ಮಂದಾರಬೈಲ್: 4ರಿಂದ ವರ್ಷಾವಧಿ ಕೋಲ ಬಲಿ
ಮಂಗಳೂರು: ಮಂದಾರಬೈಲು ಕ್ಷೇತ್ರದ ರಕ್ತೇಶ್ವರಿ, ಮಂತ್ರದೇವತೆ, ರಾಹು–ಗುಳಿಗ ಸನ್ನಿಧಿಯಲ್ಲಿಇದೇ 4 ಮತ್ತು 5ರಂದು ವರ್ಷಾವಧಿ ಕೋಲ ಬಲಿ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಇದೇ 4ರಂದು ಬೆಳಿಗ್ಗೆ 7-30ರಿಂದ ಸತ್ಯನಾರಾಯಣ ಪೂಜೆ ನೆರವೇರಲಿದೆ. ಬೆಳಿಗ್ಗೆ 10.40ಕ್ಕೆ ಭಂಡಾರ ಏರುವುದು,
ಪಲ್ಲಪೂಜೆ ವಿಧಿಗಳು ಜರುಗಲಿವೆ. ಮಧ್ಯಾಹ್ನ ಅನ್ನಸಂತರ್ಪಣೆ ಹಾಗೂ ಸಂಜೆ 7.30ರಿಂದ ರಕ್ತೇಶ್ವರೀ ದೈವದ ನೇಮ, ನಂತರ ಮಂತ್ರದೇವತೆ ದೈವದ ಕೋಲಬಲಿ ಸೇವೆ, ದರ್ಶನ ಬಲಿ, ಪಲ್ಲಕಿ ಬಲಿ, ಬೆಳ್ಳಿ ರಥೋತ್ಸವ, ತುಲಾಭಾರ ಸೇವೆ, ಅಭಯಪ್ರದಾನ, ಪ್ರಸಾದ ವಿತರಣೆ ನಡೆಯಲಿದೆ.
ಇದೇ 5ರಂದು ರಾತ್ರಿ 8.05ರಿಂದ ಗುಳಿಗ ದೈವದ ಕೋಲ ಬಲಿ ಸೇವೆ, ಅಭಯ ಪ್ರದಾನ, ಪ್ರಸಾದ ವಿತರಣೆ ಜರುಗಲಿದೆ. ಅಂದು ಕ್ಷೇತ್ರದಲ್ಲಿ ವರ್ಷಾವಧಿ ಅಗೇಲು ಸೇವೆ ನಡೆಯಲಿದೆ ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.