ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಲ್ಡಾ ಟು ಮಂಗಳೂರು: ಪಶ್ಚಿಮ ಬಂಗಾಳದಿಂದ 35 ಕಾರ್ಮಿಕರ ಆಗಮನ

Last Updated 28 ಜುಲೈ 2020, 4:40 IST
ಅಕ್ಷರ ಗಾತ್ರ

ಮಂಗಳೂರು: ಇಲ್ಲಿನ ಮೆರಿಯನ್ ಪ್ರೊಜೆಕ್ಟ್ಸ್‌ನ ಕಾಮಗಾರಿಗಾಗಿ ಪಶ್ಚಿಮ ಬಂಗಾಳದ ಮಾಲ್ಡಾದಿಂದ 35 ಕಾರ್ಮಿಕರನ್ನು ಕರೆತಂದ ಬಸ್ ಸೋಮವಾರ ರಾತ್ರಿ ನಗರಕ್ಕೆ ಬಂದು ತಲುಪಿತು.

ಇಲ್ಲಿಂದ 2,550 ಕಿ.ಮೀ.ಗೂ ಅಧಿಕ ದೂರದ ಮಾಲ್ಡಾಕ್ಕೆ ಜು.18 ರಂದು ಬಸ್ ಹೊರಟಿದ್ದು, ಒಟ್ಟು ಸುಮಾರು 5,100 ಕಿ.ಮೀ. ಕ್ರಮಿಸಿದೆ.

ನಗರದ ಕದ್ರಿಯಲ್ಲಿ ನವೀನ್ ಕಾರ್ಡೋಜಾ ಮಾಲಿಕತ್ವದ ಮೆರಿಯನ್ ಪ್ರೊಜೆಕ್ಟ್ಸ್ 23 ಮಹಡಿಯ 300 ಮನೆಗಳು ಹಾಗೂ 100 ಕಚೇರಿಗಳನ್ನು ಹೊಂದಿದ ಬೃಹತ್ ಸಮುಚ್ಚಯ ನಿರ್ಮಿಸುತ್ತಿದ್ದು, ಲಾಕ್‌ಡೌನ್ ಪರಿಣಾಮ ನುರಿತ ಕಾರ್ಮಿಕರ ಕೊರತೆಯಾಗಿತ್ತು.ಲಾಕ್‌ಡೌನ್ ಘೋಷಣೆ ಸಂದರ್ಭದಲ್ಲಿ ಇಲ್ಲಿದ್ದ ಪಶ್ಚಿಮ ಬಂಗಾಳ ಸೇರಿದಂತೆ ಹೊರರಾಜ್ಯದ ಸುಮಾರು 175 ಕಾರ್ಮಿಕರು ತಮ್ಮೂರಿಗೆ ವಾಪಸ್ ಆಗಿದ್ದರು.

ಮಂಗಳೂರಿನಿಂದ ಒಟ್ಟಾರೆ ಸುಮಾರು 30 ಸಾವಿರಕ್ಕೂ ಅಧಿಕ ವಲಸೆ ಕಾರ್ಮಿಕರು ತವರಿಗೆ ವಾಪಸ್ ಹೋಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT