ಮಂಗಳೂರು: ಕಟೀಲಿನಲ್ಲಿರುವ ದುರ್ಗಾ ಸಂಜೀವಿನಿ ಮಣಿಪಾಲ್ ಆಸ್ಪತ್ರೆಯು 10 ಸಾವಿರ ಡಯಾಲಿಸಿಸ್ ಚಿಕಿತ್ಸೆಗಳನ್ನು ಪೂರ್ಣಗೊಳಿಸುವ ಮೂಲಕ ಆರೋಗ್ಯ ಸೇವಾ ಕ್ಷೇತ್ರದಲ್ಲಿ ಸಾಧನೆ ಮಾಡಿದೆ.

ಈ ಆಸ್ಪತ್ರೆಯಲ್ಲಿ 2022ರ ಜನವರಿಯಿಂದ ಡಯಾಲಿಸಿಸ್ ಸೇವೆ ಆರಂಭವಾಗಿತ್ತು. 10 ಸಾವಿರ ಚಿಕಿತ್ಸೆಯ ಮೂಲಕ ಗ್ರಾಮೀಣ ಹಾಗೂ ಹಿಂದುಳಿದ ಸಮುದಾಯಗಳಿಗೆ ಗುಣಮಟ್ಟದ ಮೂತ್ರಪಿಂಡ ಚಿಕಿತ್ಸೆಯನ್ನು ಸುಲಭ ಹಾಗೂ ಕೈಗೆಟಕುವ ದರದಲ್ಲಿ ಒದಗಿಸುವ ಬದ್ಧತೆಯನ್ನು ಪ್ರದರ್ಶಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಡಯಾಲಿಸಿಸ್ ಸೇವೆಗಳನ್ನು ನೀಡುವ ವಿಶೇಷ ಡಯಾಲಿಸಿಸ್ ಘಟಕ ಹೊಂದಿರುವ ಭಾರತದ ಅತಿ ಸಣ್ಣ ಪಟ್ಟಣಗಳಲ್ಲಿ ಒಂದು ಎಂದು ಕಟೀಲನ್ನು ಪರಿಗಣಿಸಲಾಗಿದೆ. ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಇಲ್ಲಿ ಪ್ರತಿ ಡಯಾಲಿಸಿಸ್ಗೆ ₹300 ಹಾಗೂ ಇತರ ರೋಗಿಗಳಿಗೆ ₹600 ಮಾತ್ರ ವಿಧಿಸಲಾಗುತ್ತಿದೆ. ಸಿಎಸ್ಆರ್ ಪಾಲುದಾರರು ಮತ್ತು ದಾನಿಗಳ ನೆರವಿನಿಂದ ಈ ಸೇವೆ ನೀಡಲಾಗುತ್ತಿದೆ.

‘10,000 ಡಯಾಲಿಸಿಸ್ ಚಿಕಿತ್ಸೆ ಎಂಬುದು ನಮಗೆ ಕೇವಲ ಸಂಖ್ಯೆ ಅಲ್ಲ. ಇದು ಸಾವಿರಾರು ಜೀವಗಳಿಗೆ ನೆರವಾದ ಹಾಗೂ ಸಂಕಷ್ಟದ ಸಮಯದಲ್ಲಿ ಕುಟುಂಬಗಳಿಗೆ ಬೆಂಬಲವಾದ ಮಹತ್ವದ ಸಾಧನೆ. ಗ್ರಾಮೀಣ ಭಾಗದ ಜನರಿಗೆ ಸಮೀಪದಲ್ಲೇ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಚಿಕಿತ್ಸೆ ಪಡೆಯಬೇಕು ಎಂಬುದು ನಮ್ಮ ಉದ್ದೇಶ’ ಎಂದು ದುರ್ಗಾ ಸಂಜೀವಿನಿ ಮಣಿಪಾಲ ಆಸ್ಪತ್ರೆಯ ಮುಖ್ಯ ಆಡಳಿತ ಅಧಿಕಾರಿ ಡಾ. ಶಿವಾನಂದ ಪ್ರಭು ಹೇಳಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-29-1464458115

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.