ಬುಧವಾರ, ಜುಲೈ 28, 2021
21 °C

ಬಂಟ್ವಾಳ: ಸಾರಿಗೆ ಸುರಕ್ಷಾ- ಐಸಿಯು ಬಸ್‌ಗೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಂಟ್ವಾಳ: ಕೋವಿಡ್ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ಸಂಸ್ಥೆ ವಿನ್ಯಾಸಗೊಳಿಸಿದ ವಿನೂತನ ಸಾರಿಗೆ ಸುರಕ್ಷಾ- ಐಸಿಯು ಬಸ್‌ಗೆ ಪೊಳಲಿ ಕ್ಷೇತ್ರ ಎದುರು ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತ್ತು ಸಂಸದ ನಳಿನ್ ಕುಮಾರ್ ಕಟೀಲ್ ಚಾಲನೆ ನೀಡಿದರು.

‘ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಇವರ ಮುತುವರ್ಜಿಯಿಂದ ಜಿಲ್ಲೆಯಲ್ಲೇ ಪ್ರಥಮ ಬಾರಿಗೆ ಬಂಟ್ವಾಳ ಕ್ಷೇತ್ರಕ್ಕೆ ಏಕೈಕ ಬಸ್ ಬಂದಿದೆ’ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಧಾರ್ಮಿಕ ದತ್ತಿ ಇಲಾಖೆ ಆಯುಕ್ತೆ ರೋಹಿಣಿ ಸಿಂಧೂರಿ, ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ, ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗ ನಿಯಂತ್ರಣಾಧಿಕಾರಿ ಜಯಕರ ಶೆಟ್ಟಿ, ಬಿ.ಸಿ.ರೋಡ್‌ ಘಟಕ ವ್ಯವಸ್ಥಾಪಕ ಶ್ರೀಶ ಭಟ್, ಅಧಿಕಾರಿಗಳಾದ ರಮೇಶ್ ಶೆಟ್ಟಿ, ರವೀನಾ, ದೇವಳದ ಅನುವಂಶಿಕ ಆಡಳಿತ ಮೊಕ್ತೇಸರ ಡಾ.ಮಂಜಯ್ಯ ಶೆಟ್ಟಿ, ಮೊಕ್ತೇಸರರಾದ ತಾರನಾಥ ಆಳ್ವ, ಸೂರ್ಯನಾರಾಯಣ ರಾವ್, ಸಿ‌ಒ.ಜಯಮ್ಮ, ಪ್ರಧಾನ ಅರ್ಚಕ ಮಾಧವ ಭಟ್, ಬೂಡ ಅಧ್ಯಕ್ಷ ಬಿ.ದೇವದಾಸ್ ಶೆಟ್ಟಿ, ಬಿಜೆಪಿ ಕ್ಷೇತ್ರಾಧ್ಯಕ್ಷ ದೇವಪ್ಪ ಪೂಜಾರಿ, ಪ್ರಮುಖರಾದ ಸುಲೋಚನಾ ಜಿ.ಕೆ.ಭಟ್, ಡೊಂಬಯ್ಯ ಅರಳ, ರವೀಶ್ ಶೆಟ್ಟಿ ಕರ್ಕಳ, ರಮಾನಾಥ ರಾಯಿ, ಪುರುಷೋತ್ತಮ ಶೆಟ್ಟಿ, ಪ್ರಕಾಶ್ ಅಂಚನ್, ಯಶವಂತ ನಾಯ್ಕ್ ನಗ್ರಿ, ಗಣೇಶ್ ರೈ, ಮಹೇಶ್ ಶೆಟ್ಟಿ, ಕೇಶವ ದೈಪಲ, ವೆಂಕಟೇಶ್ ನಾವಡ, ಕಿಶೋರ್ ಪಲ್ಲಿಪಾಡಿ, ಚಂದ್ರಾವತಿ, ಸುಕೇಶ್ ಚೌಟ, ಲೋಕೇಶ್ ಭರಣಿ, ಸಂಪತ್ ಕುಮಾರ್ ಶೆಟ್ಟಿ, ನಂದಕುಮಾರ್ ರೈ, ವಾಮನ ಆಚಾರ್ಯ, ಕಾರ್ತಿಕ್ ಬಲ್ಲಾಳ್, ರಾಧಕೃಷ್ಣ ತಂತ್ರಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು