ಕಡಬ (ಉಪ್ಪಿನಂಗಡಿ): ಕನ್ನಡ ಭಾಷೆ, ಸಾಹಿತ್ಯ ಅಭಿವೃದ್ಧಿಗೆ ರಾಜ್ಯದ ಒಟ್ಟು ಬಜೆಟ್ನ ಶೇ 5ರಷ್ಟು ಅನುದಾನವನ್ನು ಮೀಸಲಿರಿಸಬೇಕು. ಸಾಹಿತ್ಯ, ಸಂಸ್ಕೃತಿಗೆ ಪ್ರೋತ್ಸಾಹ ನೀಡಿದರೆ ಮಾತ್ರ ಕನ್ನಡದ ಅಭಿವೃದ್ಧಿ ಸಾಧ್ಯ ಎಂದು ಸಾಹಿತಿ ವಸಂತ್ ಕುಮಾರ್ ಪೆರ್ಲ ಹೇಳಿದರು.

ದ.ಕ. ಜಿಲ್ಲಾ ಸಾಹಿತ್ಯ ಪರಿಷತ್ತ್ನ ಕಡಬ ತಾಲ್ಲೂಕು ಘಟಕದ ಆಶ್ರಯದಲ್ಲಿ ಕುಂತೂರು ಪದವು ಸೇಂಟ್ ಜಾರ್ಜ್ ಪ್ರೌಢಶಾಲೆಯಲ್ಲಿ ಶನಿವಾರ ನಡೆದ ಕಡಬ ತಾಲ್ಲೂಕು ನಾಲ್ಕನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಗೆ ಮನ್ನಣೆ ಸಿಗುತ್ತಿಲ್ಲ ಎಂಬುದು ಬೇಸರ ತರಿಸುತ್ತದೆ. ಸರ್ಕಾರ ವಿವಿಧ ಕಾರಣಗಳಿಗೆ ಕೋಟಿಗಟ್ಟಲೆ ಹಣ ವ್ಯಯ ಮಾಡುತ್ತಿದ್ದರೂ ಕನ್ನಡ ಅಭಿವೃದ್ಧಿಯನ್ನು ಕಡೆಗಣಿಸಿದೆ. ಕನ್ನಡ ಅಭಿವೃದ್ಧಿ ಭಾಷಣಕ್ಕೆ ಸೀಮಿತವಾಗುತ್ತಿದೆ. ನಮ್ಮ ಸಂಸ್ಕೃತಿ ಮೂಲ ಬದುಕನ್ನು ಮರೆಯದೆ ನಾಡು, ನುಡಿ ರಕ್ಷಣೆಗೆ ನಾವು ಬದ್ಧರಾಗಬೇಕು. ಶಿಕ್ಷಣದ ಮೂಲಕ ನಮ್ಮ ಭಾಷೆ, ಸಂಸ್ಕೃತಿಯನ್ನು ಉಳಿಸಬಹುದು ಎಂದರು.

ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಕೆ.ಸೀತಾರಾಮ ರೈ ಸವಣೂರು ಮಾತನಾಡಿ, ಕನ್ನಡ ಉಳಿಸಿ, ಬೆಳೆಸುವಲ್ಲಿ ಶಿಕ್ಷಕರ ಪಾತ್ರ ಹಿರಿದು. ಮಕ್ಕಳಲ್ಲಿ ಕನ್ನಡ ಸಾಹಿತ್ಯ ಮತ್ತು ಭಾಷೆ ಬಗ್ಗೆ ಅಭಿರುಚಿ ಹುಟ್ಟಿಸಬೇಕು. ನಾವು ಜಗತ್ತಿನ ಯಾವುದೇ ಮೂಲೆಗೆ ಹೋದರೂ ತಾಯಿ ಭಾಷೆ ಕನ್ನಡವನ್ನು ಮರೆಯಬಾರದು ಎಂದರು.

ಸೇಂಟ್ ಜಾರ್ಜ್ ಪ್ರೌಢ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಫಾ.ನಿತಿನ್ ಮ್ಯಾಥ್ಯು, ಕನ್ನಡ ಸಾಹಿತ್ಯ ಪರಿಷತ್ ದ.ಕ. ಜಿಲ್ಲಾ ಘಟಕದ ಅಧ್ಯಕ್ಷ ಎಂ.ಪಿ.ಶ್ರೀನಾಥ್, ಕಡಬ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಸೇಸಪ್ಪ ರೈ ರಾಮಕುಂಜ, ಶಿಕ್ಷಕ ನಾರಾಯಣ ಭಟ್ ಮಾತನಾಡಿದರು.

ದ.ಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ಕಡಬ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ನಿಕಟ ಪೂರ್ವ ಅಧ್ಯಕ್ಷ ಜನಾರ್ದನ ಗೌಡ ಪಣೆಮಜಲು ಕಲಾ ಪ್ರದರ್ಶನ, ಸಿಂಡಿಕೇಟ್ ಬ್ಯಾಂಕ್ನ ನಿವೃತ್ತ ಪ್ರಬಂಧಕ ಮಹಮ್ಮದ್ ಕುಞಿ ಪುಸ್ತಕ ಪ್ರದರ್ಶನ, ಸ್ವಾಗತ ಸಮಿತಿ ಸಂಚಾಲಕ ರಾಯ್ ಅಬ್ರಹಾಂ ಪ್ರಾಚ್ಯವಸ್ತು ಪ್ರದರ್ಶನ, ಸ್ವಾಗತ ಸಮಿತಿ ಅಧ್ಯಕ್ಷ ಗುರುರಾಜ್ ರೈ ಕೇವಳ ವಿಜ್ಞಾನ ಪ್ರದರ್ಶನವನ್ನು ಉದ್ಘಾಟಿಸಿದರು.

ಸಾಹಿತ್ಯ ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷ ಗಣರಾಜ ಕುಂಬ್ಳೆ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ, ವಿವಿಧ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರಾದ ಸಂಧ್ಯಾ, ಸುಶೀಲ ಆಲಂಕಾರು, ಸುಚೇತಾ ರಾಮಕುಂಜ, ಪುಷ್ಪಾ ಸುಭಾಶ್ ಶೆಟ್ಟಿ ಕೊಯಿಲ, ಕನ್ನಡ ಸಾಹಿತ್ಯ ಪರಿಷತ್ನ ಹೋಬಳಿ ಘಟಕದ ಅಧ್ಯಕ್ಷ ಪದ್ಮಪ್ಪ ಗೌಡ, ಸಂಘಟನಾ ಕಾರ್ಯದರ್ಶಿ ಕಿಶೋರ್ ಕುಮಾರ್, ಗೌರವ ಕಾರ್ಯದರ್ಶಿ ನಾಗರಾಜ್
ಎನ್.ಕೆ., ಶಾಲಾ ಸಂಚಾಲಕ ವಿ.ಐ.ಅಬ್ರಹಾಂ, ಪೆರಾಬೆ ಗ್ರಾಮ ಪಂಚಾಯಿತಿ ಸದಸ್ಯ ಪಿ.ಜಿ. ರಾಜು ಭಾಗವಹಿಸಿದ್ದರು.

ಮುಖ್ಯ ಶಿಕ್ಷಕ ಹರಿಶ್ಚಂದ್ರ ಸ್ವಾಗತಿಸಿ, ಬಾಲಚಂದ್ರ ಮುಚ್ಚಿಂತಾಯ ವಂದಿಸಿದರು. ರಾಮಕುಂಜೇಶ್ವರ ಕಾಲೇಜಿನ ಪ್ರಾಚಾರ್ಯ ಚಂದ್ರಶೇಖರ ನಿರೂಪಿಸಿದರು. ಪದವು ಸೇಂಟ್ ಜಾರ್ಜ್ ಆರ್ಥೊಡಾಕ್ಸ್ ಚರ್ಚ್ ಬಳಿಯಿಂದ ಸಮ್ಮೇಳನದ ವೇದಿಕೆಯವರೆಗೆ ಕನ್ನಡ ಭುವನೇಶ್ವರಿಯ ಮೆರವಣಿಗೆ ಸಾಗಿತು.

ನಮ್ಮ ಬಾಳಿಗೆ ಸಾಹಿತ್ಯ ದೀವಿಗೆ: ಸಮ್ಮೇಳನದ ಅಧ್ಯಕ್ಷ, ಸಾಹಿತಿ ಎನ್.ಕರುಣಾಕರ ಗೋಗಟೆ ಮಾತನಾಡಿ, ಮನುಷ್ಯನಿಗೆ ಊಟ, ತಿಂಡಿ, ನಿದ್ರೆ ಇದ್ದಂತೆ ಸಾಹಿತ್ಯವೂ ದೀವಿಗೆಯಾಗಿದೆ. ಸಾಹಿತ್ಯದಿಂದ ಹೊಸ ಚಿಂತನೆ, ಆಲೋಚನೆ, ಶೋಧನೆ, ಸಂಶೋಧನೆ, ಹೊಳಹುಗಳು ಹುಟ್ಟಿಕೊಳ್ಳುತ್ತವೆ. ಇದರಿಂದ ವ್ಯಕ್ತಿತ್ವ ವಿಕಸನಗೊಂಡು ನಮ್ಮ ವೃತ್ತಿಗೆ, ಆಸಕ್ತಿಗೆ ಪೂರಕವಾಗಿ ಬದುಕು ಉಜ್ವಲವಾಗುತ್ತದೆ ಎಂದು ಹೇಳಿದರು.

ಸಾಹಸ, ಹೋರಾಟ, ವೃತ್ತಿ, ಪ್ರವೃತ್ತಿ, ಉದ್ಯಮ, ಕೃಷಿ-ಹೀಗೆ ಬದುಕಿನ ಎಲ್ಲ ಕ್ಷೇತ್ರಗಳ ಅನುಭವಗಳನ್ನು ಓದುಗರಿಗೆ ಹಿತವಾಗುವಂತೆ ಅಕ್ಷರ ರೂಪಕ್ಕಿಳಿಸಿ ನೀಡುವವನೇ ಸಾಹಿತಿ. ಆತ ಸಮಾಜದ ಮಾರ್ಗದರ್ಶಕ. ಆತ ಅನುಭವಗಳ ಸಂಗ್ರಾಹಕ, ಅವುಗಳನ್ನು ಜನರತ್ತ ತಲುಪಿಸಿ ಬದುಕು ಹಸನುಗೊಳಿಸುವ ಶ್ರಮಿಕ. ಸ್ಥಳೀಯ ಭಾಷೆಗೆ ಸ್ಪಂದಿಸದೇ ಹೋದರೆ ಯಶಸ್ಸು ಸಾಧಿಸಲಾರ ಎಂದು ಗೋಗಟೆ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.