ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನವರಿ 3ಕ್ಕೆ ತುಳುಸಿಮ ‘ಕುದ್ಕನ ಮದ್ಮೆ’ ತೆರೆಗೆ

Last Updated 28 ಡಿಸೆಂಬರ್ 2019, 12:50 IST
ಅಕ್ಷರ ಗಾತ್ರ

ಮಂಗಳೂರು: ನಾಯಕ ಹಾಗೂ ನಾಯಕಿ 3 ದಿನಗಳ ಕಾಲ ಅದೊಂದೇ ಉಡುಪು ಧರಿಸಿದ್ದರಂತೆ. ಜನವರಿ 3ರಂದು ತೆರೆಕಾಣಲಿರುವ ‘ಕುದ್ಕನ ಮದ್ಮೆ’ ತುಳು ಸಿನಿಮಾದ ಬಗ್ಗೆ ಚಿತ್ರ ತಂಡ ತಿಳಿಸಿದ ಮಾಹಿತಿ ಇದು.

ಅತಿವೇಗದ ಕ್ಯಾಮೆರಾ ಚಿತ್ರೀಕರಣದ ತಂತ್ರಜ್ಞಾನವನ್ನು ಈ ಚಿತ್ರದಲ್ಲಿ ಪ್ರಥಮಬಾರಿಗೆ ಅಳವಡಿಸಲಾಗಿದ್ದು, ಇದರಿಂದಾಗಿ ಕ್ಲೈಮ್ಯಾಕ್ಸ್‌ನ 20 ನಿಮಿಷದ ಅವಧಿಯ ದೃಶ್ಯಗಳಿಗಾಗಿ ನಾ ಅತಿವೇಗದ ನಟನೆಯಲ್ಲಿ ದಣಿವರಿಯದೆ ನಾಯಕ ಪೃಥ್ವಿ ಅಂಬರ್‌, ನಾಯಕಿ ಶೀತಲ್‌ ನಾಯಕ್‌ ಪಾಲ್ಗೊಂಡಿದ್ದರು’ ಎಂದು ಚಿತ್ರತಂಡದವರು ತಿಳಿಸಿದರು.

ಜನವರಿ 3: ಕಾಮಿಡಿ– ಫ್ಯಾಮಿಲಿ ಕಥಾನಕ ಪ್ರಿಯರಾದ ಪ್ರೇಕ್ಷಕರಿಗಾಗಿ ಸಜ್ಜಾಗಿರುವ ತುಳು ಸಿನಿಮಾ ‘ಕುದ್ಕನ ಮದ್ಮೆ’ ಜನವರಿ 3ರಂದು ಕರಾವಳಿಯಾದ್ಯಂತ ತೆರೆ ಕಾಣಲಿದೆ ಎಂದು ಚಿತ್ರತಂಡ ಶನಿವಾರ ತಿಳಿಸಿದೆ.

ನಿರ್ದೇಶಕ ಎ.ವಿ. ಜಯರಾಜ್‌ ಮಾಹಿತಿ ನೀಡಿ. ‘ ತುಳು ಸಿನಿಪ್ರಿಯರಿಗಾಗಿ ವಿಭಿನ್ನ ಶೈಲಿ, ತಾಂತ್ರಿಕತೆ, ವಿನ್ಯಾಸ, ಚಿತ್ರಕಥೆಯೊಂದಿಗೆ ನಿರ್ಮಾಣವಾಗಿರುವ ‘ಕುದ್ಕನ ಮದ್ಮೆ’ಯಲ್ಲಿ ತುಳುನಾಡಿನ ನಿಸರ್ಗ ಸೌಂದರ್ಯವನ್ನು ಶೋಧಿಸಿ ಅಳವಡಿಸಲಾಗಿದೆ. ಹೊರರಾಜ್ಯದ ಪ್ರದೇಶಗಳೇನೋ ಎಂದನಿಸುವಂತಿದೆ’ ಎಂದರು.

‘2.45ಗಂಟೆ ದೀರ್ಘದ ಸಿನಿಮದಲ್ಲಿ ಹಾಸ್ಯ ಪ್ರಧಾನ ಹಾಗೂ ಕೌಟುಂಬಿಕ ಕಥೆ ಆಧರಿಸಿ ಬೆಳೆಯುತ್ತದೆ, ಕುತೂಹಲದ ಎಳೆಯನ್ನು ಉಳಿಸಿಕೊಂಡೇ ಮುನ್ನಡೆದು ಪ್ರೇಕ್ಷಕರಿಗೆ ಹಿತವಾಗುವ 3 ಹಾಡುಗಳು ಅತ್ಯಾಧುನಿಕ ತಾಂತ್ರಿಕ ಎಫೆಕ್ಟ್‌ನೊಂದಿಗೆ ಮೂಡಿಬಂದಿದೆ. ಪೃಥ್ವಿ ಅಂಬರ್‌ ನಾಯಕ, ಶೀತಲ್‌ ನಾಯಕ್‌ ನಾಯಕಿಯಾಗಿದ್ದಾರೆ. ಆದರೆ, ನವೀನ್‌ ಡಿ. ಪಡೀಲ್‌, ಅರವಿಂದ ಬೋಳಾರ್‌ ಅವರಂಥ ಹಿರಿಯ ನಟರ ಮೇಳೈಸಿರುವುದರಿಂದ ಎಲ್ಲರೂ ನಾಯಕನಾಯಕಿಯರ ಪ್ರಾಧಾನ್ಯ ಹೊಂದಿವೆ’ ಎಂದು ವಿವರಿಸಿದರು.

‘ಮಳೆ ಹಾಗೂ ಬಿಸಿಲು ಒಟ್ಟಾಗಿ ಬರುವ ‘ಕುದ್ಕನ ಮದ್ಮೆ’ ಅರ್ಕಾಡಿ ಗುತ್ತಿನಲ್ಲಿ ನಡೆಯುತ್ತಿದ್ದರೂ, ಅಪರಿಚಿತನ ಪ್ರವೇಶದೊಂದಿಗೆ ಹಿಒಸ ತಿರುವು ಪಡೆಯುತ್ತದೆ ಆದರೆ ಕೊನೆಯ ಹಂತದ ವರೆಗೆ ಸಸ್ಪೆನ್ಸ್‌ ಉಳಿಸುತ್ತದೆ, ಕುತೂಹಲ ಬೆಳೆಸುತ್ತದೆ. ಪೊಳಲಿ, ಸುರತ್ಕಲ್‌,ಖಂಡಿಗೆ ಹಾಗೂ ತಣ್ಣೀರು ಬೀಚ್‌ ‍ಪ್ರದೇಶಗಳನ್ನು ಮನೋಜ್ಞವಾಗಿ ವಿಭಿನ್ನವಾಗಿ ಪಡಿಮೂಡಿಸಲಾಗಿದೆ’ ಎಂದು ಜಯರಾಜ್‌ ತಿಳಿಸಿದರು.

ನಾಯಕ ಪೃಥ್ವಿ ಅಂಬರ್‌, ನಾಯಕಿ ಶೀತಲ್‌ ನಾಯಕ್‌, ನಟರಾದ ನವೀನ್‌ ಡಿ. ಪಡೀಲ್‌, ಅರವಿಂದ ಬೋಳಾರ್‌ ಇವರಲ್ಲ ‘ವಿಭಿನ್ನ ತುಳುಚಿತ್ರ, ಕಷ್ಟಪಟ್ಟಿದ್ದೇವೆ, ಪ್ರೇಕ್ಷಕರು ಪ್ರೋತ್ಸಾಹಿಸಿ’ ಎಂದರು.

ಚಿತ್ರ ತಂಡದ ಪ್ರಮುಖರಾದ ಮಹಾಬಲೇಶ್ವರ ಹೊಳ್ಳ, ಸೂರಜ್‌ ಕೆ., ಪ್ರದೀಪ್‌ ಬಜ್ಜೋಡಿ, ಜೀವನ್‌ ಉಳ್ಳಾಲ್‌, ಉದಯ ಆಳ್ವ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT