ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆಚರಣೆ ಜಾತಿಗೆ ಸೀಮಿತಗೊಳಿಸುವುದು ಸರಿಯಲ್ಲ: ರವೀಶ್ ಪಡುಮಲೆ

ಹಿಂದೂ ಜಾಗರಣಾ ವೇದಿಕೆ ಧಾರ್ಮಿಕ ಸಭೆಯಲ್ಲಿ ರವೀಶ್ ಪಡುಮಲೆ
Published : 10 ಸೆಪ್ಟೆಂಬರ್ 2024, 13:35 IST
Last Updated : 10 ಸೆಪ್ಟೆಂಬರ್ 2024, 13:35 IST
ಫಾಲೋ ಮಾಡಿ
Comments

ಪುತ್ತೂರು: ಜಾತಿ ಮತ್ತು ಜಾತಿ ಸಂಘಟನೆಗಳು ಬೇಕು. ಆದರೆ, ಆಚರಣೆಗಳು ಒಂದು ಜಾತಿಗೆ ಸೀಮಿತವಾಗಬಾರದು. ಸಾಮಾಜಿಕವಾಗಿ ಬೆರೆಯುವಾಗ ಜಾತಿಯನ್ನು ಪರಿಗಣಿಸಬಾರದು. ಪ್ರತಿಯೊಬ್ಬರು ಒಗ್ಗಟ್ಟಾಗಿ ರಣೆಗಳನ್ನು ಆಚರಿಸಿದಾಗ ಅದಕ್ಕೊಂದು ಅರ್ಥ ಬರುತ್ತದೆ ಎಂದು ಉಪನ್ಯಾಸಕ ರವೀಶ್ ಪಡುಮಲೆ ಅಭಿಪ್ರಾಯಪಟ್ಟರು.

ಕೆದಂಬಾಡಿ ಗ್ರಾಮದ ತ್ಯಾಗರಾಜನಗರ ಹಿಂದೂ ಜಾಗರಣ ವೇದಿಕೆಯ ವಾರ್ಷಿಕ ಸಮಾರಂಭದ ಪ್ರಯುಕ್ತ ತ್ಯಾಗರಾಜನಗರದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು.

ಕಬಡ್ಡಿಯಲ್ಲಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವ ದೀಕ್ಷಾ ತ್ಯಾಗರಾಜನಗರ, ಪತ್ರಿಕೋದ್ಯಮ ವಿಷಯದಲ್ಲಿ ರ್‍ಯಾಂಕ್‌ ಪಡೆದ ದಿವ್ಯಾ ವಿ.ರೈ, ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಸುಷ್ಮಾ ಕೆ.ಕೊಂಬರಡ್ಕ, ಶಿಶಿಕ್ ಬಾರಿಕೆ ಅವರನ್ನು ಜಾಗರಣ ವೇದಿಕೆಯ ವತಿಯಿಂದ ಗೌರವಿಸಲಾಯಿತು.

ಅರಿಯಡ್ಕ ಮತ್ತು ಕೆದಂಬಾಡಿ ಗ್ರಾಮದ ವಿದ್ಯಾರ್ಥಿಗಳಿಗೆ ಮತ್ತು ಗ್ರಾಮಸ್ಥರಿಗೆ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಅನ್ನದಾನ ಸೇವಾರ್ಥಿ ಅಜಿತ್ ರೈ ದೇರ್ಲ, ಹಿಂದೂ ಜಾಗರಣ ವೇದಿಕೆಯ ಸಂಯೋಜಕ ಭವಿತ್ ಪಯಂದೂರು, ಸಹ ಸಂಯೋಜಕ ಲೋಕೇಶ್ ಸ್ವಾಮಿನಗರ, ಆನಂದ ಸ್ವಾಮಿನಗರ, ಕೇಶವ ಸ್ವಾಮಿನಗರ ಭಾಗವಹಿಸಿದ್ದರು. ಹರೀಶ್ ಸ್ವಾಮಿನಗರ ಪ್ರಾರ್ಥಿಸಿದರು. ದಿವ್ಯಾ ರೈ ಸ್ವಾಗತಿಸಿದರು. ಅಶೋಕ್ ತ್ಯಾಗರಾಜನಗರ ವಂದಿಸಿದರು. ಸೌಮ್ಯಾ ವಿನಯಕುಮಾರ್, ದಿವ್ಯಾ ರೈ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT