ಬುಧವಾರ, ನವೆಂಬರ್ 25, 2020
21 °C

ಯಂತ್ರದಲ್ಲಿ ಪೈರು ಕಟಾವು

ಪ್ರಜಾವಾಣಿ ವಾರ್ತೆ - ಬೈಲೈನ್ ರಾಜಾ ಪರಶುರಾಂ ನಾಯಕ Updated:

ಅಕ್ಷರ ಗಾತ್ರ : | |

Prajavani

ಉಜಿರೆ: ಕೃಷಿಯಲ್ಲಿ ಯಂತ್ರೋಪಕರಣಗಳ ಬಳಕೆಯಿಂದ ಕಡಿಮೆ ವೆಚ್ಚದಲ್ಲಿ ಹೆಚ್ಚು ಆದಾಯ ಪಡೆದು ಕೃಷಿಯಲ್ಲಿ ಲಾಭಗಳಿಸಬಹುದು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

ಧರ್ಮಸ್ಥಳ ದೇವಸ್ಥಾನದ ಬಳಿ ಇರುವ ಗದ್ದೆಯಲ್ಲಿ ಬುಧವಾರ ಯಂತ್ರದ ಮೂಲಕ ಪೈರು ಕಟಾವಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಕೂಲಿ ಕಾರ್ಮಿಕರ ಕೊರತೆಯ ಇಂದಿನ ಕಾಲದಲ್ಲಿ ಕೃಷಿಯಲ್ಲಿ ಯಂತ್ರೋಪಕರಣಗಳ ಬಳಕೆ ಅನಿವಾರ್ಯವಾಗಿದೆ. ಇದರಿಂದಾಗಿ ಸಮಯ ಹಾಗೂ ಶ್ರಮದ ಉಳಿತಾಯವಾಗಿ ಕೃಷಿ ಲಾಭದಾಯಕವಾಗುತ್ತದೆ ಎಂದರು.

ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಎಚ್. ಮಂಜುನಾಥ್, ಯೋಜನಾಧಿಕಾರಿ ಸುಧೀರ್ ಜೈನ್, ಪ್ರಬಂಧಕ ಸಚಿನ್, ರಾಜೇಂದ್ರ ರೈ, ಸುದರ್ಶನ್, ಹರಿಪ್ರಸಾದ್, ಶಾಂತ, ಹೇಮಾವತಿ ವಿ.ಹೆಗ್ಗಡೆ, ಸುಪ್ರಿಯಾ ಹರ್ಷೇಂದ್ರ ಕುಮಾರ್, ಕಿಯೋಸ್ಕ್ ಅಧಿಕಾರಿಗಳು, ಬ್ಯಾಂಕ್ ಆಫ್ ಬರೋಡದ ಪ್ರಾದೇಶಿಕ ಪ್ರಬಂಧಕ ಕಿರಣ್ ರೆಡ್ಡಿ, ಪ್ರಬಂಧಕ ವಿಜಯ ಪಾಟೀಲ್ ಇದ್ದರು. ಉಜಿರೆಯ ಪೂರಣ್ ವರ್ಮ ಸೇವಾಕೇಂದ್ರ ಸಂಯೋಜನೆಯಲ್ಲಿ ಸಹಕರಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.