ಎಡಕುಮೇರಿ ಬಳಿ ಭೂಕುಸಿತ: ರೈಲು ಸಂಚಾರ ಸ್ಥಗಿತ

7

ಎಡಕುಮೇರಿ ಬಳಿ ಭೂಕುಸಿತ: ರೈಲು ಸಂಚಾರ ಸ್ಥಗಿತ

Published:
Updated:

ಸಕಲೇಶಪುರ: ಸಕಲೇಶಪುರ– ಕುಕ್ಕೆಸುಬ್ರಹ್ಮಣ್ಯ ಮಾರ್ಗದ ಎಡಕುಮೇರಿ ಹಾಗೂ ಶಿರಿಬಾಗಿಲು ನಡುವೆ ರೈಲು ಹಳಿ ಮೇಲೆ ಮಣ್ಣು ಕುಸಿದು ಬೆಂಗಳೂರು– ಮಂಗಳೂರು ಮಾರ್ಗದ ರೈಲು ಸಂಚಾರ ಸ್ಥಗಿತಗೊಂಡಿತು.

ಬುಧವಾರ ಬೆಳಿಗ್ಗೆ 6 ಗಂಟೆ ಸುಮಾರಿಗೆ ಮಣ್ಣು ಕುಸಿದಿದೆ. ಕೂಡಲೇ ರೈಲ್ವೆಯ ಎಂಜಿನಿಯರ್‌ಗಳು ಹಾಗೂ ಸಿಬ್ಬಂದಿ ಮಣ್ಣು ತೆರವು ಕಾರ್ಯಾಚರಣೆ ನಡೆಸಿದರು.

ಸಂಜೆ ವೇಳೆಗೆ ತೆರವು ಕಾರ್ಯ ಮುಗಿದಿದ್ದು, ಬುಧವಾರ ರಾತ್ರಿಯಿಂದ ರೈಲು ಎಂದಿನಂತೆ ಸಂಚರಿಸಲಿವೆ ಎಂದು ರೈಲ್ವೆ ಮೂಲಗಳು ತಿಳಿಸಿದವು.

ಬೆಂಗಳೂರಿನಿಂದ ಸಕಲೇಶಪುರಕ್ಕೆ ಬೆಳಿಗ್ಗೆ 11.30ಕ್ಕೆ ಬರಬೇಕಿದ್ದ ಬೆಂಗಳೂರು– ಕಾರವಾರ ರೈಲು ಹಾಸನದಲ್ಲಿಯೇ ನಿಲುಗಡೆಯಾಯಿತು. ಅಧಿಕ ಮಳೆ ಆಗಿರುವುದರಿಂದ ಜೂನ್‍ ತಿಂಗಳಿನಿಂದ ಈಚೆಗೆ 6ನೇ ಬಾರಿ ಮಣ್ಣು ಕುಸಿತ ಉಂಟಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !