ಕಾಸರಗೋಡು: ಜಿಲ್ಲೆಯಲ್ಲಿ ವಿಧಾನಸಭೆ ಚುನಾವಣೆಯ ಮತದಾನ ಗುರುವಾರ ಬಿರುಸಿನಿಂದ ನಡೆಯಿತು. ಬಹುತೇಕ ಮತಗಟ್ಟೆಗಳಲ್ಲಿ ಬೆಳಿಗ್ಗೆಯಿಂದಲೇ ಮತದಾತರ ಸಾಲು ಕಂಡುಬಂದಿತ್ತು.

ಮತಯಂತ್ರ ಬದಲಾವಣೆ: ಕೆಲವು ಮತಗಟ್ಟೆಗಳಲ್ಲಿ ಮತಯಂತ್ರ ಕೆಟ್ಟುಹೋದ ಕಾರಣ ಮತದಾನ ವಿಳಂಬವಾಗಿತ್ತು. ಮಂಜೇಶ್ವರ ವಿಧಾನಸಭೆ ಕ್ಷೇತ್ರದ 4 ಮತಗಟ್ಟೆಗಳಲ್ಲಿ ಈ ಸಮಸ್ಯೆ ಉಂಟಾಗಿತ್ತು. ಮಂಗಲ್ಪಾಡಿ ಗ್ರಾಮಪಂಚಾಯಿತಿಯ ಮಂಗಲ್ಪಾಡಿ ಸರ್ಕಾರಿ ಶಾಲೆಯ 101ನೇ ಮತಗಟ್ಟೆ, ಉಪ್ಪಳ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ 77ನೇ ಮತಗಟ್ಟೆ, ಪೈವಳಿಕೆ ಗ್ರಾಮಪಂಚಾಯಿತಿಯ ಕನಿಯಾಲ ಅಂಗನವಾಡಿಯ 145ನೇ ಮತಗಟ್ಟೆ, ಮೀಂಜ ಗ್ರಾಮ ಪಂಚಾಯಿತಿಯ ಧರ್ಮನಗರ ಅಂಗನವಾಡಿಯ 66ನೇ ಮತಗಟ್ಟೆ ಸಹಿತ ಕೆಲವು ಕಡೆ ಸಮಸ್ಯೆಯಾಗಿತ್ತು. ಮತಯಂತ್ರ ಬದಲಿಸಿ ಸಮಸ್ಯೆ ನಿವಾರಿಸಲಾಯಿತು.

ಅಕ್ರಮ ಮತದಾನಕ್ಕೆ ಯತ್ನ–ಬಂಧನ: ಮಂಜೇಶ್ವರ ವಿಧಾನಸಭೆ ಕ್ಷೇತ್ರದ 128ನೇ ಮತಗಟ್ಟೆ ಕಯ್ಯಾರಿನಲ್ಲಿ ಅಕ್ರಮ ಮತದಾನ ನಡೆಸಲು ಯತ್ನಿಸಿದ ಆರೋಪದಲ್ಲಿ ಜಾಫರ್ ಎಂಬಾತನನ್ನು ಮಂಜೇಶ್ವರ ಪೊಲೀಸರು ಬಂಧಿಸಿ ದರು. ಕೊಲ್ಲಿರಾಷ್ಟ್ರದಲ್ಲಿರುವ ಖಾಲಿದ್ ಎಂಬುವರ ಮತವನ್ನು ಅವರು ಅಕ್ರ ಮವಾಗಿ ಚಲಾಯಿಸಲು ಯತ್ನಿಸಿದ್ದರು ಎಂದು ಪೊಲೀಸರು ತಿಳಿಸಿದ್ದರೆ.

ಮಂಜೇಶ್ವರ ವಿಧಾನಸಭೆ ಕ್ಷೇತ್ರದ 33 ಮತಗಟ್ಟೆಗಳಲ್ಲಿ ಅಕ್ರಮ ಮತದಾನ ನಡೆದಿವೆ ಎಂದು ಎನ್ಡಿಎ ಅಭ್ಯರ್ಥಿ ಕೆ. ಸುರೇಂದ್ರನ್ ಆರೋಪಿಸಿದ್ದಾರೆ.

ಇವರಲ್ಲಿ ಬಹುತೇಕ ಮಂದಿ ವಿದೇಶದಲ್ಲಿರುವವರ ದಾಖಲೆ ಪತ್ರಗಳನ್ನು ಪಡೆದುಕೊಂಡು ಅಕ್ರಮ ಮತದಾನ ನಡೆಸಿರುವುದಾಗಿ ಅವರು ಆರೋಪಿಸಿದರು.

ಚುನಾವಣೆ ಕರ್ತವ್ಯದಲ್ಲಿರುವ ಕೆಲವು ಸಿಬ್ಬಂದಿ ಸಹಕಾರ ನೀಡಿದ್ದು, ಈ ಸಂಬಂಧ ಚುನಾವಣೆ ಆಯೋಗಕ್ಕೆ ದೂರು ಸಲ್ಲಿಸುವುದಾಗಿ ತಿಳಿಸಿದರು.

6,460 ಮಂದಿಯಿಂದ ಅಂಚೆ ಮತದಾನ: ಜಿಲ್ಲೆಯಲ್ಲಿ ಈ ಬಾರಿ 6,450 ಮಂದಿ ಅಂಚೆ ಮತದಾನ ಮಾಡಿದ್ದಾರೆ. ಅಂಚೆ ಮತದಾನ ಕೇಂದ್ರದಿಂದ 1,335 ಮಂದಿ, ಮತದಾನ ಫೆಸಿಲಿಟೇಷನ್ ಮೂಲಕ 4,233 ಮಂದಿ, ಡೆಸಿಗ್ನೇಟೆಡ್ ಪೋಟರ್ ಫೆಸಿಲಿಟೇಷನ್ ಸೆಂಟರ್ ಮೂಲಕ 892 ಮಂದಿ ಹಕ್ಕು ಚಲಾಯಿ ಸಿದ್ದಾರೆ. ಜಿಲ್ಲೆಯಲ್ಲಿ ಶೇ 78.07 ಮತದಾನ ನಡೆದಿದೆ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ. ಮಂಜೇಶ್ವರದಲ್ಲಿ ಶೇ 78.33 ಮತದಾನ, ಕಾಸರಗೋಡಿನಲ್ಲಿ ಶೇ 78.81 ಮತದಾನ, ಉದುಮಾದಲ್ಲಿ ಶೇ 77.81, ಕಾಞಂಗಾಡಿನಲ್ಲಿ ಶೇ 76.69, ತ್ರಿಕರಿಪುರದಲ್ಲಿ ಶೇ 78.8 ಮತದಾನ ನಡೆದಿದೆ.

ಎಡನೀರು ಮಠಾಧೀಶ ಸಚ್ಚಿದಾನಂದ ಭಾರತಿ ಸ್ವಾಮೀಜಿ ಗುರುವಾರ ಎಡನೀರು ಸ್ವಾಮೀಜೀಸ್ ಹೈಯರ್ ಸೆಕೆಂಡರಿ ಶಾಲೆಯ 149ನೇ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260410-29-929471285

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.