ಬಂಟ್ವಾಳ: ಇಲ್ಲಿನ ಸಿದ್ಧಕಟ್ಟೆ ಸಮೀಪದ ಕೋರ್ಯಾರು ದುರ್ಗಾ ಮಹಮ್ಮಾಯಿ ದೇವಸ್ಥಾನದಲ್ಲಿ ಮೇ 2ರವರೆಗೆ ನಡೆಯಲಿರುವ ದೇವರ ಬಿಂಬ ಪುನರ್ ಪ್ರತಿಷ್ಠೆ ಬ್ರಹ್ಮಕಲಶೋತ್ಸವ ಪ್ರಯುಕ್ತ ಹೊರೆಕಾಣಿಕೆ ಮೆರವಣಿಗೆ ಭಾನುವಾರ ಸಂಜೆ ನಡೆಯಿತು.

ಸಿದ್ಧಕಟ್ಟೆ ನಲ್ಲೂರಂಗಡಿ ಜೈನ ಬಸದಿ ಬಳಿ ಸುಬ್ರಹ್ಮಣ್ಯದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಮತ್ತು ಮಾಣಿಲ ಮೋಹನದಾಸ ಪರಮಹಂಸ ಸ್ವಾಮೀಜಿ ಮೆರವಣಿಗೆಗೆ ಚಾಲನೆ ನೀಡಿದರು.

ವಿವಿಧ ಭಜನಾ ತಂಡಗಳ ನೃತ್ಯ, ಬ್ಯಾಂಡ್ ವಾದ್ಯ, ಚೆಂಡೆ, ಕೊಂಬು, ಗೊಂಬೆ ಕುಣಿತ ಮೆರವಣಿಗೆಯಲ್ಲಿ ಸಾಗಿದವು.

ಸಿದ್ಧಕಟ್ಟೆ ವಲಯ ಬಂಟರ ಸಂಘ ಮತ್ತು ಬಿಲ್ಲವ ಸಂಘ, ಪದ್ಮಶಾಲಿ ಸಂಘ, ಶಾರದೋತ್ಸವ, ಗಣೇಶೋತ್ಸವ ಸಮಿತಿ ಸಂಘಟನೆಗಳಿಂದ ಅಕ್ಕಿ, ತೆಂಗಿನಕಾಯಿ, ಸೀಯಾಳ, ಹಿಂಗಾರ, ಬಾಳೆಗೊನೆ, ಬಾಳೆ ಎಲೆ, ತರಕಾರಿ ಸಮರ್ಪಿಸಿದರು.

ಸಂಗಬೆಟ್ಟು ವೀರಭದ್ರ ದೇವಸ್ಥಾನದ ಪ್ರಧಾನ ಅರ್ಚಕ ಪ್ರಭಾಕರ ಐಗಳ್, ಗುರಿಕಾರ ಚಂದ್ರಹಾಸ್ ಶೆಟ್ಟಿಗಾರ್, ಹಿರಿಯ ವೈದ್ಯ ಡಾ.ಪ್ರಭಾಚಂದ್ರ ಜೈನ್, ಡಾ.ಸುದೀಪ್ ಕುಮಾರ್ ಜೈನ್, ಅರ್ಕಕೀರ್ತಿ ಇಂದ್ರ, ಹರ್ಷೇಂದ್ರ ಇಂದ್ರ, ಪ್ರಕಾಶ್ ಜೈನ್ ಜಂಕಲ, ರತ್ನಕುಮಾರ್ ಚೌಟ, ವಲಯ ಬಿಲ್ಲವ ಸಂಘದ ಅಧ್ಯಕ್ಷ ಕಿರಣ್ ಕುಮಾರ್ ಮಂಜಿಲ, ಕೃಷಿಕ ಜಗತ್ಪಾಲ ಶೆಟ್ಟಿ ಉಮನೊಟ್ಟು, ಸೀತಾರಾಮ ಶೆಟ್ಟಿ, ಮಹಾವೀರ ಜೈನ್, ಸಂತೋಷ್ ಕುಮಾರ್ ಬೆಟ್ಟು, ಪ್ರಭಾಕರ ಆಚಾರ್ಯ, ವಾಸುದೇವ ಆಚಾರ್ಯ, ಸದಾನಂದ ಕುಲಾಲ್, ರೊನಾಲ್ಡ್ ಮೊರಾಸ್, ಜಗದೀಶ್ ಕೊಯಿಲ, ದಿನೇಶ್ ಶೆಟ್ಟಿಗಾರ್, ನೋಣಯ ಶೆಟ್ಟಿಗಾರ್, ಸಂತೋಷ್ ಕುಮಾರ್ ಚೌಟ, ಯೋಗೀಶ್ ಆಚಾರ್ಯ ಎಲ್ಪೇಲು, ಪ್ರವೀಣ್ ಶೆಟ್ಟಿ, ದೇವರಾಜ್ ಸಾಲ್ಯಾನ್, ಬ್ರಹ್ಮ ಕಲಶೋತ್ಸವ ಸಮಿತಿ ಅಧ್ಯಕ್ಷ ಉಮೇಶ್ ಗೌಡ ಮಂಚಕಲ್ಲು, ಗೌರವಾಧ್ಯಕ್ಷ ಪ್ರಭಾಕರ ಪ್ರಭು, ದುರ್ಗಾದಾಸ್ ಶೆಟ್ಟಿ ಕರೆಂಕಿಜೆ, ಗುರಿಕಾರ ಗೋಪಾಲ ಗೌಡ, ಓಬಯ ಗೌಡ, ಆಡಳಿತ ಮೊಕ್ತೇಸರ ಯಶೋಧರ ಗೌಡ, ಹೇಮಚಂದ್ರ ಸಿದ್ದಕಟ್ಟೆ, ರತ್ನಕುಮಾರ್ ಚೌಟ, ಸತೀಶ್ ಪೂಜಾರಿ ಅಳಕೆ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260428-29-1149887715

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.