ಉಳ್ಳಾಲ: ಬಿಜೆಪಿಯ ಭದ್ರಕೋಟೆ ಮಾಡೂರಿನ ಅರಸುನಗರಕ್ಕೆ, ಬಿಜೆಪಿ ನೇತೃತ್ವದ ಸರ್ಕಾರದ ಆಡಳಿತಾವಧಿಯಲ್ಲಿದ್ದ ಉಸ್ತುವಾರಿ ಸಚಿವರು, ಸಂಸದರು, ಸ್ಥಳೀಯಾಡಳಿತ, ಪಕ್ಷದ ರಾಜ್ಯ ಘಟಕದ ಅಧ್ಯಕ್ಷರ ಸ್ಪಂದನೆಯಿಂದ ಗ್ರಾಮದ ಜನರ 18 ವರ್ಷಗಳ ಕನಸು ನನಸಾಗಿದೆ ಎಂದು ಕೋಟೆಕಾರು ಪಟ್ಟಣ ಪಂಚಾಯಿತಿ ಸದಸ್ಯ ಸುಜಿತ್ ಮಾಡೂರು ಹೇಳಿದರು.

ಕೋಟೆಕಾರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಮಾಡೂರು ಶಾಲೆ ಎದುರಿನ ಕಾಂಕ್ರೀಟಿಕರಣಗೊಂಡ ಅರಸುನಗರ 2ನೇ ಅಡ್ಡರಸ್ತೆ ಹಾಗೂ 3ನೇ ಅಡ್ಡರಸ್ತೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗ್ರಾಮದ ಹಿರಿಯರಾದ ಸುಂದರಿ ಅವರು ರಸ್ತೆಯನ್ನು ಉದ್ಘಾಟಿಸಿದರು.

18 ವರ್ಷಗಳ ಬಹುಬೇಡಿಕೆಯ ರಸ್ತೆಯ ಕಾಂಕ್ರಿಟೀಕರಣಕ್ಕೆ ಶಾಸಕ ನೀಡಬೇಕಾದ ಅನುದಾನವನ್ನು ಕೌನ್ಸಿಲರ್ ಒದಗಿಸಬಹುದೇ ಎಂಬ ಪ್ರಶ್ನೆ ಇತ್ತು. ಆದರೆ, ಬಿಜೆಪಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ಉಸ್ತುವಾರಿ ಸಚಿವರಾಗಿದ್ದ ಸುನಿಲ್ ಕುಮಾರ್ ಅವರು ನಗರೋತ್ಥಾನ ಅನುದಾನ, ಅಂದಿನ ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರು ₹5 ಲಕ್ಷ ಅನುದಾನ ಇಟ್ಟಿದ್ದರು. ಆಗ ರಾಜ್ಯ ಘಟಕದ ಅಧ್ಯಕ್ಷರಾಗಿದ್ದ ನಳಿನ್ ಕುಮಾರ್ ಕಟೀಲ್ ತಹಶೀಲ್ದಾರ್ ಅವರನ್ನು ಸ್ಥಳಕ್ಕೆ ಕರೆಸಿ ಸ್ಥಳಿಯಾಡಳಿತದಿಂದ ಅನುದಾನ ಇರಿಸಲು ಸೂಚಿಸಿದ್ದರು. ಸ್ಥಳೀಯಾಡಳಿತ, ವಿವಿಧ ಇಲಾಖೆಗಳ ಗಮನ ಸೆಳೆದು ಅಭಿವೃದ್ಧಿಯನ್ನು ನಡೆಸಲಾಗಿದೆ ಎಂದು ಹೇಳಿದರು.

ಮುಂದಿನ ಯೋಜನೆಗಳಿಗೂ ಸಹಕಾರ ದೊರಕಲಿ. ಶಾಲೆ ಮುಂಭಾಗದ ಚರಂಡಿಗೆ ಬಿಜೆಪಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ಅನುದಾನ ಇಡಲಾಗಿತ್ತು. ಆದರೆ, ಅದನ್ನು ಶಾಸಕರು ಅಜ್ಜಿನಡ್ಕ ಅಂಗನವಾಡಿಗೆ ಮೀಸಲಿಟ್ಟಿದ್ದರಿಂದ ಚರಂಡಿ ಅಸಾಧ್ಯವಾಯಿತು. ಮುಂದಿನ ದಿನಗಳಲ್ಲಿ ಸಮಗ್ರ ಅಭಿವೃದ್ಧಿಗೆ ಪ್ರಯತ್ನ ಮಾಡುತ್ತೇನೆ ಎಂದರು.

ಕೋಟೆಕಾರು ಗ್ರಾ.ಪಂ ಮಾಜಿ ಸದಸ್ಯೆ ಲೀನಾ ಜೆ.ಶೆಟ್ಟಿ, ವಾರ್ಡ್ ಬೂತ್ ಮಾಜಿ ಅಧ್ಯಕ್ಷರಾದ ವಿಶ್ವರಾಜ್, ಸದಸ್ಯರಾದ ಹರೀಶ್ ರಾಜ್, ದಿನೇಶ್, ಸದಾಶಿವ, ಹರೀಶ್ ಆಚಾರ್ಯ, ಶಶಿಧರ್ ಮಾಡೂರು, ವಿಖ್ಯಾತ್, ರಾಮಣ್ಣ ಪೂಜಾರಿ, ಪವನ್ ಶೆಟ್ಟಿ, ಮಹೇಶ್ ರಾವ್, ಶಶಿ, ಪ್ರೇಮಾ, ದೇವಕಿ, ಸಮಿತಾ ಶೆಟ್ಟಿ, ಸಂಗೀತ, ಪವಿತ್ರಾಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-29-1672874727

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.