ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿಕ್‌ ಬಾಕ್ಸಿಂಗ್: ಮಂಗಳೂರಿಗೆ 2 ಬಹುಮಾನ

Last Updated 18 ಸೆಪ್ಟೆಂಬರ್ 2021, 2:59 IST
ಅಕ್ಷರ ಗಾತ್ರ

ಮಂಗಳೂರು: ವರ್ಲ್ಡ್ ಕಿಕ್‌ ಬಾಕ್ಸಿಂಗ್ ನೆಟ್‌ವರ್ಕ್ ಇಂಡಿಯಾ ಸಂಸ್ಥೆಯು ಈಚೆಗೆ ಬೆಂಗಳೂರಿನಲ್ಲಿ ಆಯೋಜಿಸಿದ್ದ ‘ಪ್ರೊ–ಯಾಮ್ ನ್ಯಾಷನಲ್ ಟೈಟಲ್ ಕಿಕ್‌ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಮಂಗಳೂರಿನ ಸುಕೀರ್ತ್ ಕುಲಾಲ್ ಮತ್ತು ಪ್ರತೀಕ್ ಸುರತ್ಕಲ್ ಅವರು ನ್ಯಾಷನಲ್ ಕಿಕ್‌ಬಾಕ್ಸಿಂಗ್ ಲೈಟ್ ಹೆವಿವೇಟ್ ಮತ್ತು ಫೆದರ್‌ವೇಟ್ ಚಾಂಪಿಯನ್ ಪಡೆದಿದ್ದಾರೆ.

ಕಾಂಬ್ಯಾಟ್ ಸ್ಪೋರ್ಟ್ಸ್‌ ಅಕಾಡೆಮಿ ಮಂಕಿ ಮೇಹಮ್ ಫೈಟ್ ಕ್ಲಬ್‌ನ ಮುಖ್ಯ ಶಿಕ್ಷಕ ನಿತೇಶ್ ಚಂದ್ರಕುಮಾರ್ ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು. ಆತ್ಮ ರಕ್ಷಣೆ, ಸಾಮಾನ್ಯ ಫಿಟ್‌ನೆಸ್ ಅಥವಾ ಯುದ್ಧ ಕ್ರೀಡೆಯಾಗಿ ಕಿಕ್‌ ಬಾಕ್ಸಿಂಗ್ ಅನ್ನು ಅಭ್ಯಾಸ ಮಾಡುತ್ತಾರೆ. ಈ ಕ್ರೀಡೆ ಭಾರತದಲ್ಲಿ ವೇಗವಾಗಿ ಬೆಳೆಯುತ್ತಿದೆ. ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯಿಂದ ಒಲಿಂಪಿಕ್ ಕ್ರೀಡೆಯಾಗಿ ಇದು ಮನ್ನಣೆ ಪಡೆದಿದೆ ಎಂದು ಅವರು ತಿಳಿಸಿದರು. ಅಬ್ದುಲ್ ರಜಾಕ್, ಇಬ್ರಾಹಿಂ ತೌಸಿಫ್ ಅಹಮ್ಮದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT