ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿನ್ನಿಗೋಳಿ: ಬಿಷಪ್‌ರಿಗೆ ನಾಗರಿಕರ ಸನ್ಮಾನ

Last Updated 4 ಜುಲೈ 2018, 12:53 IST
ಅಕ್ಷರ ಗಾತ್ರ

ಮೂಲ್ಕಿ: ಮಂಗಳೂರು ಧರ್ಮ ಪ್ರಾಂತ್ಯದ ನೂತನ ಬಿಷಪ್ ಆಗಿ ಆಯ್ಕೆಯಾಗಿರುವ ಪೀಟರ್ ಪಾವ್ಲ್ ಸಾಲ್ಡಾನಾ ಅವರನ್ನು ಬುಧವಾರ ಕಿನ್ನಿಗೋಳಿಯ ನಾಗರಿಕರು ವಿಶೇಷವಾಗಿ ಅವರ ಮೂಲ ಮನೆ ಐಕಳದಲ್ಲಿ ಸನ್ಮಾನಿಸಿದರು.

ಐಕಳ ಕಜೆಗುರಿಯ ಸಮೀಪದ ನೆಲ್ಲಿಗುಡ್ಡೆಯಲ್ಲಿನ ಸಹೋದರನು ನೆಲೆಸಿರುವ ಮನೆಯಲ್ಲಿ ಪಾವ್ಲ್ ಸಾಲ್ಡಾನಾ ಅವರು ಮಂಗಳವಾರ ತಂಗಿದ್ದು, ಬೆಳಿಗ್ಗೆ ಕಿನ್ನಿಗೋಳಿಯ ನಾಗರಿಕರ ನಿಯೋಗದಲ್ಲಿ ಜೊಸ್ಸಿ ಪಿಂಟೋ, ಶರತ್ ಶೆಟ್ಟಿ, ಮಿಥುನ್ ಕೊಡೆತ್ತೂರು, ರಘುನಾಥ ಕಾಮತ್, ಪೃಥ್ವಿರಾಜ್ ಅಚಾರ್ಯ, ಪ್ರಕಾಶ್ ಆಚಾರ್ಯ, ದಾಮೋದರ ಶೆಟ್ಟಿ ಭೇಟಿ ನೀಡಿ ಸನ್ಮಾನಿಸಿದರು.

ನೂತನ ಬಿಷಪ್‌ ಡಾ.ಅಲೋಶಿಯಸ್ ಪಾವ್ಲ್ ಡಿಸೋಜ ಅವರೊಂದಿಗೆ ದಾಮಸ್ಕಟ್ಟೆಯ ಕಿರೆಂ ಚರ್ಚ್‌ಗೆ ಭೇಟಿ ನೀಡಿದ್ದ ಸಾಲ್ಡಾನಾ ಅವರು ವಿಶೇಷ ಪೂಜೆಯನ್ನು ಸಲ್ಲಿಸಿದರು. ತಮ್ಮ ಬಾಲ್ಯದ ಹಿಂದಿನ ನೆನಪನ್ನು ಹುಟ್ಟಿದ ಮನೆಯಲ್ಲಿ ಕುಟುಂಬಿಕರೊಂದಿಗೆ ಹಂಚಿಕೊಂಡ ಅವರು ತಮ್ಮ ಸೇವೆಯಿಂದಲೇ ಈ ಸ್ಥಾನಮಾನ ಸಿಕ್ಕಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT