಂದ್ರ ಕಂಬಳಿ, ಜಿಲ್ಲಾ ಬಿಜೆಪಿ ಮುಖಂಡ ರಾಮದಾಸ್ ಬಂಟ್ವಾಳ, ಯುವ ಮೋರ್ಚಾ ಘಟಕ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಬಜ, ಉಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ್ ಮೈರ, ಉಪಾಧ್ಯಕ್ಷ ಚಿದಾನಂದ ರೈ ಕಕ್ಯ, ಕಂಬಳ ಸಮಿತಿ ಕಾರ್ಯಾಧ್ಯಕ್ಷ ತುಷಾರ್ ಭಂಡಾರಿ, ಲತೀಶ್ ಕುಕ್ಕಾಜೆ, ಉಳಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಚೆನ್ನಪ್ಪ ಸಾಲಿಯಾನ್ ಇದ್ದರು.

ಪ್ರಮುಖರಾದ ರಾಮಯ್ಯ ಭಂಡಾರಿ, ಉಳಿ ದಾಮೋದರ ನಾಯಕ್, ಭರತ್ ಕುಮಾರ್ ಶೆಟ್ಟಿ ಬೆಂಗಳೂರು, ಆದಂ ಕುಂಞಿ, ಗುರುಪ್ರಸಾದ್, ರೂಪೇಶ್ ಆಚಾರ್ಯ, ಧನಂಜಯ ಶೆಟ್ಟಿ ಸರಪಾಡಿ, ವಿಠಲ ಅಲ್ಲಿಪಾದೆ, ಜಸ್ಟಿನ್ ಥೋಮಸ್, ಸಾಂತಪ್ಪ ಪೂಜಾರಿ ಹಟದಡ್ಕ, ಸುಧಾಕರ ಶೆಟ್ಟಿ, ಉಮೇಶ್ ಪೂಜಾರಿ, ಪುರಂದರ, ಪುರುಷೋತ್ತಮ ಪೂಜಾರಿ ಪಲ್ಕೆ, ಧರ್ನಪ್ಪ ಪೂಜಾರಿ, ರಂಜಿತ್ ಮೈರಾ, ಗೋಪಾಲ ಶೆಟ್ಟಿ, ಬಾಬು ಗೌಡ, ಅಬ್ದುಲ್ ರಹಿಮಾನ್ ಕಕ್ಯಪದವು, ದಿನೇಶ್ ದಲ್ಯಂತ್ತಬೈಲ್, ಸತೀಶ್ ಕಜೆಕಾರ್, ಗಿರೀಶ್, ವಸಂತ ಪೂಜಾರಿ, ವಸಂತ ಸಾಲಿಯಾನ್, ಸುರೇಶ್ ಪೂಜಾರಿ, ಚೇತನ್ ಊರ್ದೊಟ್ಟು, ಶಿವಪ್ಪ ಪೂಜಾರಿ, ರೋಹಿನಾಥ್ ಕಕ್ಯಪದವು, ವಸಂತ ಗೌಡ, ಪ್ರವೀಣ್ ಶೆಟ್ಟಿ ಕಿಂಜಾಲು, ಎಂಜಿನಿಯರ್ ಯಜ್ಞೇಶ್ ಉಳಿ, ಲಿಯೋ ಫರ್ನಾಂಡಿಸ್, ಸುರೇಶ್ ಶೆಟ್ಟಿ ಮಿಯಾರ್, ನವೀನ್ ಶಾಂತಿ, ಮಾರಪ್ಪ ಭಂಡಾರಿ ಇದ್ದರು.

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ವೆಂಕಟೇಶ್ ಬಂಟ್ವಾಳ, ಜಯರಾಮ ಆಚಾರ್ಯ, ವೆಂಕಪ್ಪ ನಲಿಕೆ ಅವರನ್ನು ಅಭಿನಂದಿಸಲಾಯಿತು.

ಶಿವಾನಂದ ಮೈರಾ ಸ್ವಾಗತಿಸಿದರು. ರಾಮಾಂಜನೇಯ ಗೆಳೆಯರ ಬಳಗದ ಅಧ್ಯಕ್ಷ ಲಕ್ಷ್ಮಣ ಪೂಜಾರಿ ನೇರಳಪಲ್ಕೆ ವಂದಿಸಿದರು. ಪ್ರಕಾಶ್ ಕಜೆಕಾರು ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT