ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಲಿಂಗತ್ವದ ರಾಜಕಾರಣ ಪ್ರಶ್ನಿಸುವ ಧೈರ್ಯ ಹೆಣ್ಣಿಗೆ ದಕ್ಕಲಿ’

Last Updated 6 ಡಿಸೆಂಬರ್ 2022, 4:36 IST
ಅಕ್ಷರ ಗಾತ್ರ

ಮಂಗಳೂರು: ‘ಸ್ವಾತಂತ್ರ್ಯ ಚಳವಳಿಯಲ್ಲಿ ತೆರೆಮರೆಯಲ್ಲಿ ಕೆಲಸ ಮಾಡಿದ ಸಾವಿರಾರು ಹೆಸರುಗಳು ವಿಸ್ಮೃತಿಗೆ ಒಳಗಾಗಿವೆ. ಪ್ರಾದೇಶಿಕತೆ, ಭಾಷೆ, ಜಾತೀಯತೆಗಳ ಅಸಮಾನತೆಯಿಂದಾಗಿ ಮಹಿಳೆಯರ ಬರಹಗಳನ್ನು ವಿಸ್ಮೃತಿಗೆ ತಳ್ಳುವ ಪರಿಸ್ಥಿತಿ ಇದೆ’ ಎಂದು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಸಚಿವೆ ಡಾ.ಆರ್.ಸುನಂದಮ್ಮ ಹೇಳಿದರು.

ಕರಾವಳಿ ಲೇಖಕಿಯರ ವಾಚಕಿಯರ ಸಂಘವು ಭಾನುವಾರ ಹಮ್ಮಿಕೊಂಡಿದ್ದ ಮಹಿಳಾ ಸಾಹಿತ್ಯೋತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ‘ಹದಿಬದೆಯ ಧರ್ಮವನ್ನು ಮುನ್ನೆಲೆಗೆ ತಂದು ಕಾಳವ್ವೆ, ಗೊಗ್ಗವ್ವೆಯರು ವಿಸ್ಮೃತಿಗೆ ತಳ್ಳಲ್ಪಡುತ್ತಾರೆ. ಲಿಂಗತ್ವದ ರಾಜಕಾರಣವನ್ನು ಮೊತ್ತ ಮೊದಲು ಪ್ರಶ್ನಿಸಿದವಳು ಕಾಳವ್ವೆ. ಪ್ರತಿ ಕುಟುಂಬವೂ ರಾಜಕೀಯದ ಅಂಗಳವಾಗುತ್ತಿರುವ ಈ ಕಾಲದಲ್ಲಿ ಮಹಿಳಾ ಮೀಸಲಾತಿಗಾಗಿ ಹೋರಾಡುತ್ತಲೇ ಇದ್ದೇವೆ. ರಾಜಕೀಯದಲ್ಲಿ ಗೆದ್ದವರು ಸಾರ್ಥಕ ಸೇವೆ ಸಲ್ಲಿಸಿದ ಮಹಿಳೆಯರ ಸಾಧನೆಗಳು ವಿಸ್ಮೃತಿಗೊಳಗಾಗುತ್ತಿರುವ ಸತ್ಯ ನಮ್ಮ ಕಣ್ಣ ಮುಂದಿದೆ. ಈ ಬಗ್ಗೆ ಮಹಿಳೆಯರು ಜಾಗೃತರಾಗಿ ಈ ತಾರತಮ್ಯವನ್ನು ವಿರೋಧಿಸುವ ಸಾಹಿತ್ಯ ಬರೆಯಬೇಕು’ ಎಂದರು.

ಕರಾವಳಿ ಲೇಖಕಿ ವಾಚಕಿಯರ ಸಂಘದ ಅಧ್ಯಕ್ಷೆ ಡಾ.ಜ್ಯೊತಿ ಚೇಳೈರು ಮಾತನಾಡಿ, ‘ಇಂತಹ ಸಮ್ಮೇಳನಗಳು ಮಹಿಳೆಯರನ್ನು ವೈಚಾರಿಕವಾಗಿ ಬೆಳೆಸುವುದರ ಜೊತೆಗೆ ಉತ್ತಮ ಸಾಹಿತ್ಯ ಕೃತಿಗಳನ್ನು ಓದುವುದಕ್ಕೆ ಪ್ರೇರೇಪಿಸುತ್ತದೆ’ ಎಂದರು. ಡಾ.ಸುಧಾರಾಣಿ ಸ್ವಾಗತಿಸಿದರು. ಶರ್ಮಿಳಾ ಶೆಟ್ಟಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT