ಮಂಗಳೂರು: ಇನ್ನೊಬ್ಬರಿಗೆ ಪಿತ್ತಜನಕಾಂಗ ದಾನ ಮಾಡಿದ ಉಪನ್ಯಾಸಕಿಯೊಬ್ಬರು ಕೆಲ ದಿನಗಳ ಬಳಿಕ ಮೃತಪಟ್ಟಿದ್ದಾರೆ.

ನಗರದ ಕರಂಗಲ್ಪಾಡಿ ನಿವಾಸಿಯಾಗಿರುವ ಲೆಕ್ಕಪರಿಶೋಧಕ ಚೇತನ್ ಕಾಮತ್ ಪತ್ನಿ ಅರ್ಚನಾ ಕಾಮತ್ (33) ಮೃತರು. ಅವರು ಬಂಧುವೊಬ್ಬರಿಗೆ ತಮ್ಮ ಪಿತ್ತಜನಕಾಂಗವನ್ನು ದಾನ ಮಾಡಿದ್ದರು. ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಅವರ ಪಿತ್ತಜನಕಾಂಗವನ್ನು ತೆಗೆದು, ಇನ್ನೊಬ್ಬರಿಗೆ ಕಸಿ ಮಾಡಲಾಗಿತ್ತು. ಆಸ್ಪತ್ರೆಯಲ್ಲಿ ಮೂರು ದಿನಗಳ ವಿಶ್ರಾಂತಿ ಬಳಿಕ ಕರಂಗಲ್ಪಾಡಿಯ ಮನೆಗೆ ಹಿಂತಿರುಗಿದ್ದರು.

ಆ ಬಳಿಕ ಅರ್ಚನಾ ಕಾಮತ್ ಆರೋಗ್ಯ ಏರುಪೇರಾಗಿತ್ತು. ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುವಾಗ ಬಹು ಅಂಗಾಂಗ ವೈಫಲ್ಯದಿಂದ ಅಸುನೀಗಿದ್ದಾರೆ ಎಂದು ಗೊತ್ತಾಗಿದೆ. ಕರಂಗಲ್ಪಾಡಿಯಲ್ಲಿ ಅಂತಿಮ ವಿಧಿಗಳನ್ನು ಮುಗಿಸಿ ಅವರ ತವರೂರಾದ ಕುಂದಾಪುರದ ಕೋಟೆಶ್ವರದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.