ಶುಕ್ರವಾರ, ಅಕ್ಟೋಬರ್ 18, 2019
28 °C

ಕುಕ್ಕೆಗೆ ನೂತನ ಬ್ರಹ್ಮರಥ ಆಗಮ ಇಂದು

Published:
Updated:
Prajavani

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ 400 ವರ್ಷಗಳ ಬಳಿಕ ನೂತನ ಬ್ರಹ್ಮರಥ ಸಿದ್ಧಗೊಂಡಿದ್ದು ಉದ್ಯಮಿಗಳಾದ ಮುತ್ತಪ್ಪ ರೈ ಹಾಗೂ ಅಜಿತ್ ಶೆಟ್ಟಿ ಕಡಬ ಸಮರ್ಪಿಸುತ್ತಿರುವ ₹2.50 ಕೋಟಿ ವೆಚ್ಚದ ಬ್ರಹ್ಮರಥ  ಇದೇ 2ರಂದು  ಇಲ್ಲಿದೆ ತಲುಪಲಿದೆ. ರಥ ಸ್ವಾಗತಕ್ಕೆ ಭಾರಿ ಸಿದ್ಧತೆಗಳು ನಡೆದಿದೆ.

ಬುಧವಾರ ಕೈಕಂಬ ಬಳಿಯಿಂದ ಅದ್ದೂರಿ ಕಾಲ್ನಡಿಗೆ ಮೆರವಣಿಗೆ ಮೂಲಕ ಪುರ ಪ್ರವೇಶಿಸುವ ಕಾರ್ಯಕ್ರಮವಿದೆ. ಮೆರವಣಿಗೆಯಲ್ಲಿ ಪೂರ್ಣಕುಂಭ ಸ್ವಾಗತ, ಮಂತ್ರ ಘೋಷ, ಕುಣಿತ ಭಜನೆ, 15ಕ್ಕೂ ಅಧಿಕ ಸ್ತಬ್ಧ ಚಿತ್ರಗಳು, ಬೊಂಬೆ ಕುಣಿತ, ವಿವಿಧ ಕಲಾ ತಂಡಗಳ ನೃತ್ಯ ಕೇರಳದ ಚೆಂಡೆ ವಾದನ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಲಿವೆ.  ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳು ವಿವಿಧ ಯೋಜನೆಗಳ ಸದಸ್ಯರು ಹಾಗೂ ಭಕ್ತರು ಮೆರವಣಿಗೆಯಲ್ಲಿ ಭಾಗವಹಿಸಲಿರುವರು.

ಸುಬ್ರಹ್ಮಣ್ಯ ನಗರವನ್ನು ಸುಂದರವಾಗಿ ಅಲಂಕರಿಸಲಾಗಿದೆ, ನಗರದ ವಿವಿಧೆಡೆ ತಳಿರು ತೋರಣ,  ನಗರ ಕೇಸರಿಮಯವಾಗಿದೆ. ರಸ್ತೆ ಇಕ್ಕೆಲಗಳಲ್ಲಿ ಅಲ್ಲಲ್ಲಿ ಫ್ಲೆಕ್ಸ್ ಅಳವಡಿಸಿದ್ದು ಕುಮಾರಧಾರ, ಕಾಶಿಕಟ್ಟೆ, ಕುಲ್ಕುಂದ ಈ ಮೂರು ಕಡೆಗಳಲ್ಲಿ ರಥ ಹೋಲುವ ದ್ವಾರಗಳನ್ನು ನಿರ್ಮಿಸಲಾಗಿದೆ.

 

Post Comments (+)