ಸುಬ್ರಹ್ಮಣ್ಯ: ಕೊಲ್ಲಮೊಗ್ರ ಗ್ರಾಮದ ಮಿತ್ತೋಡಿಯಲ್ಲಿ ಸೇತುವೆ ಕಾಮಗಾರಿ ನಾಲ್ಕು ವರ್ಷಗಳಿಂದ ಅರ್ಧಕ್ಕೆ ನಿಂತಿದ್ದು, ಗ್ರಾಮಸ್ಥರು 2.5 ಕಿ.ಮೀ ಸುತ್ತಿ ಬರುವುದು ಮುಂದುವರೆದಿದೆ.

ಇಲ್ಲಿಗೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಭೇಟಿ ನೀಡಿ ಹೋಗಿದ್ದಾರೆ. ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕೆಲಸ ಮಾಡಿಸುವ ಭರವಸೆ ನೀಡಿದ್ದರು. ಅಧಿಕಾರಿಗಳ ಗ್ರಾಮ ವಾಸ್ತವ್ಯದ ಬಳಿಕ ಉಪವಿಭಾಗಾಧಿಕಾರಿ ಸ್ಥಳ ಪರಿಶೀಲನೆ ನಡೆಸಿ ಭರವಸೆ ನೀಡಿದ್ದರೂ ಸೇತುವೆ ಪೂರ್ಣಗೊಂಡಿಲ್ಲ.

2013ರಲ್ಲಿ ₹11 ಲಕ್ಷ ವೆಚ್ಚದಲ್ಲಿ ಪಿಡಬ್ಲ್ಯುಡಿ ಮುಖಾಂತರ ಮಿತ್ತೋಡಿ ಯಲ್ಲಿ ಚಿಕ್ಕ ಸೇತುವೆಯೊಂದನ್ನು ಮಾಡಲಾಗಿತ್ತು. ಆದರೆ ಸೇತುವೆಯ ಎರಡು ಬದಿಯಲ್ಲಿ ಸಂಪರ್ಕ ರಸ್ತೆಗಾಗಿ ಮಣ್ಣು ತುಂಬಿಸಲು ಅನುದಾನವಿಲ್ಲದೆ ಹಾಗೆ ಬಿಡಲಾಗಿತ್ತು. ಕೆಲ ವರ್ಷದ ಬಳಿಕ ಸ್ಥಳೀಯರು ಸೇರಿ, ಗುತ್ತಿಗೆದಾರರಿಗೆ ವಿನಂತಿ ಮಾಡಿಕೊಂಡು ಅವರು ಎರಡೂ ಕಡೆ ಮಣ್ಣು ಸುರಿಸಿದರು. ಬಳಿಕ ಸೇತುವೆ ಉಪಯೋಗಕ್ಕೆ ಬಂದಿತು. ಆದರೆ 2022ರಲ್ಲಿ ಸುರಿದ ಭಾರಿ ಮಳೆಗೆ ಸೇತುವೆಯ ಒಂದು ಭಾಗದ ರಸ್ತೆ ಕೊಚ್ಚಿ ಹೋಗಿದೆ. ಇದನ್ನು ಸರಿಪಡಿಸಲು ಮಳೆ ಹಾನಿ ಅನುದಾನದಡಿ ₹10 ಲಕ್ಷ ವೆಚ್ಚದಲ್ಲಿ ಕೆಆರ್ಐಡಿಎಲ್ ಮೂಲಕ ಸೇತುವೆ ಕೆಲಸ ಆರಂಭಿಸಿ ಎರಡು ಪಿಲ್ಲರ್ಗಳನ್ನು ಹಾಕಲಾಗಿದೆ. ಪಿಲ್ಲರ್ ನಿರ್ಮಾಣಗೊಂಡು ವರ್ಷಗಳೇ ಕಳೆಯುತ್ತ ಬಂದಿವೆ. ಆದರೂ ಸೇತುವೆ ಪೂರ್ಣಗೊಳಿಸುವ ಕಾರ್ಯ ನಡೆದಿಲ್ಲ.

ಮಿತ್ತೋಡಿ ಭಾಗದಲ್ಲಿ ಪುರುಷ ದೈವಸ್ಥಾನವಿದೆ. ಪ್ರತಿ ವರ್ಷ ಇಲ್ಲಿ ನೇಮೋತ್ಸವ ನಡೆಯುತ್ತದೆ. ಈ ಭಾಗದ ಮಿತ್ತೋಡಿ ಬೈಲು, ಅಂಬೆಕಲ್ಲು, ಗೊಳ್ಯಾಡಿ, ಜಾಲುಮನೆ ಹೀಗೆ 50ಕ್ಕೂ ಹೆಚ್ಚು ಮನೆಗಳಿವೆ. ಇಲ್ಲಿ ಉದ್ಯೋಗಕ್ಕೆ ತೆರಳುವ ಜನರಿದ್ದಾರೆ. ಪೇಟೆಗೆ ಬರುವ ಕೃಷಿಕರಿದ್ದಾರೆ. ಶಾಲೆಗೆ ಹೋಗುವ ಮಕ್ಕಳಿ ದ್ದಾರೆ. ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗಮನಹರಿಸಿ ಸೇತುವೆ ಪೂರ್ಣಗೊಳಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-29-2053280055

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.