ಕಾಸರಗೋಡು: ಜಿಲ್ಲೆಯ ಮುಳ್ಳೇರಿಯ ಸಹಿತ ವಿವಿಧೆಡೆ ಚಿರತೆಯ ಹಾವಳಿಯಿಂದಾಗಿ ಸ್ಥಳೀಯರು ಭಯಗೊಂಡಿದ್ದಾರೆ.

ಪೂವಡ್ಕದಲ್ಲಿ ಶನಿವಾರ ನಾಯಿಯೊಂದನ್ನು ಚಿರತೆ ಕೊಂದು ಹಾಕಿದೆ. ತೀಯಡ್ಕ ತಂಗತ್ತಡ್ಕ ಎಂಬಲ್ಲಿನ ಕುಂಞಂಬು ಎಂಬುವರ ಹಟ್ಟಿಯಲ್ಲಿ ಕಟ್ಟಿದ್ದ ಹಸುವಿನ ಮೇಲೆ ಚಿರತೆ ದಾಳಿ ಮಾಡಿ ಗಾಯಗೊಳಿಸಿದೆ. ಹಸುವಿನ ಕೂಗು ಕೇಳಿ ಮನೆಮಂದಿ ಓಡಿಬಂದಾಗ ಚಿರತೆ ಪರಾರಿಯಾಗಿದೆ.

ಇರಿಯಣ್ಣಿ ಮುಂಡಕ್ಕಾಡು ಎಂಬಲ್ಲಿ ಕಾಡುಕೋಣವೊಂದನ್ನು ಚಿರತೆ ಬೇಟೆಯಾಡಿರುವುದಾಗಿ ಸಾರ್ವಜನಿಕರು ತಿಳಿಸಿದ್ದಾರೆ.

ನದಿಯಲ್ಲಿ ಶವ ಪತ್ತೆ

ಕಾಸರಗೋಡು: ನೀಲೇಶ್ವರ ಪೇರೋಲ್ ಪೋಡಾತುರ್ತಿ ನದಿಯಲ್ಲಿ ಸ್ಥಳೀಯ ಪುಳ್ಕೂರು ಎಂಬಲ್ಲಿನ ನಿವಾಸಿ ಕುಂಞಿಕಣ್ಣನ್ (72) ಎಂಬುವರ ಶವ ಪತ್ತೆಯಾಗಿದೆ. ನೀಲೇಶ್ವರ ಪೊಲೀಸರು ಮಹಜರು ನಡೆಸಿದರು.

ಅಪಘಾತ: ಸಾವು

ಕಾಸರಗೋಡು: ಕೊಲ್ಲಿರಾಷ್ಟ್ರದ ಅಜ್ಮಾನ್ ಎಂಬಲ್ಲಿ ನಡೆದ ವಾಹನ ಅಪಘಾತದಲ್ಲಿ ಮೋನಚ್ಚ ನಿವಾಸಿ ಭೀಮ್ ಕಕ್ಕಾಣನ್ (45) ಎಂಬುವರು ಬಲಿಯಾಗಿದ್ದಾರೆ. ಊರಿಗೆ ಬಂದಿದ್ದ ಅವರು 2 ತಿಂಗಳ ಹಿಂದೆ ವಾಪಸಾಗಿದ್ದರು. ಅವರಿಗೆ ಪತ್ನಿ, ಇಬ್ಬರು ಪುತ್ರಿಯರಿದ್ದಾರೆ.

ಯೂತ್ ಲೀಗ್ ಮುತ್ತಿಗೆ

ಕಾಸರಗೋಡು: ಪೆರಿಯ ಕಲ್ಯೋಟ್ ಜೋಡಿಕೊಲೆಗೆ ಸಂಬಂಧಿಸಿ ಸಜೆಗೊಳಗಾದ ಆರೋಪಿ, ಕಾಞಂಗಾಡ್ ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಕೆ.ಮಣಿಕಂಠನ್ ಅವರ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವಂತೆ ಆಗ್ರಹಿಸಿ ಯೂತ್ ಲೀಗ್ ವತಿಯಿಂದ ಬ್ಲಾಕ್ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಲಾಯಿತು.

ಕಚೇರಿ ಬಳಿ ಪೊಲೀಸರು ತಡೆದಾಗ ಕೊಂಚ ಹೊತ್ತು ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ಈ ಸಂಬಂಧ 20 ಮಂದಿ ಕಾರ್ಯಕರ್ತರ ವಿರುದ್ಧ ಹೊಸದುರ್ಗ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.