ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಾರ್ಷಿಕ ಚಂಪಾಷಷ್ಠಿ ಜಾತ್ರೆ ಪ್ರಯುಕ್ತ ದೇವರಗದ್ದೆಯ ಹೊಸಳಿಗಮ್ಮ ದೈವದ ಗುಡಿಯಿಂದ ಲಕ್ಷದೀಪೋತ್ಸವದ ದಿನವಾದ ಶನಿವಾರ ದೈವದ ಭಂಡಾರವು ದೇವಳಕ್ಕೆ ಆಗಮಿಸಿತು.

ದೇವರಗದ್ದೆಯ ಹೊಸಳಿಗಮ್ಮ ದೈವದ ಗುಡಿಯಲ್ಲಿ ಪೂಜೆ ನೆರವೇರಿತು. ಪುರೋಹಿತ ನಾರಾಯಣ ಭಟ್ ವಿದಿವಿಧಾನಗಳನ್ನು ನೆರವೇರಿಸಿದರು.

ಬಳಿಕ ಸಂಪ್ರದಾಯದ ಪ್ರಕಾರ ದೈವದ ಭಂಡಾರವನ್ನು ಮಂಗಳವಾದ್ಯಗಳೊಂದಿಗೆ ದೇವಳಕ್ಕೆ ತರಲಾಯಿತು. ದೇವಳದ ಹೊಸಳಿಗಮ್ಮ ಗುಡಿಯಲ್ಲಿ ಭಂಡಾರವನ್ನು ಇರಿಸಿದ ಬಳಿಕ ಪುರೋಹಿತರು ಪೂಜೆ ನೆರವೇರಿಸಿ, ಪ್ರಸಾದ ನೀಡಿದರು. ಶ್ರೀದೇವರ ಉತ್ಸವಾದಿಗಳ ಕೊನೆಯ ದಿನ ದೇವರಗದ್ದೆಗೆ ಮತ್ತೆ ಭಂಡಾರವನ್ನು ತೆಗೆದುಕೊಂಡು ಹೋಗಲಾಗುವುದು.

ದೇವಳದ ಕಾರ್ಯನಿರ್ವಹಣಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್, ಕಚೇರಿ ಅಧೀಕ್ಷಕ ಪದ್ಮನಾಭ ಶೆಟ್ಟಿಗಾರ್, ದೇವಳದ ಹೆಬ್ಬಾರ್ ಪ್ರಸನ್ನ ಭಟ್, ಪಾಟಾಳಿ ಎ.ಆರ್.ಲೋಕೇಶ್, ದೇವಳದ ಎನ್.ಸಿ.ಲಕ್ಷ್ಮಣ, ಎಂ.ಆರ್.ಲೋಕೇಶ್, ಶಿವಕುಮಾರ್ ಎ.ವಿ., ದಯಾನಂದ ಹೊಸೋಳಿಕೆ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.