ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಕ್ಷ್ಮೀ ಬಾಂಬ್‌ ನಿಷೇಧಕ್ಕೆ ಹಿಂದೂ ಮಹಾಸಭಾ ಆಗ್ರಹ

Last Updated 28 ಅಕ್ಟೋಬರ್ 2020, 4:32 IST
ಅಕ್ಷರ ಗಾತ್ರ

ಮಂಗಳೂರು: ‘ಲಕ್ಷ್ಮೀ ಬಾಂಬ್’ ಸಿನಿಮಾದಲ್ಲಿ ಹಿಂದೂ ಭಾವನೆಗೆ ಧಕ್ಕೆ ಉಂಟು ಮಾಡುವ ಲವ್‌ ಜಿಹಾದ್ ಪ್ರೋತ್ಸಾಹಿಸುವ ಅಂಶವಿದ್ದು, ಸಿನಿಮಾ ನಿಷೇಧಿಸಬೇಕು ಎಂದು ಹಿಂದೂ ಮಹಾಸಭಾ ಆಗ್ರಹಿಸಿದೆ.

‘ಲಕ್ಷ್ಮಿಬಾಂಬ್’ ಸಿನಿಮಾವನ್ನು ದೀಪಾವಳಿ ಸಂದರ್ಭದಲ್ಲಿ ಪ್ರದರ್ಶನ ಮಾಡುವ ಪ್ರಯತ್ನದ ಹಿಂದೆ ಹಿಂದೂ ಸಮಾಜದ ಶಕ್ತಿಯನ್ನು ಕುಗ್ಗಿಸುವ ಸಂಚು ಅಡಗಿದೆ. ಚಿತ್ರದಲ್ಲಿ ನಾಯಕಿಯ ಹೆಸರು ಪ್ರಿಯಾ ಯಾದವ್ ಮತ್ತು ನಾಯಕನ ಹೆಸರು ಆಸೀಫ್‌. ಮುಸ್ಲಿಂ ಯುವಕ ಮತ್ತು ಹಿಂದೂ ಯುವತಿಯ ಸಂಬಂಧ ತೋರಿಸುವ ಮೂಲಕ ಲವ್‍ಜಿಹಾದ್‍ಗೆ ಪ್ರೋತ್ಸಾಹ ನೀಡಿದ್ದಾರೆ. ಈ ಸಿನಿಮಾದ ಮೇಲೆ ನಿರ್ಬಂಧ ಹೇರಬೇಕು ಎಂದು ಹಿಂದೂ ಮಹಾಸಭಾ ಸಂಸದೀಯ ಕಾರ್ಯದರ್ಶಿ ಧರ್ಮೇಂದ್ರ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಜಮ್ಮು ಕಾಶ್ಮೀರದಲ್ಲಿ ಹಿಂದೆ ಇದ್ದ ರಾಜ್ಯ ಧ್ವಜವನ್ನು ಮರಳಿ ಅಲಕೃತಗೊಳಿಸಬೇಕು ಎಂದು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ನೀಡಿರುವ ಹೇಳಿಕೆ ಖಂಡನೀಯ ಎಂದು ಹೇಳಿದರು.

ಸಭಾದ ರಾಜೇಶ್ ಪವಿತ್ರನ್, ಜಗನ್ ಕುಮಾರ್, ಧನರಾಜ್ ಪೂಜಾರಿ, ಅಕ್ಷತ್ ಶೆಟ್ಟಿ, ವಸಂತ್ ಅಮೀನ್, ಕಮಲಾಕ್ಷ, ರಾಜ್‍ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT