ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆ.ಆರ್‌.ಲೋಬೊ ಬಳಿ ₹ 13.39 ಕೋಟಿ ಆಸ್ತಿ

Last Updated 20 ಏಪ್ರಿಲ್ 2023, 16:16 IST
ಅಕ್ಷರ ಗಾತ್ರ

ಮಂಗಳೂರು: ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಜೆ.ಆರ್‌.ಲೋಬೊ ಒಟ್ಟು ₹ 13.39 ಕೋಟಿ ಮೌಲ್ಯದ ಆಸ್ತಿ ಹೊಂದಿರುವುದಾಗಿ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ.

ಬಿ.ಎಸ್ಸಿ ಬಿ.ಇಡಿ ಪದವೀಧರರಾಗಿರುವ ಲೋಬೊ, ತಮ್ಮನ್ನು ಉದ್ಯಮಿ ಎಂದು ಹೇಳಿಕೊಂಡಿದ್ದು, ವಾರ್ಷಿಕ ₹ 49.69 ಲಕ್ಷ ವರಮಾನವಿದೆ ಎಂದು ತಿಳಿಸಿದ್ದಾರೆ. ಅವರ ಬಳಿ ₹ 9.82 ಕೋಟಿ ಮೌಲ್ಯದ ಚರಾಸ್ತಿ ಹಾಗೂ ₹ 3.57 ಕೋಟಿ ಮೌಲ್ಯದ ಸ್ಥಿರಾಸ್ತಿ ಇದೆ. ಅವರ ಪತ್ನಿ ಫಿಲೋಮಿನಾ ಲೋಬೊ ಅವರೂ ಉದ್ಯಮಿಯಾಗಿದ್ದು, ಅವರಿಗೆ ವಾರ್ಷಿಕ ₹ 12.06 ಲಕ್ಷ ವರಮಾನವಿದೆ. ಅವರ ಬಳಿ ₹ 1.14 ಕೋಟಿ ಮೌಲ್ಯದ ಚರಾಸ್ತಿ ಹಾಗೂ ₹ 2.89 ಕೋಟಿ ಮೌಲ್ಯದ ಸ್ಥಿರಾಸ್ತಿ ಇದೆ. ಅವರ ಕುಟುಂಬದ ಒಟ್ಟು ಆಸ್ತಿ ₹ 17.42 ಕೋಟಿ.

ಲೋಬೊ ಅವರು ಸಿಲಾ ಅಗ್ರೋಟೆಕ್‌ನಲ್ಲಿ ₹ 5.37 ಕೋಟಿ, ಅಲ್ಬರ್ಟ್ಸ್ಟನ್ಸ್‌ ಇಂಟರ್‌ನ್ಯಾಷನಲ್ಸ್‌ನಲ್ಲಿ ₹ 29.80 ಲಕ್ಷ, ಲೈಕೋರಾ ಕಂಪನಿಯಲ್ಲಿ ₹ 3.80 ಲಕ್ಷ ಸಿಲಾ ಅಡ್ವರ್ಟೈಸರ್ಸ್‌ನಲ್ಲಿ ₹ 3.96 ಕೋಟಿ, ಪಾಂಪೈ ಪ್ರಾಪರ್ಟೀಸ್‌ನಲ್ಲಿ ₹ 1.35 ಲಕ್ಷ ಷೇರು ಹೊಂದಿದ್ದಾರೆ. ಅವರ ಬಳಿ 1981ನೇ ಸಾಲಿನ ಫಿಯೆಟ್‌ ಕಾರು ಇದ್ದು, ಅದರ ಬೆಲೆ ₹ 40 ಸಾವಿರ. ಅವರ ಬಳಿ ₹ 12.17 ಲಕ್ಷ ನಗದು ಇದೆ.

ಅವರ ಪತ್ನಿ ಫಿಲೋಮಿನಾ ಅವರು ಸಿಲಾ ಅಗ್ರೋಟೆಕ್‌ನಲ್ಲಿ ₹ 25 ಲಕ್ಷ, ಅಲ್ಬರ್ಟ್ಸ್ಟನ್ಸ್‌ ಇಂಟರ್‌ನ್ಯಾಷನಲ್ಸ್‌ನಲ್ಲಿ ₹3 ಲಕ್ಷ, ಡಯಾಸಿಸ್ ಅಗ್ರೊ ಕಂಪನಿಯಲ್ಲಿ ₹ 25.33 ಲಕ್ಷ, ವೈಟ್‌ ಗ್ರೋವ್‌ ಅಗ್ರಿ ಕಂಪನಿಯಲ್ಲಿ ₹46,273 ಹಾಗೂ ಕೋಕೊ ರಿಚ್‌ ಅಗ್ರಿ ಕಂಪನಿಯಲ್ಲಿ ₹ 50 ಸಾವಿರ ಷೇರು ಸೇರಿದಂತೆ ಒಟ್ಟು ₹ 54.19 ಲಕ್ಷ ಮೌಲ್ಯದ ಷೇರುಗಳನ್ನು ಹೊಂದಿದ್ದಾರೆ. ಅವರ ಬಳಿ ₹ 3 ಲಕ್ಷ ನಗದು ಇದೆ. ಉಳಿತಾಯ ಪತ್ರ/ವಿವಿಧ ಸಂಸ್ಥೆಗಳಲ್ಲಿ ₹ 27.88 ಲಕ್ಷ ಹೂಡಿಕೆ ಮಾಡಿದ್ದಾರೆ.

ಲೋಬೊ ಅವರ ಬಳಿ 15 ಗ್ರಾಂ ಚಿನ್ನಾಭರಣಗಳಿದ್ದು, ಅದರ ಬೆಲೆ ₹ 40 ಸಾವಿರ. ಅವರ ಪತ್ನಿ ಬಳಿ 399 ಗ್ರಾಮ ಚಿನ್ನಾಭರಣಗಳಿದ್ದು, ಅದರ ಮೌಲ್ಯ ₹ 22.28 ಲಕ್ಷ.

ಲೋಬೊ ಬಳಿ ಕಂದಾವರ ಮತ್ತು ಕೊಳಂಬೆ ಗ್ರಾಮಗಳಲ್ಲಿ ಪಿತ್ರಾರ್ಜಿತ ಜಮೀನು ಹಾಗೂ ಪದವಿನಲ್ಲಿ 7.9 ಸೆಂಟ್ಸ್‌ ಕೃಷಿಯೇತರ (ಪಿತ್ರಾರ್ಜಿತ) ಜಮೀನು ಇದೆ.ಕದ್ರಿಯಲ್ಲಿ ವಾಣಿಜ್ಯ ಕಟ್ಟಡ ಹೊಂದಿದ್ದು, ಅದರ ಮೌಲ್ಯ ₹ 3.12 ಕೋಟಿ.

ಅವರ ಪತ್ನಿ ಕೊಪ್ಪ ತಾಲ್ಲೂಕಿನ ಕೇಳ್ಕುಳ್ಳಿಯಲ್ಲಿ 1 ಎಕರೆ 82 ಸೆಂಟ್ಸ್ ಪಿತ್ರಾರ್ಜಿತ ಕೃಷಿ ಜಮೀನು ಹೊಂದಿದ್ದಾರೆ. ಮಳವೂರಿನಲ್ಲಿ 2020ರಲ್ಲಿ ₹49.64 ಲಕ್ಷ ಮೌಲ್ಯದ 3.44ಎಕರೆ ಕೃಷಿ ಜಮೀನು ಖರೀದಿಸಿದ್ದಾರೆ. ಹಿರೇಕೆರೂರಿನಲ್ಲಿ 4 ಎಕರೆ ಕೃಷಿಯೇತರ ಜಮೀನು ಹಾಗೂ ಒಟ್ಟು 8 ನಿವೇಶನಗಳನ್ನು ಹೊಂದಿದ್ದು, ಅದರ ಮೌಲ್ಯ ₹ 1.50 ಕೋಟಿ. ಕೊಪ್ಪದಲ್ಲಿ 66 ಲಕ್ಷ ಮೌಲ್ಯದ ವಾಣಿಜ್ಯ ಕಟ್ಟಡ ಹೊಂದಿದ್ದಾರೆ.

ಲೋಬೊ ವಿರುದ್ಧ ಯಾವುದೇ ಪ್ರಕರಣಗಳಿಲ್ಲ.

ಇನಾಯತ್‌ ಅಲಿಯಿಂದ ₹ 50 ಲಕ್ಷ ಸಾಲ

ಲೋಬೊ ಅವರು ಇನಾಯತ್‌ ಅಲಿ ಎಂಬುವರಿಂದ ಪಡೆದ ₹ 50 ಲಕ್ಷ ಸಾಲವೂ ಸೇರಿ ಒಟ್ಟು ₹ 2.30 ಕೋಟಿ ಸಾಲ ಪಡೆದಿದ್ದಾರೆ. ಅವರ ಪತ್ನಿ ಒಟ್ಟು 43 ಲಕ್ಷ ಸಾಲ ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT