ಕಾಸರಗೋಡು: ಜಿಲ್ಲೆಯಲ್ಲಿ ಮಂಗಳವಾರ ಸುರಿದ ಬಿರುಸಿನ ಮಳೆಗೆ ವಿವಿಧೆಡೆ ಹಾನಿಯಾಗಿದೆ.

ಮಣಿಯಂಪಾರೆಯಲ್ಲಿ ಸಂಚರಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದು ಹಾನಿಯಾಗಿದೆ. ಚಾಲಕ ಪೆರ್ಲ ಬಳಿಯ ಬರೆಕೆರೆ ನಿವಾಸಿ ಡಾ. ವಿಷ್ಣುಪ್ರಕಾಶ್ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಅವರು ಸೀತಾಂಗೋಳಿಯ ಕ್ಲಿನಿಕ್ನಿಂದ ಮನೆಗೆ ಮರಳುತ್ತಿದ್ದ ವೇಳೆ ಘಟನೆ ನಡೆದಿದೆ. ವಿದ್ಯುತ್ ತಂತಿಗಳು ಕಡಿದುಹೋಗಿವೆ.

ನಗರದ ಕಸಬ ಕಡಪ್ಪುರಂನ ಮೀನಾಕ್ಷಿ ಎಂಬುವರ ಹೆಂಚಿನ ಮನೆ ಹಾನಿಗೊಂಡಿದೆ. ವಿದ್ಯುತ್ ಸಾಮಾಗ್ರಿ ಸುಟ್ಟುಹೋಗಿವೆ. ಮಂಗಲ್ಪಾಡಿಯ ಕೃಷ್ಣನಗರದ ಭಾಸ್ಕರ ಕೊಂಡೆವೂರು ಎಂಬುವರ ಮನೆಯ ಗೋಡೆ ಸಿಡಿಲಿನ ಆಘಾತಕ್ಕೆ ಬಿರುಕು ಬಿಟ್ಟಿದೆ. ವಿದ್ಯುತ್ ಉಪಕರಣಗಳು ಸುಟ್ಟು ಹೋಗಿವೆ. ಇಲ್ಲಿನ ನಿವಾಸಿಗಳಾದ ಪ್ರಭಾಕರ, ಸುಕುಮಾರ, ಮಾಧವ ಎಂಬುವರ ಮನೆಯ ವಿದ್ಯುತ್ ಉಪಕರಣಗಳು ಸುಟ್ಟು ಹೋಗಿವೆ. ಕುಂಬಳೆ ಬಳಿಯ ಕೊಡ್ಯಮೆಯಲ್ಲಿ ಮರಗಳು ಮಗುಚಿ ವಿದ್ಯುತ್ ಕಂಬಗಳು ಉರುಳಿ, ತಂತಿಗಳು ಕಡಿದು ಬಿದ್ದಿವೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-29-1327129568

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.