ಮಲ್ಲಿಕಾ ಕಲಾವೃಂದದ 73ನೇ ವರ್ಷದಧಾರ್ಮಿಕ, ಸಾಂಸ್ಕೃತಿಕ ಉತ್ಸವ 14ರಿಂದ

ಮಂಗಳೂರು: ಮಲ್ಲಿಕಾ ಕಲಾವೃಂದವು ಕದ್ರಿ ಮಂಜುನಾಥ ಸ್ವಾಮಿ ದೇವಸ್ಥಾನ ಉತ್ಸವದ ಅಂಗವಾಗಿ ದೇವಸ್ಥಾನದ ವೇದಿಕೆಯಲ್ಲಿ ಇದೇ 14ರಿಂದ 25ರವರೆಗೆ 73ನೇ ವರ್ಷದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಉತ್ಸವವನ್ನು ಏರ್ಪಡಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾಹಿತಿ ನೀಡಿದ ಸಂಸ್ಥೆಯ ಕಾರ್ಯಾ ಧ್ಯಕ್ಷ ಸುಧಾಕರ ರಾವ್ ಪೇಜಾವರ, ‘ದೇವಸ್ಥಾನದ ಜಾತ್ರೋತ್ಸವ ಈ ಬಾರಿ ಇದೇ 15ರಿಂದ ಆರಂಭವಾಗಲಿದೆ. ಆದರೆ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಇದೇ 14ರಿಂದಲೇ ಶುರುವಾಗಲಿವೆ. ಎಲ್ಲ ಸಾಂಸ್ಕೃತಿಕ ಕಾರ್ಯಕ್ರಮಗಳೂ ರಾತ್ರಿ 10 ಗಂಟೆ ಒಳಗೆ ಮುಕ್ತಾಯವಾಗಲಿವೆ’ ಎಂದರು.
‘ಈ ಬಾರಿ 3ಸಾವಿರಕ್ಕೂ ಅಧಿಕ ಕಲಾವಿದರು ವೇದಿಕೆಯಲ್ಲಿ ಕಾರ್ಯ ಕ್ರಮ ನೀಡಲಿದ್ದಾರೆ. ನಾಟಕಗಳಿಗೆ ತಲಾ 2 ಗಂಟೆ ಹಾಗೂ ಇತರ ಕಾರ್ಯಕ್ರಮಗಳಿಗೆ ಅರ್ಧ ಗಂಟೆ ಸಮಯಾವಕಾಶ ನೀಡಲಿದ್ದೇವೆ. ಕಾರ್ಯಕ್ರಮ ನೀಡುವವರಿಗೆ ಗೌರವ ಸಂಭಾವನೆಯನ್ನೂ ನೀಡಲಿದ್ದೇವೆ. ಕಲಾ ಪ್ರತಿಭೆಗಳನ್ನು ಗುರುತಿಸುವ ಉದ್ದೇಶ ದಿಂದ ಏರ್ಪಡಿಸುವ ಈ ಉತ್ಸವದಲ್ಲಿ ಉದಯೋನ್ಮುಖ ಪ್ರತಿಭೆಗಳಿಗೆ ಅವಕಾಶ ಸಿಗುವಂತೆ ನೋಡಿಕೊಂಡಿದ್ದೇವೆ’ ಎಂದರು.
‘ಇದೇ 14ರಂದು, ಮಕ್ಕಳಿಗೆ ದಾಸಗೀತೆ ಹಾಡುವ ಸ್ಪರ್ಧೆ ಹಾಗೂ ಏಳನೇ ತರಗತಿವರೆಗಿನ ಮಕ್ಕಳಿಗೆ ಭಗವದ್ಗೀತೆ ಕಂಠಪಾಠ ಸ್ಪರ್ಧೆ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ ಏರ್ಪಡಿಸಿದ್ದೇವೆ. ಪ್ರತಿ ವಿಭಾಗದಲ್ಲೂ ಉತ್ತಮ ಪ್ರದರ್ಶನ ನೀಡುವ ಐವರಿಗೆ ಬಹುಮಾನ ನೀಡಲಿದ್ದೇವೆ’ ಎಂದರು.
ವೃಂದದ ಮಹಿಳಾ ಘಟಕದ ಶೋಭಾ ಪೇಜಾವರ, ಲೆಕ್ಕ ಪರಿಶೋಧಕರಾದ ಶುಭಾನಂದ ರಾವ್ ಮತ್ತು ಸನತ್ ಕುಮಾರ್ ಜೈನ್ ಹಾಗೂ ಪೋಷಕ ರವೀಂದ್ರ ಶೇಟ್ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.