ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಾವಳಿ ಶಿಕ್ಷಣ ಸಂಸ್ಥೆಯಲ್ಲಿ ಶುಲ್ಕ ರಿಯಾಯಿತಿ

ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ 75 ಸಾಧಕರಿಗೆ ಸನ್ಮಾನ; 75 ಮಂದಿಗೆ ಶೈಕ್ಷಣಿಕ ಕೊಡುಗೆ
Last Updated 13 ಆಗಸ್ಟ್ 2022, 2:51 IST
ಅಕ್ಷರ ಗಾತ್ರ

ಮಂಗಳೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಜಿ.ಆರ್‌.ಎಜುಕೇಷನ್ ಟ್ರಸ್ಟ್‌ನ ಕರಾವಳಿ ಶಿಕ್ಷಣ ಸಂಸ್ಥೆಗಳ ಸಮೂಹದಲ್ಲಿ ಶುಲ್ಕ ರಿಯಾಯಿತಿ ಮತ್ತು ಉಚಿತ ಶಿಕ್ಷಣ ನೀಡಲು ನಿರ್ಧರಿಸಲಾಗಿದ್ದು75 ಮಂದಿ ವಿದ್ಯಾರ್ಥಿಗಳು ಇದರ ಫಲಾನುಭವಿಗಳಾಗಲಿದ್ದಾರೆ ಎಂದು ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ ಎಸ್.ಗಣೇಶ್ ರಾವ್‍ ತಿಳಿಸಿದರು.

ಟ್ರಸ್ಟ್‌ನನೀರುಮಾರ್ಗದಲ್ಲಿರುವ ಆಸ್ಪತ್ರೆ ಆವರಣದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಶಿಕ್ಷಕರು ಒಳಗೊಂಡಂತೆ 75 ಸಾಧಕರನ್ನು ಸನ್ಮಾನಿಸುವ ನಿರ್ಧಾರವನ್ನೂ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಎಂಜಿನಿಯರಿಂಗ್, ಫಿಸಿಯೊಥೆರಪಿ, ಹೋಟೆಲ್ ಮ್ಯಾನೇಜ್‍ಮೆಂಟ್, ಇಂಟೀರಿಯಲ್ ಡಿಸೈನ್, ಪ್ಯಾಷನ್ ಡಿಸೈನ್‌ ಕೋರ್ಸ್‌ಗಳ ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಶಿಕ್ಷಣ ನೀಡಲಾಗುವುದು. ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದವರಿಗೆ ಆದ್ಯತೆ ನೀಡಲಾಗುವುದು. ಕೃಷಿಕರು, ಸೈನಿಕರು, ಅಧ್ಯಾಪಕರು ಮತ್ತು ಪತ್ರಕರ್ತರ ಮಕ್ಕಳನ್ನು ಕೂಡ ಆದ್ಯತೆಯ ಮೇಲೆ ಪರಿಗಣಿಸಲಾಗುವುದು ಎಂದು ಅವರು ವಿವರಿಸಿದರು.

ಸಿಇಟಿಯಲ್ಲಿ 2000ದ ಒಳಗೆ ರ‍್ಯಾಂಕ್‌ ಪಡೆದ ವಿದ್ಯಾರ್ಥಿಗಳಿಗೆ ಸಂಪೂರ್ಣ ರಿಯಾಯಿತಿ ಲಭಿಸಲಿದ್ದು 2000ದಿಂದ 5000ದ ಒಳಗೆ ರ‍್ಯಾಂಕ್‌ ಗಳಿಸಿದವರಿಗೆ ಶೇಕಡಾ 75 ಮತ್ತು 5000ರಿಂದ 10000ದ ಒಳಗೆ ರ‍್ಯಾಂಕ್‌ ಪಡೆದವರಿಗೆ ಶೇಕಡಾ 50 ರಿಯಾಯಿತಿ ಸಿಗಲಿದೆ. ಇತರರು ಮೆರಿಟ್ ಆಧಾರದಲ್ಲಿ ರಿಯಾಯಿತಿಗೆ ಅರ್ಹರಾಗಲಿದ್ದಾರೆ. ಆಯ್ಕೆಗಾಗಿ ಕಣ್ಣೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ.ಎಂ.ಅಬ್ದುಲ್ ರಹಿಮಾನ್, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ.ಡಿ. ಶಿವಲಿಂಗಯ್ಯ, ಶಾರದ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎಂ.‌ಬಿ.ಪುರಾಣಿಕ್, ರಾಜ್ಯ ಯೋಜನಾ ಆಯೋಗದ ಸದಸ್ಯ ಮಾರ್ಸೆಲ್ ಮೊಂಥೆರೊ
ಅವರನ್ನು ಒಳಗೊಂಡ ಸಮಿತಿ ರಚಿಸಲಾಗಿದೆ ಎಂದು ಅವರು ತಿಳಿಸಿದರು.

ಆಯ್ಕೆ ಬಯಸುವವರು scholarshipkaravaligroup@gmail.com ಗೆ ಮೇಲ್ ಮಾಡಿದರೆ ಅರ್ಜಿ ಕಳುಹಿಸಿಕೊಡಲಾಗುವುದು. ಭರ್ತಿ ಮಾಡಿದ ಅರ್ಜಿಯನ್ನು ವಾಪಸ್ ಮೇಲ್ ಮಾಡಬೇಕು. ಅವುಗಳನ್ನು ಸಮಿತಿಯ ಸುಪರ್ದಿಗೆ ವಹಿಸಲಾಗುವುದು ಎಂದರು.


ಸನ್ಮಾನಕ್ಕೊಂದು ಆಯ್ಕೆ ಸಮಿತಿ

ವಿವಿಧ ಕ್ಷೇತ್ರಗಳ ಸಾಧಕರನ್ನು ಆಯ್ಕೆ ಮಾಡುವುದಕ್ಕಾಗಿ ಪ್ರತ್ಯೇಕ ಸಲಹಾ ಸಮಿತಿ ರಚಿಸಲಾಗಿದ್ದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ.ಬಲವೀರ ರೆಡ್ಡಿ, ಬೆಂಗಳೂರು ವಿವಿ ವಿಶ್ರಾಂತ ಕುಲಪತಿ ಡಾ. ಎಸ್.ರಮಾನಂದ ಶೆಟ್ಟಿ, ಮಂಗಳೂರು ವಿವಿ ಕುಲಪತಿ ಡಾ.ಪಿ.ಸುಬ್ರಹ್ಮಣ್ಯ
ಯಡಪಡಿತ್ತಾಯ ಅವರು ಸಮಿತಿಯಲ್ಲಿದ್ದಾರೆ. ಮೂರರಿಂದ ಆರು ತಿಂಗಳ ಒಳಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಗಣೇಶ್ ರಾವ್‍ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT