ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿ.13ರಿಂದ ರಾಷ್ಟ್ರೀಯ ವಿಚಾರಸಂಕಿರಣ

ಕಾಸರಗೋಡು: ಕೇರಳ ತುಳು ಅಕಾಡೆಮಿ ಸಭೆ
Last Updated 8 ನವೆಂಬರ್ 2019, 12:42 IST
ಅಕ್ಷರ ಗಾತ್ರ

ಕಾಸರಗೋಡು: ಕೇರಳ ತುಳು ಅಕಾಡೆಮಿ ವತಿಯಿಂದ ಡಿಸೆಂಬರ್‌ 13,14ರಂದು ರಾಷ್ಟ್ರೀಯ ಮಟ್ಟದ ವಿಚಾರಸಂಕಿರಣ
ನಡೆಯಲಿದೆ. ತುಳುವರ ಸಂಗಮ, ಬಹುಭಾಷಾ ವಿಚಾರಸಂಕಿರಣ,ತುಳು ಕಲಾ-ಸಾಂಸ್ಕೃತಿಕ ಪ್ರದರ್ಶನ ಜರುಗಲಿದೆ. ‌

ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಕೇರಳ ತುಳು ಅಕಾಡೆಮಿಯ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನಕೈಗೊಳ್ಳಲಾಗಿದೆ. ಅಧ್ಯಕ್ಷ ಉಮೇಶ್ ಎಂ.ಸಾಲ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಹೆಚ್ಚುವರಿ ಜಿಲ್ಲಾಧಿಕಾರಿ ಅಜೇಶ್ ಪಾಲ್ಗೊಂಡಿದ್ದರು.

ಅಕಾಡೆಮಿಯ ತುಳು ಭವನ ನಿರ್ಮಾಣ ಅಂತಿಮ ಹಂತದಲ್ಲಿದ್ದು, 2020 ಜನವರಿ ತಿಂಗಳ ಮೊದಲ ವಾರದಲ್ಲಿ ಉದ್ಘಾಟಿಸುವ ಉದ್ದೇಶವಿದೆ ಎಂದರು. ಕಾರ್ಯದರ್ಶಿ ವಿಜಯಕುಮಾರ್ ಪಾವಲ ಮುಂಗಡಪತ್ರ ಮಂಡಿಸಿದರು.

ಕಲ್ಚರಲ್ ಥಿಯೇಟರ್, ಆವರಣಗೋಡೆ, ಪುರಾತನ ತುಳು ಸಂಸ್ಕೃತಿಗೆ ಸಂಬಂಧಿಸಿದ ವಸ್ತು ಸಂಗ್ರಹಾಲಯ, ರಂಗಮಂದಿರ, ತುಳು ಸಾಹಿತಿಗಳಿಗೆ ಪ್ರೋತ್ಸಾಹ, ಪುಸ್ತಕ ಪ್ರಕಟಣೆ, ತುಳು ಸಾಹಿತ್ಯ ಗೋಷ್ಠಿಗಳು, ತುಳು ಭಾಷಾ ಕಲಿಕಾ ಶಿಬಿರ, ಕಂಬಳ, ಗ್ರಾಮೋತ್ಸವಗಳಿಗೆ ಪ್ರೋತ್ಸಾಹ, ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ತುಳು ಲಿಪಿ ಕಲಿಕಾ ಶಿಬಿರಗಳು, ತುಳು ಹಬ್ಬ ಹರಿದಿನಗಳ ಆಚರಣೆಗೆ ಯೋಜನೆ ಮುಂಗಡಪತ್ರದಲ್ಲಿ ಸಿದ್ಧಪಡಿಸಲಾಗಿದೆ. ಇವುಗಳಬಗ್ಗೆ ಚರ್ಚೆ ನಡೆಸಿ ಅಂಗೀಕಾರ ಮತ್ತು ಅನುದಾನಕ್ಕಾಗಿ
ಸರಕಾರಕ್ಕೆ ಸಲ್ಲಿಸಲು ತೀರ್ಮಾನಿಸಲಾಗಿದೆ. ಡಿಸೆಂಬರ್ ತಿಂಗಳ ಕೊನೆಯಲ್ಲಿ ಬೆಳ್ಳೂರು ಪ್ರದೇಶದಲ್ಲಿ ದಿ.ವೆಂಕಟರಾಜ ಪುಣಿಂಚಿತ್ತಾಯ ಅವರ ಸಂಸ್ಮರಣೆ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT