ಕುಖ್ಯಾತ ಕೈದಿಗೆ ಕುಟುಂಬ ಭೇಟಿಗೆ ಅವಕಾಶ

7
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೊ ದೃಶ್ಯಾವಳಿ

ಕುಖ್ಯಾತ ಕೈದಿಗೆ ಕುಟುಂಬ ಭೇಟಿಗೆ ಅವಕಾಶ

Published:
Updated:

ಮಂಗಳೂರು: ಕುಖ್ಯಾತ ಕೈದಿಯೊಬ್ಬನನ್ನು ವಿಚಾರಣೆಗೆ ಕರೆದೊಯ್ದು, ವಾಪಸು ಕರೆತರುವ ವೇಳೆ ಪೊಲೀಸರೇ ಮಧ್ಯನಿಂತು ರಹಸ್ಯವಾಗಿ ಕುಟುಂಬದ ಸದಸ್ಯರ ಭೇಟಿಗೆ ಅವಕಾಶ ಕಲ್ಪಿಸಿರುವ ವಿಡಿಯೊ ದೃಶ್ಯಾವಳಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಫರಂಗಿಪೇಟೆಯ ಜೋಡಿ ಕೊಲೆ ಪ್ರಕರಣದ ಆರೋಪಿಯಾಗಿದ್ದ ಕುಖ್ಯಾತ ರೌಡಿ ನೌಫಾಲ್‌ ಅಲಿಯಾಸ್ ಡೀಲ್‌ ನೌಫಾಲ್‌ನನ್ನು ಪ್ರಕರಣವೊಂದರ ಸಂಬಂಧ ವಿಚಾರಣೆಗಾಗಿ ತುಮಕೂರು ಪೊಲೀಸರು ಕರೆದೊಯ್ದಿದ್ದರು. ಅಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಬುಧವಾರ ಮಂಗಳೂರು ಜಿಲ್ಲಾ ಕಾರಾಗೃಹಕ್ಕೆ ವಾಪಸ್‌ ಕರೆತರಲಾಗುತ್ತಿತ್ತು.

ಕೈದಿಯನ್ನು ಕರೆತರುತ್ತಿದ್ದ ಪೊಲೀಸರ ವಾಹನ ಆ ದಿನ ಸಂಜೆ ಕದ್ರಿ ಪೊಲೀಸ್‌ ಠಾಣೆ ಮುಂಭಾಗ ಬಂದು ನಿಂತಿದೆ. ಅಲ್ಲಿಯೇ ಆತನ ಪತ್ನಿ ಸೇರಿದಂತೆ ಕುಟುಂಬದ ಸದಸ್ಯರು ಹಾಜರಿದ್ದರು. ಅವರು ವಾಹನದೊಳಕ್ಕೆ ಬಂದು ನೌಫಾಲ್‌ನನ್ನು ಭೇಟಿ ಮಾಡಲು ಅವಕಾಶ ಕಲ್ಪಿಸಿರುವುದು ವಿಡಿಯೊ ದೃಶ್ಯಾವಳಿಯಲ್ಲಿ ಸೆರೆಯಾಗಿದೆ. ಈ ದೃಶ್ಯಾವಳಿ ವಾಟ್ಸ್‌ ಆ್ಯಪ್‌ ಗುಂಪುಗಳಲ್ಲಿ ಹರಿದಾಡುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !