ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದ ಅಸ್ಪೃಶ್ಯತಾ ಪ್ರಸಂಗ

7

ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದ ಅಸ್ಪೃಶ್ಯತಾ ಪ್ರಸಂಗ

Published:
Updated:
Deccan Herald

ಮಂಗಳೂರು: ‘ಎಂಟನೇ ವಯಸ್ಸಿನಲ್ಲಿದ್ದಾಗ ಅಕ್ಕನ ಜೊತೆಗೆ ದೇವಸ್ಥಾನಕ್ಕೆ ಹೋಗುತ್ತಿದ್ದೆ. ಹೊರಗೆ ಕಾದು ನಿಂತಿರುತ್ತಿದ್ದ ನಮ್ಮ ಬಳಿ ಬಂದ ಅರ್ಚಕರು ತೆಂಗಿನಕಾಯಿಗೆ ನೀರು ಚಿಮುಕಿಸಿ ಒಳಕ್ಕೆ ತೆಗೆದುಕೊಂಡು ಹೋಗುವಾಗ ನೋವಾಗುತ್ತಿತ್ತು’ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ನಗರದ ಫಾದರ್ ಮುಲ್ಲರ್ಸ್ ಸಮ್ಮೇಳನ ಸಭಾಂಗಣದಲ್ಲಿ ಭಾನುವಾರ ನಡೆದ ಯುವವಾಹಿನಿ ಕೇಂದ್ರ ಸಮಿತಿಯ 31ನೇ ವಾರ್ಷಿಕ ಸಮಾವೇಶದಲ್ಲಿ ಮಾತನಾಡುವಾಗ ಅವರು ಬಾಲ್ಯದಲ್ಲಿ ಅನುಭವಿಸಿದ್ದ ಅಸ್ಪೃಶ್ಯತೆಯ ನೋವನ್ನು ನೆನಪಿಸಿಕೊಂಡರು.

‘ಬಾಲ್ಯದಲ್ಲಿ ದೇವಸ್ಥಾನದ ಎದುರಿನಲ್ಲಿ ಅಸ್ಪೃಶ್ಯನಂತೆ ಕಾಣುತ್ತಿದ್ದಾಗ ನೋವಾಗುತ್ತಿತ್ತು. ಆದರೆ, 53ನೇ ವಯಸ್ಸಿನಲ್ಲಿ ನಾನು ಈ ರಾಜ್ಯದ ಮುಜರಾಯಿ ಖಾತೆ ಸಚಿವನಾದೆ. ಆಗ 36,000 ದೇವಸ್ಥಾನಗಳ ಆಡಳಿತ ನಿರ್ವಹಣೆ ನನ್ನ ಅಧಿಕಾರ ವ್ಯಾಪ್ತಿಯಲ್ಲಿತ್ತು. ನನ್ನನ್ನು ಹೊರಗೆ ನಿಲ್ಲಿಸಿ ತೆಂಗಿನಕಾಯಿ ಪಡೆಯುತ್ತಿದ್ದ ದೇವಸ್ಥಾನಗಳಲ್ಲೇ ವಾದ್ಯ ಘೋಷದೊಂದಿಗೆ ಒಳಕ್ಕೆ ಸ್ವಾಗತ ನೀಡಲಾಯಿತು’ ಎಂದರು.

ಆಗ ತೆಂಗಿನಕಾಯಿಗೆ ನೀರು ಸುರಿಯುತ್ತಿದ್ದವರು ಈಗ ಇದ್ದಾರೋ? ಇಲ್ಲವೋ? ಗೊತ್ತಿಲ್ಲ. ಆದರೆ, ಸಾಮಾಜಿಕ ಪರಿಸ್ಥಿತಿ ಸಾಕಷ್ಟು ಬದಲಾಗಿದೆ. ಅಸ್ಪೃಶ್ಯತೆ ಮತ್ತು ಆತಂಕದ ನಡುವೆಯೇ ಬದುಕುತ್ತಿದ್ದ ಬಿಲ್ಲವ ಸಮಾಜ ಅಭಿವೃದ್ಧಿಯ ಹಾದಿಯಲ್ಲಿದೆ ಎಂದು ಹೇಳಿದರು.

 

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !