ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂದೂರು: ಲಯನ್ಸ್ ಪ್ರಾಂತೀಯ ಸಮ್ಮೇಳನ

Last Updated 2 ಡಿಸೆಂಬರ್ 2022, 6:40 IST
ಅಕ್ಷರ ಗಾತ್ರ

ಬಂಟ್ವಾಳ: ಅಂತರರಾಷ್ಟ್ರೀಯ ಸೇವಾ ಸಂಸ್ಥೆ ಲಯನ್ಸ್ ಕ್ಲಬ್ ಬಂಟ್ವಾಳದಲ್ಲಿ ಸಮಾಜಮುಖಿ ಚಟುವಟಿಕೆಯಿಂದ ಜನತೆಗೆ ಹತ್ತಿರವಾಗಿದೆ ಎಂದು ಸಾಹಿತಿ ಚಟ್ನಳ್ಳಿ ಮಹೇಶ್ ಹೇಳಿದರು.

ಇಲ್ಲಿನ ಕಂದೂರು ಬಜಾರ್ ಸಭಾಂಗಣದಲ್ಲಿ ಶನಿವಾರ ನಡೆದ ಲಯನ್ಸ್ ಪ್ರಾಂತೀಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.

ಪ್ರಾಂತೀಯ ಅಧ್ಯಕ್ಷ ಲಕ್ಷ್ಮಣ ಕುಲಾಲ್ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಉಪ ಗವರ್ನರ್‌ ಅಶ್ವನಿ ಕುಮಾರ್ ರೈ ಮಾತನಾಡಿದರು. ಇದೇ ವೇಳೆ ನಿರ್ಮಲ ಹೃದಯ ಮಕ್ಕಳ ಪಾಲನಾ ಕೆಂದ್ರದ ವಿಸ್ತೃತ ಕೊಠಡಿಯನ್ನು ಲಯನ್ಸ್ ಜಿಲ್ಲಾ ಗವರ್ನರ್‌ ಸಂಜಿತ್ ಶೆಟ್ಟಿ ಉದ್ಘಾಟಿಸಿದರು.

ರಾಜ್ಯೋತ್ಸವ ಮತ್ತು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸರಪಾಡಿ ಅಶೋಕ್ ಶೆಟ್ಟಿ, ಕೆ. ಸೇಸಪ್ಪ ಕೋಟ್ಯಾನ್, ಬಂಟ್ವಾಳ ಜಯರಾಮ ಆಚಾರ್ಯ, ದೇಜಪ್ಪ ಪೂಜಾರಿ ನಿಡ್ಯ, ವೆಂಕಟೇಶ್ ಬಂಟ್ವಾಳ, ದೈವಾರಾಧಕ ಬಾಲಕೃಷ್ಣ ಸಾಲ್ಯಾನ್, ಚಿತ್ರನಟ ರಾಜೀವ ಶೆಟ್ಟಿ ಎಡ್ತೂರು ಅವರನ್ನು ಸನ್ಮಾನಿಸಲಾಯಿತು.

ಸಮಿತಿ ಅಧ್ಯಕ್ಷ ಮನೋರಂಜನ್ ಕೆ. ಆರ್., ಕಾರ್ಯದರ್ಶಿ ತಪೋಧನ್ ಶೆಟ್ಟಿ, ಕೋಶಾಧಿಕಾರಿ ಉಮೇಶ್ ಸಾಲ್ಯಾನ್, ವಲಯಾಧ್ಯಕ್ಷ ರಮಾನಂದ ನೂಜಿಪ್ಪಾಡಿ, ವಿಜಯ ರೈ. ಕೆ., ಜಾನ್ ಸಿರಿಲ್ ಡಿಸೋಜ, ಮಂಗೇಶ್ ಭಟ್, ಕೆ.ಸಿ. ನಾರಾಯಣನ್, ಬಾಲಕೃಷ್ಣ ಶೆಟ್ಟಿ , ಪ್ರಾಂತ್ಯ ರಾಯಭಾರಿ ರಾಧಾಕೃಷ್ಣ ರೈ, ಮುಖ್ಯ ಸಂಚಾಲಕ ಸುಧಾಕರ ಆಚಾರ್ಯ, ಶ್ರೀನಿವಾಸ ಪೂಜಾರಿ, ಶಾಶ್ವತ ಯೋಜನೆ ಅಧ್ಯಕ್ಷ ಕೃಷ್ಣಶ್ಯಾಂ, ಆತಿಥೇಯ ಘಟಕ ಅಧ್ಯಕ್ಷ ಉಮೇಶ್ ಆಚಾರ್, ಕೋಶಾಧಿಕಾರಿ ಜಗದೀಶ್ ಬಿ.ಎಸ್., ರಾಧಾಕೃಷ್ಣ ಬಂಟ್ವಾಳ ಇದ್ದರು. ಕಾರ್ಯಕ್ರಮ ನಿರೂಪಿಸಿದರು. ದಾಮೋದರ ಬಿ.ಎಂ. ಸಹಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT