ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಳು, ದೈವದ ಹೆಸರಿಡಿ: ಕತ್ತಲ್‌ಸಾರ್ ಸಲಹೆ

ತುಳುನಡಿನ ಪ್ರಮುಖ ಸ್ಥಳ, ಮಾರ್ಗ, ಸಂಸ್ಥೆಗಳಿಗೆ ನಾಮಕರಣಕ್ಕೆ ಕತ್ತಲ್‌ಸಾರ್ ಸಲಹೆ
Last Updated 2 ನವೆಂಬರ್ 2022, 7:11 IST
ಅಕ್ಷರ ಗಾತ್ರ

ಉಳ್ಳಾಲ: ಜಿಲ್ಲೆಯ ಜಲ, ವಾಯು ಹಾಗೂ ರೈಲ್ವೆ ಮಾರ್ಗಕ್ಕೆ ತುಳುನಾಡಿನ ದೈವ, ಆದರ್ಶಪ್ರಾಯರ ನಾಮಕಾರಣ ಮಾಡಬೇಕು ಎಂದು ಮುಖಂಡ ದಯಾನಂದ ಜಿ. ಕತ್ತಲ್ ಸಾರ್ ಹೇಳಿದರು.

ಉಳ್ಳಾಲ ವೀರ ರಾಣಿ ಅಬ್ಬಕ್ಕ ಉತ್ಸವ ಸಮಿತಿ ಆಶ್ರಯದಲ್ಲಿ ಪೆರ್ಮನ್ನೂರು ಬಬ್ಬುಕಟ್ಟೆಯ ಚಂದಪ್ಪ ಎಸ್ಟೇಟ್‌ನಲ್ಲಿ ನಡೆದ ರಾಜ್ಯೋತ್ಸವ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ತುಳುವರ ಮೃದು ಧೋರಣೆಯಿಂದ ಅಬ್ಬಕ್ಕ ಸೌಧದ ನಿರ್ಮಾಣ ಅಸಾಧ್ಯವಾಗಿದೆ. ಅಕಾಡೆಮಿ ಅಧ್ಯಕ್ಷನಾಗುವ ಮುನ್ನ ಹೇಳಿದಂತಹ ಮಾತುಗಳನ್ನು ನೆರವೇರಿಸಲು ಸಾಧ್ಯವಾಗಲಿಲ್ಲ ಎಂದರು.

ಪತ್ರಕರ್ತ ಮನೋಹರ್ ಪ್ರಸಾದ್ ಮಾತನಾಡಿ, ಉಳ್ಳಾಲದಲ್ಲಿ ಮೂವರು ಅಬ್ಬಕ್ಕೆಯರು ಇದ್ದರು. ಮೂರನೇ ಅಬ್ಬಕ್ಕಳ ಕುರಿತು ಬರೆದಿರುವ ವಿಚಾರಗಳು ಸದ್ಯ ಪ್ರಚಲಿತದಲ್ಲಿವೆ ಎಂದರು.

ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್‌ ಇಂದಾಜೆ, ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್, ಸೌತ್ ಕೆನರಾ ಫೊಟೋಗ್ರಾಫರ್ಸ್ ಅಸೋಸಿಯೇಷನ್ ಅಧ್ಯಕ್ಷ ಧನಂಜಯ ರಾವ್, ಮುಖಂಡರಾದ ಸದಾನಂದ ಬಂಗೇರ, ಭಗವಾನ್ ದಾಸ್, ದಿನೇಶ್ ರೈ ಕಡಬ, ಧನಲಕ್ಷ್ಮೀ ಗಟ್ಟಿ, ದೇವಕಿ ಆರ್. ಉಳ್ಳಾಲ್, ಶಶಿಕಾಂತಿ ಉಳ್ಳಾಲ್, ಆನಂದ ಕೆ. ಅಸೈಗೋಳಿ ಇದ್ದರು.

ಸಮಿತಿಯ ದಿನಕರ್ ಉಳ್ಳಾಲ್ , ಕೆ. ಜಯರಾಮ ಶೆಟ್ಟಿ, ಕೆ.ಎಂ.ಕೆ. ಮಂಜನಾಡಿ , ಮಲ್ಲಿಕಾ ಭಂಡಾರಿ, ವಾಸುದೇವ ರಾವ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT