ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳ್ಳಿಪ್ಪಾಡಿಯಲ್ಲಿ ಗುಡ್ಡ ಕುಸಿತ: ಮನೆ, ಹಟ್ಟಿಗಳಿಗೆ ಹಾನಿ: 6 ಜಾನುವಾರು ಸಾವು

ಘಟನೆ
Published 2 ಆಗಸ್ಟ್ 2024, 14:19 IST
Last Updated 2 ಆಗಸ್ಟ್ 2024, 14:19 IST
ಅಕ್ಷರ ಗಾತ್ರ

ಪುತ್ತೂರು: ಮನೆ ಪಕ್ಕದ ಗುಡ್ಡ ಕುಸಿದು ಎರಡು ಮನೆಗಳಿಗೆ ಹಾನಿಯಾದ, ಹಟ್ಟಿಯಲ್ಲಿದ್ದ ಎರಡು ಹಸು ಹಾಗೂ ಎರಡು ಕರುಗಳು ಮಣ್ಣಿನೊಳಗೆ ಸಿಲುಕಿ ಮೃತಪಟ್ಟ ಘಟನೆಯೊಂದು ಪುತ್ತೂರು ತಾಲ್ಲೂಕಿನ ಕೋಡಿಂಬಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳ್ಳಿಪ್ಪಾಡಿ ಗ್ರಾಮದ ಅಂದ್ರಿಗೇರಿ ಎಂಬಲ್ಲಿ ಶುಕ್ರವಾರ ಮುಂಜಾನೆ ನಡೆದಿದೆ. ಇಲ್ಲಿಗೆ ಸಮೀಪದ ಕೋರ್ಯ ಎಂಬಲ್ಲಿ ನಡೆದ ಮತ್ತೊಂದು ಘಟನೆಯಲ್ಲಿ ದನದ ಹಟ್ಟಿ ನಾಶಗೊಂಡು ಹಸು ಮತ್ತು ಕರು ಮೃತಪಟ್ಟಿವೆ.

ಬೆಳ್ಳಿಪ್ಪಾಡಿಯ ಅಂದ್ರಿಗೇರಿ ಗಂಗಯ್ಯ ಗೌಡ ಮತ್ತು ಅವರ ಸಹೋದರ ಮಹಾಬಲ ಗೌಡ ಎಂಬುವರ ಮನೆಯ ಪಕ್ಕದ ಗುಡ್ಡದಲ್ಲಿ ಕುಸಿತ ಉಂಟಾಗಿ ಮಣ್ಣು ಮನೆಯ ಬದಿಗೆ ಕುಸಿದಿದೆ. ಈ ಘಟನೆ ಶುಕ್ರವಾರ ನಸುಕಿನ 4.45ರ ವೇಳೆ ನಡೆದಿದೆ. ಗಂಗಯ್ಯ ಗೌಡ ಮತ್ತು ಮಹಾಬಲ ಗೌಡ ಅವರ ಮನೆಗಳು ಅಕ್ಕಪಕ್ಕದಲ್ಲಿದ್ದು, ಎರಡೂ ಮನೆಗಳ ಬದಿಗೆ ಮಣ್ಣು ಕುಸಿದಿದೆ.

ಗಂಗಯ್ಯ ಗೌಡ ಅವರ ಕೊಟ್ಟಿಗೆಯ ಒಂದು ಬದಿಯಲ್ಲಿ ಕಟ್ಟಿ ಹಾಕಿದ್ದ ಹಸುವಿನ ದೇಹದ ಮಣ್ಣಿನೊಳಗೆ ಸಿಲುಕಿ ಕೊಂಡಿದ್ದರೂ ಮುಖದ ಭಾಗ ಗೋಚರಿಸುತ್ತಿತ್ತು. ಆ ಹಸುವನ್ನು ರಕ್ಷಿಸಿದ್ದಾರೆ. ಮನೆಯ ಹಿಂಬದಿಯಲ್ಲಿ ಶೀಟ್ ಅಳವಡಿಸಿ ನಿರ್ಮಿಸಿದ್ದ ಮನೆಯ ಭಾಗವೂ ಹಾನಿಗೀಡಾಗಿದೆ. ಘಟನೆಯಿಂದಾಗಿ ಕುಟುಂಬಕ್ಕೆ ಸುಮಾರು ₹ 8 ಲಕ್ಷದಷ್ಟು ನಷ್ಟ ಅಂದಾಜಿಸಲಾಗಿದೆ.

ಮಹಾಬಲ ಗೌಡ ಅವರು ಹಳೆಯ ಮನೆಯನ್ನು ತೆರವುಗೊಳಿಸಿ ಹೊಸ ಮನೆ ನಿರ್ಮಿಸುತ್ತಿದ್ದು, ವಾಸ್ತವ್ಯಕ್ಕಾಗಿ ತಾತ್ಕಾಲಿಕವಾಗಿ ನಿರ್ಮಿಸಿದ್ದರು. ಮನೆಯ ಬದಿಗೆ ಹಾಗೂ ನಿರ್ಮಾಣ ಹಂತದಲ್ಲಿರುವ ಹೊಸ ಮನೆಯ ಫೌಂಡೇಷನ್ ಮೇಲೆ ಮಣ್ಣು ಬಿದ್ದಿದೆ. ಮನೆಯ ಹಿಂಬದಿಯಲ್ಲಿ ಶೀಟ್ ಅಳವಡಿಸಿ ನಿರ್ಮಿಸಿದ್ದ ಶೆಡ್ ನಾಶವಾಗಿದೆ.

ಗಂಗಯ್ಯ ಗೌಡ, ಮಹಾಬಲ ಗೌಡ ಅವರ ಮನೆಯ ಸಾಮಗ್ರಿಗಳನ್ನು ಸಮೀಪದ ಸಂಬಂಧಿಕರ ಮನೆಗೆ ಸ್ಥಳಾಂತರಿಸಲಾಗಿದೆ.

ಬೆಳ್ಳಿಪ್ಪಾಡಿಯ ಕೋರ್ಯ ಎಂಬಲ್ಲಿ ವಿಶ್ವನಾಥ ಪೂಜಾರಿ ಎಂಬುವರ ಮನೆಯ ಪಕ್ಕದ ಗುಡ್ಡ ಕುಸಿದು ಮನೆಯ ಬದಿಗೆ ಹಾಗೂ ದನದ ಹಟ್ಟಿ ಮೇಲೆ ಮಣ್ಣು ಬಿದ್ದಿದೆ. ಘಟನೆಯಿಂದಾಗಿ ಮನೆಗೆ ಹಾನಿಯಾಗಿದ್ದು, ದನದ ಹಟ್ಟಿ ಸಂಪೂರ್ಣವಾಗಿ ಹಾನಿಗೀಡಾಗಿದೆ. ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸು ಮತ್ತು ಕರು ಮಣ್ಣಿನೊಳಗೆ ಸಿಲುಕಿಕೊಂಡು ಅಸುನೀಗಿವೆ.

ಘಟನಾ ಸ್ಥಳಕ್ಕೆ ತಾಲೂಕು ಪಂಚಾಯಿತಿ ಇಒ ನವೀನ್‌ಕುಮಾರ್ ಭಂಡಾರಿ, ಕೋಡಿಂಬಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಲ್ಲಿಕಾ ಪೂಜಾರಿ, ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರ್, ಪಿಡಿಒ ವಿಲ್ಫ್ರೆಡ್, ಗ್ರಾಮ ಪಂಚಾಯಿತಿ ಸದಸ್ಯರಾದ ರಾಮಣ್ಣ ಗೌಡ ಗುಂಡೋಲೆ, ಉಷಾ ಲಕ್ಷ್ಮಣ್‌ ಪೂಜಾರಿ, ಲೋಕಯ್ಯ ನಾಯ್ಕ ಅವರು ಭೇಟಿ ನೀಡಿ ಪರಿಶೀಲಿಸಿದರು.

ಪುತ್ತೂರು ತಾಲ್ಲೂಕಿನ ಬೆಳ್ಳಿಪ್ಪಾಡಿ ಗ್ರಾಮದ ಅಂದ್ರಿಗೇರಿ ನಿವಾಸಿ ಮಹಾಬಲ ಗೌಡ ಅವರ ನಿರ್ಮಾಣ ಹಂತದ ಮನೆಯ ಫೌಂಡೇಷನ್‌ ಮೇಲೆ ಮಣ್ಣು ಕುಸಿದು ಬಿದ್ದಿದೆ. ವಾಸ್ಯವ್ಯದ ತಾತ್ಕಾಲಿಕ ಮನೆಗೂ ಹಾನಿಯಾಗಿದೆ
ಪುತ್ತೂರು ತಾಲ್ಲೂಕಿನ ಬೆಳ್ಳಿಪ್ಪಾಡಿ ಗ್ರಾಮದ ಅಂದ್ರಿಗೇರಿ ನಿವಾಸಿ ಮಹಾಬಲ ಗೌಡ ಅವರ ನಿರ್ಮಾಣ ಹಂತದ ಮನೆಯ ಫೌಂಡೇಷನ್‌ ಮೇಲೆ ಮಣ್ಣು ಕುಸಿದು ಬಿದ್ದಿದೆ. ವಾಸ್ಯವ್ಯದ ತಾತ್ಕಾಲಿಕ ಮನೆಗೂ ಹಾನಿಯಾಗಿದೆ

ಗಂಗಯ್ಯ ಗೌಡ ಅವರು ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಪ್ರತಿದಿನ ಸುಮಾರು 25 ಲೀಟರ್‌ ಹಾಲು ಪೂರೈಕೆ ಮಾಡುತ್ತಿದ್ದರು.  ಮಹಾಬಲ ಗೌಡ ಅವರ ಮನೆಯ ಬಳಿ ಗುರುವಾರ ಸಣ್ಣ ಪ್ರಮಾಣದಲ್ಲಿ ಗುಡ್ಡದ ಮಣ್ಣು ಕುಸಿದಿತ್ತು. ಈ ಸಂಬಂಧ ಅವರು ಅಲ್ಲಿನ ಕೊಟ್ಟಿಗೆಯಲ್ಲಿದ್ದ ಹಸು-ಕರುವನ್ನು ಸ್ಥಳಾಂತರಿಸಿದ್ದರು.

ಪುತ್ತೂರು ತಾಲ್ಲೂಕಿನ ಬೆಳ್ಳಿಪ್ಪಾಡಿ ಗ್ರಾಮದ ಕೋರ್ಯದ ವಿಶ್ವನಾಥ ಪೂಜಾರಿ ಎಂಬುವರ ಮನೆ ಪಕ್ಕದ ಗುಡ್ಡ ಕುಸಿದು ಮನೆಯ ಬದಿಗೆ ಹಾಗೂ ದನದ ಹಟ್ಟಿ ಮೇಲೆ ಮಣ್ಣು ಬಿದ್ದಿದೆ
ಪುತ್ತೂರು ತಾಲ್ಲೂಕಿನ ಬೆಳ್ಳಿಪ್ಪಾಡಿ ಗ್ರಾಮದ ಕೋರ್ಯದ ವಿಶ್ವನಾಥ ಪೂಜಾರಿ ಎಂಬುವರ ಮನೆ ಪಕ್ಕದ ಗುಡ್ಡ ಕುಸಿದು ಮನೆಯ ಬದಿಗೆ ಹಾಗೂ ದನದ ಹಟ್ಟಿ ಮೇಲೆ ಮಣ್ಣು ಬಿದ್ದಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT