ಕಾಸರಗೋಡು: ಜಿಲ್ಲೆಯಲ್ಲಿ ಗುರುವಾರ ರಾತ್ರಿ ಸುರಿದ ಬಿರುಸಿನ ಮಳೆಗೆ ವಿವಿಧೆಡೆ ಹಾನಿಯಾಗಿವೆ.

ಮರಗಳು ಉರುಳಿದ್ದು, ಸಿಡಿಲಿನ ಆಘಾತಕ್ಕೆ ಕೆಲವು ಮನೆ, ಕೃಷಿಗೂ ಹಾನಿಯಾಗಿವೆ.

ಕಾಞಂಗಾಡಿನ ಕೊವ್ವಲ್ ಸ್ಟ್ರೀಟ್ ನಿವಾಸಿ ಕಣ್ಣನ್ ಎಂಬುವರ ಪತ್ನಿ ಸಾವಿತ್ರಿ ಸಿಡಿಲಿನ ಆಘಾತಕ್ಕೆ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಪಿಲಿಕೋಡು ಎಚ್ಚಿಕೊವ್ವಲ್ ಎಂಬಲ್ಲಿ ಸಿಡಿಲ ಆಘಾತಕ್ಕೆ ಹಲವು ಮನೆಗಳಲ್ಲಿ ವಿದ್ಯುತ್ ಉಪಕರಣಗಳು ಸುಟ್ಟುಹೋಗಿವೆ. ಚೆರು ವತ್ತೂರು ಸರ್ಕಾರಿ ಶಾಲೆಯ ಮುಂಭಾ ಗಕ್ಕೆ ಮರ ಉರುಳಿ ಹಾನಿಯಾಗಿದೆ. ಮಯ್ಯಿಚ್ಚ ಅಂಬಲಂ ಗೇಟ್ ನಿವಾಸಿ ಕಂಡಕೋರನ್ ಅವರ ಮನೆ ಮೇಲೆ ತೆಂಗಿನಮರ ಬಿದ್ದು ಹಾನಿಯಾಗಿದೆ.

ಕಾಞಂಗಾಡು-ಪಾಣತ್ತೂರು ರಾಜ್ಯ ಹೆದ್ದಾರಿಯ ಗುರುಪುರಂನಲ್ಲಿ ಮರ ಉರುಳಿ ವಾಹನ ಸಂಚಾರಕ್ಕೆ ತೊಡಕಾಗಿತ್ತು. ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಮರ ತೆರವುಗೊಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-29-160901060

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.