ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಹೈದರಬಾದ್ನ ಉದ್ಯಮಿ, ರಾಸನ್ ಗ್ರೂಪ್ನ ಮುಖ್ಯಸ್ಥ ಕಣ್ನಕರ್ ರವೀಂದ್ರ ರೆಡ್ಡಿ ಅವರು ಸುಮಾರು ₹12.44 ಲಕ್ಷ ಮೌಲ್ಯದ ವಜ್ರಖಚಿತ ಚಿನ್ನದ ಸರವನ್ನು ಬುಧವಾರ ಸಮರ್ಪಿಸಿದರು.

ಸರವನ್ನು ಶ್ರೀದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್. ಎಸ್.ಇಂಜಾಡಿ ಅವರಿಗೆ ಆಡಳಿತ ಕಚೇರಿಯಲ್ಲಿ ಹಸ್ತಾಂತರಿಸಿದರು.

ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್.ಎಸ್.ಇಂಜಾಡಿ ಅವರು ಸೇವಾರ್ಥಿ ಕಣ್ನಕರ್ ರವೀಂದ್ರ ರೆಡ್ಡಿ ಅವರನ್ನು ಗೌರವಿಸಿದರು. ರವೀಂದ್ರ ರೆಡ್ಡಿ ಅವರ ಪುತ್ರ ಕಣ್ನಕರ್ ಸಂದೀಪ್ ರೆಡ್ಡಿ, ಸಂಬಂಧಿಕರಾದ ಉತ್ತಮ್ ಕುಮಾರ್ ರೆಡ್ಡಿ, ರಜಿನಿ, ಹೈಮಾ, ಹೈದರಬಾದ್ನ ಉದ್ಯಮಿ ಮಾರಕಟ್ಟೆಯ ಕೃಷ್ಣಮೂರ್ತಿ ಮಂಜ, ವ್ಯವಸ್ಥಾಪನಾ ಸಮಿತಿ ಸದಸ್ಯ ಅಶೋಕ್ ನೆಕ್ರಾಜೆ, ಎಇಒ ಎಸ್.ಜೆ.ವೈ.ರಾಜ್, ಶಿಷ್ಟಾಚಾರ ವಿಭಾಗದ ಪ್ರಮೋದ್ ಕುಮಾರ್.ಎಸ್, ದೇವಳದ ಸಿಬ್ಬಂದಿ ಉಪಸ್ಥಿತರಿದ್ದರು.

ದೇವರಿಗೆ ಅರ್ಪಣೆ: ಬಳಿಕ ದೇವಳದಲ್ಲಿ ಅರ್ಚಕರಾದ ರಾಜೇಶ್ ನಡ್ಯಂತಿಲ್ಲಾಯ ಮತ್ತು ಸತ್ಯನಾರಾಯಣ ನೂರಿತ್ತಾಯರು ವಿವಿಧ ವೈದಿಕ ವಿಧಾನಗಳನ್ನು ನೆರವೇರಿಸಿ ಚಿನ್ನದ ಸರವನ್ನು ದೇವರಿಗೆ ಸಮರ್ಪಿಸಿದರು.

‘ಕುಕ್ಕೆ ಸುಬ್ರಹ್ಮಣ್ಯ ದೇವರ ಭಕ್ತ ನಾಗಿದ್ದು ಈ ಹಿಂದೆ ಇಲ್ಲಿ ಸರ್ಪಸಂಸ್ಕಾರ ಮತ್ತು ಆಶ್ಲೇಷ ಬಲಿ ಸೇವೆ ಮಾಡಿದ ಬಳಿಕ ನನ್ನ ಇಷ್ಟಾರ್ಥ ಸಿದ್ಧಿಯಾಗಿದೆ. ಹಾಗಾಗಿ ದೇವರಿಗೆ ಚಿಕ್ಕ ಸೇವೆ ಮಾಡಿದ್ದೇನೆ’ ಎಂದು ರವೀಂದ್ರ ರೆಡ್ಡಿ ಹೇಳಿದರು

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-29-1157113513

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.