ಪುತ್ತೂರು: ತಾಲ್ಲೂಕಿನ ಕೆಯ್ಯೂರು ಗ್ರಾಮ ವ್ಯಾಪ್ತಿಯಲ್ಲಿ ಸೋಮವಾರ ಸಂಜೆ ಬೀಸಿದ ಭಾರಿ ಗಾಳಿ–ಮಳೆ ಯಿಂದಾಗಿ ಬಡ ಕುಟುಂಬದ ಮನೆಗೆ ಹಾನಿಯಾಗಿದೆ. ಚಾವಣಿಯ ಶೀಟು-ಹೆಂಚುಗಳು ಹಾರಿ ಹೋಗಿದ್ದು, ದಿನಬಳಕೆಯ ವಸ್ತುಗಳು ಹಾನಿಗೀಡಾಗಿವೆ.

ಸಣಂಗಳ ನಿವಾಸಿ ಲೀಲಾವತಿ ಯಶೋಧರ ಗೌಡ ಅವರ ವಾಸ್ತವ್ಯದ ಮನೆಯ ಸಿಮೆಂಟ್ ಶೀಟ್ ಮತ್ತು ಹೆಂಚು ಅಳವಡಿಸಿದ ಚಾವಣಿ ಹಾನಿಯಾಗಿದೆ. ಪತಿಯನ್ನು ಕಳೆದುಕೊಂಡು ಮೂವರು ಮಕ್ಕಳೊಂದಿಗೆ ಜೀವನ ಸಾಗಿಸುತ್ತಿದ್ದ ಲೀಲಾವತಿ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಘಟನಾ ಸ್ಥಳಕ್ಕೆ ಮಂಗಳವಾರ ಭೇಟಿ ನೀಡಿದ ಪುತ್ತೂರಿನ ‘ವಿಜಯ ಸಾಮ್ರಾಟ್’ ಸಂಘಟನೆಯ ಸ್ಥಾಪಕ ಸಹಜ್ ರೈ ಬಳಜ್ಜ, ಮಹಿಳೆಯ ಸಂಕಷ್ಟ ಸ್ಥಿತಿಯನ್ನು ಅರಿತು ತಕ್ಷಣವೇ ಹೊಸ ಚಾವಣಿ ನಿರ್ಮಿಸಿ ಶೀಟ್ ಅಳವಡಿಸಿಕೊಡುವುದಾಗಿ ಭರವಸೆ ನೀಡಿದರು.

ಸಂತ್ರಸ್ತೆಗೆ ಸರ್ಕಾರದಿಂದ ನೂತನ ಮನೆ ನಿರ್ಮಾಣಕ್ಕೆ ಅನುದಾನ ಪಡೆಯಲು ಪ್ರಯತ್ನಿಸಲಾಗುವುದು. ಸರ್ಕಾರದ ಅನುದಾನ ಸಿಗದೆ ಇದ್ದರೆ ಮಳೆಗಾಲದ ಬಳಿಕ ವಿಜಯ ಸಾಮ್ರಾಟ್ ಸಂಘಟನೆಯಿಂದ ಹೊಸ ಮನೆ ನಿರ್ಮಿಸಿ ಕೊಡುವುದಾಗೊ ಭರವಸೆ ನೀಡಿದರು.

ವಿಜಯ ಸಾಮ್ರಾಟ್ ಸಂಘಟನೆಯ ಪ್ರಮುಖರಾದ ರಾಜೇಶ್ ರೈ ಪರ್ಪುಂಜ, ಕೆಯ್ಯೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶರತ್ಕುಮಾರ್ ಮಾಡಾವು, ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಶರತ್ ರೈ ದೇರ್ಲ, ಸ್ಥಳೀಯರಾದ ವಿಜಯಕುಮಾರ್ ಸಣಂಗಳ, ದಿನೇಶ್ ವಾಸುಕಿ, ಚಂದ್ರಶೇಖರ್ ರೈ ಸಣಂಗಳ, ಹರ್ಷಕುಮಾರ್, ಸೃಜನ್ ರೈ ಜತೆಗಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-29-933676789

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.