ಮಂಗಳೂರು: ಕರ್ನಾಟಕದಾದ್ಯಂತ ಇರುವ ನೋಂದಾಯಿತ ತಂಬಾಕು ಬೆಳೆಗಾರರಿಗೆ ಆರ್ಥಿಕ ನೆರವು ಒದಗಿಸುವುದಕ್ಕೆ ಸಂಬಂಧಿಸಿದಂತೆ ಕರ್ಣಾಟಕ ಬ್ಯಾಂಕ್, ಕೇಂದ್ರ ಸರ್ಕಾರದ ತಂಬಾಕು ಮಂಡಳಿಯ ಜೊತೆ ಪಾಲುಗಾರಿಕೆ ಒಪ್ಪಂದ ಮಾಡಿಕೊಂಡಿದೆ.

ಒಪ್ಪಂದದ ಪ್ರಕಾರ ತಂಬಾಕು ಮಂಡಳಿಯಲ್ಲಿ ನೋಂದಣಿ ಮಾಡಿ ಕೊಂಡಿರುವ ತಂಬಾಕು ಬೆಳೆಗಾರರ ಅಗತ್ಯಕ್ಕೆ ಅನುಗುಣವಾಗಿ ಬ್ಯಾಂಕ್ ವಿಶೇಷ ಸಾಲ ಯೋಜನೆ ರೂಪಿಸಿ, ಆರ್ಥಿಕ ನೆರವು ಒದಗಿಸಲಿದೆ.

ಬ್ಯಾಂಕ್ನ ಆಡಳಿತ ನಿರ್ದೇಶಕ ಮತ್ತು ಸಿಇಒ ರಾಘವೇಂದ್ರ ಎಸ್. ಭಟ್ ಅವರು ತಂಬಾಕು ಮಂಡಳಿಯ ನಿರ್ದೇಶಕ (ಹರಾಜು) ಶ್ರೀನಿವಾಸ ಬಿ.ಸಿ. ಅವರ ಸಮ್ಮುಖದಲ್ಲಿ ಹೊಸ ಯೋಜನೆಗೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ರಾಘವೇಂದ್ರ ಭಟ್, ‘ಅಗತ್ಯಕ್ಕೆ ಅನುಗುಣವಾದ ಆರ್ಥಿಕ ನೆರವು ಯೋಜನೆಗಳನ್ನು ರೂಪಿಸುವ ಮೂಲಕ ದೇಶದ ರೈತ ಸಮು ದಾಯವನ್ನು ಬಲಪಡಿಸಲು ಕರ್ಣಾಟಕ ಬ್ಯಾಂಕ್ ಬದ್ಧವಾಗಿದೆ. ತಂಬಾಕು ಮಂಡಳಿ ಜೊತೆಗಿನ ಈ ಒಪ್ಪಂದವು ಬೆಳೆಗಾರರಿಗೆ ಸಕಾಲದಲ್ಲಿ ಆರ್ಥಿಕ ನೆರವು ಹಾಗೂ ಬ್ಯಾಂಕಿಂಗ್ ಸೌಲಭ್ಯ ಪಡೆಯಲು ನೆರವಾಗಲಿದೆ’ ಎಂದರು.

‘ತಂಬಾಕು ಬೆಳೆಗಾರರಿಗೆ ಆರ್ಥಿಕ ನೆರವು ಒದಗಿಸುವ ನಿಟ್ಟಿನಲ್ಲಿ ಈ ಒಪ್ಪಂದವು ಒಂದು ಮಹತ್ವದ ಹೆಜ್ಜೆ. ಸಾಂಸ್ಥಿಕ ಬೆಂಬಲಕ್ಕೆ ಬೆಳೆಗಾರರ ಅಗತ್ಯ ಮನಗಂಡು ಬ್ಯಾಂಕ್ ರೂಪಿಸಿದ ಆರ್ಥಿಕ ಯೋಜನೆಯನ್ನು ಜೋಡಿಸುವ ಮೂಲಕ ರೈತರ ಅಗತ್ಯಗಳನ್ನು ಪರಿಣಾಮಕಾರಿಯಾಗಿ ಪೂರೈಸಲು ಸಾಧ್ಯವಾಗಲಿದೆ’ ಎಂದು ಶ್ರೀನಿವಾಸ ಬಿ.ಸಿ. ಹೇಳಿದರು.

ಕರ್ಣಾಟಕ ಬ್ಯಾಂಕ್, ತಂಬಾಕು ಮಂಡಳಿಯ ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-29-1174585182

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.