ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು ಕಂಬಳ: ಶಾಸಕ ಡಾ.ಭರತ್‌ ಶೆಟ್ಟಿ ಕೋಣಗಳು ಪ್ರಥಮ

ರಾಮ-ಲಕ್ಷ್ಮಣ ಜೋಡುಕರೆ 5ನೇ ವರ್ಷದ ಕಂಬಳದ ಫಲಿತಾಂಶ
Last Updated 27 ಮಾರ್ಚ್ 2022, 13:02 IST
ಅಕ್ಷರ ಗಾತ್ರ

ಮಂಗಳೂರು: ಮಂಗಳೂರು ಕಂಬಳ ಸಮಿತಿಯಿಂದ ನಗರದ ಬಂಗ್ರಕುಳೂರಿನಲ್ಲಿ ಆಯೋಜಿಸಿದ್ದ 5ನೇ ವರ್ಷದ ಹೊನಲು-ಬೆಳಕಿನ ರಾಮ-ಲಕ್ಷ್ಮಣ ಜೋಡುಕರೆ ಕಂಬಳವು ಭಾನುವಾರ ಮಧ್ಯಾಹ್ನ ಸಂಪನ್ನವಾಯಿತು. ಕಂಬಳದಲ್ಲಿ ಮಂಗಳೂರು ಉತ್ತರ ಶಾಸಕ ಡಾ.ವೈ.ಭರತ್ ಶೆಟ್ಟಿ ಅವರ ಕೋಣಗಳು ಹಗ್ಗ ಹಿರಿಯ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿತು.

ಮಿಜಾರು ಪ್ರಸಾದ್‌ನಿಲಯ ಶಕ್ತಿಪ್ರಸಾದ್ ಶೆಟ್ಟಿಯವರ ಕೋಣಗಳನ್ನು ಯಡ್ತರೆಗುತ್ತು ಭರತ್ ಶೆಟ್ಟಿ ಅವರ ಹೆಸರಿನಲ್ಲಿ ಓಡಿಸಲಾಗಿತ್ತು. ಹಗ್ಗ ಹರಿಯ ವಿಭಾಗದಲ್ಲಿ ‘ಎ’ ಮತ್ತು ‘ಬಿ’ ಹೆಸರಿನಲ್ಲಿ ಎರಡು ಜತೆ ಕೋಣಗಳು ಸ್ಪರ್ಧೆಯಲ್ಲಿ ಭಾಗವಹಿಸಿತ್ತು. ‘ಬಿ’ ಹೆಸರಿನ ಕೋಣಗಳು ಪ್ರಥಮ ಬಹುಮಾನ ಪಡೆದಿವೆ. ಈ ಕೋಣಗಳನ್ನು ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ ಓಡಿಸಿದರು. ದ್ವಿತೀಯ ಬಹುಮಾನವನ್ನು ಪದವು ಕಾನಡ್ಕ ಫ್ಲೇವಿ ಡಿಸೋಜ ‘ಎ’ ಕೋಣಗಳು ಪಡೆದಿವೆ. ಅದನ್ನು ಓಡಿಸಿದವರು ಬಜಗೋಳಿ ಜೋಗಿಬೆಟ್ಟು ನಿಶಾಂತ್ ಶೆಟ್ಟಿ.

ಕಂಬಳ ಫಲಿತಾಂಶ: ಕೂಟದಲ್ಲಿ ಒಟ್ಟು 142 ಜೊತೆ ಕೋಣಗಳು ಭಾಗವಹಿಸಿದ್ದವು.

ಕನೆಹಲಗೆ (ನೀರು ನೋಡಿ ಬಹುಮಾನ): ಪ್ರಥಮ– ಕಾಂತಾವರ ಬೇಲಾಡಿ ಬಾವ ಅಶೋಕ್ ಶೆಟ್ಟಿ, ಹಲಗೆ ಮೆಟ್ಟಿದವರು– ತೆಕ್ಕಟ್ಟೆ ಸುಧೀರ್ ದೇವಾಡಿಗ. ದ್ವಿತೀಯ– ಬಾರ್ಕೂರು ಶಾಂತಾರಾಮ ಶೆಟ್ಟಿ, ಹಲಗೆ ಮೆಟ್ಟಿದವರು– ಮಂದಾರ್ತಿ ಶಿರೂರು ಭರತ್ ನಾಯ್ಕ್.

ಅಡ್ಡ ಹಲಗೆ: ಪ್ರಥಮ– ವಾಲ್ಪಾಡಿ ಹಾಲಾಜೆ ಲೂಯಿಸ್ ಲಾರೆನ್ಸ್ ಸಲ್ದಾನ, ಹಲಗೆ ಮೆಟ್ಟಿದವರು– ಬೈಂದೂರು ಹೊಸಕೋಟೆ ಮಹೇಶ್ ಪೂಜಾರಿ. ದ್ವಿತೀಯ– ಹಂಕರ್ಜಾಲು ಶ್ರೀನಿವಾಸ ಭಿರ್ಮಣ್ಣ ಶೆಟ್ಟಿ, ಹಲಗೆ ಮೆಟ್ಟಿದವರು– ತೆಕ್ಕಟ್ಟೆ ಸುಧೀರ್ ದೇವಾಡಿಗ.

ಹಗ್ಗ ಕಿರಿಯ: ಪ್ರಥಮ– ಕೊಳಕೆ ಇರ್ವತ್ತೂರು ಭಾಸ್ಕರ ಸುಬ್ಬಯ್ಯ ಕೋಟ್ಯಾನ್, ಓಡಿಸಿದವರು– ಕೊಳಕೆ ಇರ್ವತ್ತೂರು ಆನಂದ್. ದ್ವಿತೀಯ– ಗುರುಪುರ ಕಾರಮೊಗರಗುತ್ತು ಯಶ್ ಜಗದೀಶ್ ಆಳ್ವ, ಓಡಿಸಿದವರು– ಬೈಂದೂರು ವಿವೇಕ್ ಪೂಜಾರಿ.

ನೇಗಿಲು ಹಿರಿಯ: ಪ್ರಥಮ– ಬೋಳದಗುತ್ತು ಜಗದೀಶ್ ಶೆಟ್ಟಿ ‘ಎ’, ಓಡಿಸಿದವರು– ಮರೋಡಿ ಶ್ರೀಧರ್. ದ್ವಿತೀಯ: ಸಿದ್ಧಕಟ್ಟೆ ಪೋಡುಂಬ ಹೊಸಮನೆ ಸರೋಜಿನಿ ಸಂಜೀವ ಶೆಟ್ಟಿ ‘ಎ’, ಓಡಿಸಿದವರು– ಹೊಕ್ಕಾಡಿಗೋಳಿ ಹಕ್ಕೇರಿ ಸುರೇಶ್ ಶೆಟ್ಟಿ.

ನೇಗಿಲು ಕಿರಿಯ: ಪ್ರಥಮ– ಬೇಲಾಡಿ ಬಾವ ಅಶೋಕ್ ಶೆಟ್ಟಿ, ಓಡಿಸಿದವರು– ಮರೋಡಿ ಶ್ರೀಧರ್. ದ್ವಿತೀಯ– ಪಡೀಲು ಕವತ್ತಾರುಗುತ್ತು ದಿನಕರ ಜಯರಾಮ್ ಶೆಟ್ಟಿ, ಓಡಿಸಿದವರು– ಪಣಪಿಲ ಪ್ರವೀಣ್ ಕೋಟ್ಯಾನ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT