ಕೆಆರ್‌ಐಡಿಎಲ್‌ ಠೇವಣಿ ಹಗರಣ:ಒಬ್ಬನಿಗೆ ನಿರೀಕ್ಷಣಾ ಜಾಮೀನು

7

ಕೆಆರ್‌ಐಡಿಎಲ್‌ ಠೇವಣಿ ಹಗರಣ:ಒಬ್ಬನಿಗೆ ನಿರೀಕ್ಷಣಾ ಜಾಮೀನು

Published:
Updated:

ಮಂಗಳೂರು: ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ (ಕೆಆರ್‌ಐಡಿಎಲ್‌) ₹ 55 ಕೋಟಿ ಠೇವಣಿ ಮೊತ್ತವನ್ನು ಇಂಡಿಯನ್‌ ಓವರ್‌ಸೀಸ್ ಬ್ಯಾಂಕ್‌ ಕುಳಾಯಿ ಶಾಖೆಯಿಂದ ಅಕ್ರಮವಾಗಿ ವರ್ಗಾವಣೆ ಮಾಡಿದ ಪ್ರಕರಣದ ಆರೋಪಿಯೊಬ್ಬನಿಗೆ ನಗರದ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಪಶ್ಚಿಮ ಬಂಗಾಳದ ಮನು ಬೋಳ ನಿರೀಕ್ಷಣಾ ಜಾಮೀನು ಪಡೆದಿರುವ ಆರೋಪಿ. ಕೆಆರ್‌ಐಡಿಎಲ್‌ ಠೇವಣಿ ವರ್ಗಾವಣೆ ಪ್ರಕರಣದಲ್ಲಿ ಭಾಗಿಯಾದ ಆರೋಪದ ಮೇಲೆ ಸಿಐಡಿ ಪೊಲೀಸರು ಈತನನ್ನು ವಿಚಾರಣೆ ನಡೆಸುತ್ತಿದ್ದರು. ಪೊಲೀಸರು ತನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲು ಯತ್ನಿಸುತ್ತಿದ್ದಾರೆ ಎಂದು ದೂರಿದ್ದ ಈತ, ನಿರೀಕ್ಷಣಾ ಜಾಮೀನು ಮಂಜೂರು ಮಾಡುವಂತೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ. ಆರೋಪಿಯ ಅರ್ಜಿಯನ್ನು ನ್ಯಾಯಾಲಯ ಮಾನ್ಯ ಮಾಡಿದೆ.

ಕೆಆರ್‌ಐಡಿಎಲ್‌ ₹ 55 ಕೋಟಿಯನ್ನು ಇಂಡಿಯನ್‌ ಓವರ್‌ಸೀಸ್ ಬ್ಯಾಂಕ್‌ನ ಕುಳಾಯಿ ಶಾಖೆಯಲ್ಲಿ ₹ 55 ಕೋಟಿ ಠೇವಣಿ ಇರಿಸಿತ್ತು. ನಕಲಿ ಖಾತೆಗಳನ್ನು ತೆರೆದು, ಈ ಹಣವನ್ನು ವರ್ಗಾವಣೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಬ್ಯಾಂಕ್‌ ಪ್ರಬಂಧಕರಾದ ಶಿರಿನ್‌ ಮಧುಸೂಧನ್‌, ಸೆಂಥಿಲ್‌ಕುಮಾರ್ ಸೇರಿದಂತೆ ಹಲವರನ್ನು ಬಂಧಿಸಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !