ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಗಳೂರು | ಭೂಕುಸಿತ: 12 ರೈಲು ಸೇವೆ ರದ್ದು

Published 3 ಆಗಸ್ಟ್ 2024, 11:32 IST
Last Updated 3 ಆಗಸ್ಟ್ 2024, 11:32 IST
ಅಕ್ಷರ ಗಾತ್ರ

ಮಂಗಳೂರು: ಮಂಗಳೂರು–ಹಾಸನ ಮಾರ್ಗದ ಯಡಕುಮರಿ ಮತ್ತು ಕಡಗರವಳ್ಳಿ ಮಧ್ಯೆ ಹಳಿ ಮೇಲೆ ಭೂಕುಸಿತವಾಗಿರುವುದರಿಂದ 12 ರೈಲುಗಳ ಸೇವೆಯನ್ನು ರದ್ದು ಪಡಿಸಲಾಗಿದೆ.

16511 ಕೆಎಸ್‌ಆರ್‌ ಬೆಂಗಳೂರು–ಕಣ್ಣೂರ ರೈಲು ಆ.4 ಮತ್ತು 5ರಂದು. 16512 ಕಣ್ಣೂರ–ಕೆಎಸ್‌ಆರ್‌ ಬೆಂಗಳೂರು ರೈಲಿನ ಸೇವೆಯನ್ನು 5 ಮತ್ತು 6ರಂದು ರದ್ದು ಪಡಿಸಲಾಗಿದೆ.

16595 ಕೆಎಸ್‌ಆರ್‌ ಬೆಂಗಳೂರು–ಕಾರವಾರ ಸ್ಪೇಷಲ್‌ ರೈಲು 4 ಮತ್ತು 5ರಂದು ಹಾಗೂ 16596 ಕಾರವಾರ–ಕೆಎಸ್‌ಆರ್‌ ಬೆಂಗಳೂರು ರೈಲು 5 ಮತ್ತು 6ರಂದು.

16585 ಎಸ್‌ಎಂವಿಟಿ ಬೆಂಗಳೂರು–ಮುರುಡೇಶ್ವರ ಎಕ್ಸಪ್ರೆಸ್‌ ರೈಲು 4 ಮತ್ತು 5ರಂದು ಹಾಗೂ 16586 ಮುರುಡೇಶ್ವರ–ಎಸ್‌ಎಂವಿಟಿ ಬೆಂಗಳೂರು ಎಕ್ಸಪ್ರೆಸ್‌ ರೈಲು 5 ಮತ್ತು 6ರಂದು.

07377 ವಿಜಯಪುರ–ಮಂಗಳೂರು ಸೆಂಟ್ರಲ್ ರೈಲು 4 ಮತ್ತು 5ರಂದು ಹಾಗೂ 07378 ಮಂಗಳೂರು ಸೆಂಟ್ರಲ್‌–ವಿಜಯಪುರ ರೈಲು 5 ಮತ್ತು 6ರಂದು.

16515 ಯಶವಂತಪುರ ಜಂಕ್ಷನ್‌–ಕಾರವಾರ ಎಕ್ಸಪ್ರೆಸ್‌ ರೈಲು 5ರಂದು ಹಾಗೂ 16516 ಕಾರವಾರ–ಯಶವಂತಪುರ ಜಂಕ್ಷನ್‌ ಎಕ್ಸಪ್ರೆಸ್‌ ರೈಲು 6ರಂದು.

16575 ಯಶವಂತಪುರ ಜಂಕ್ಷನ್‌–ಮಂಗಳೂರು ಜಂಕ್ಷನ್‌ ರೈಲು 4ರಂದು ಹಾಗೂ 16576 ಮಂಗಳೂರು ಜಂಕ್ಷನ್‌–ಯಶವಂತಪುರ ಜಂಕ್ಷನ್‌ ರೈಲು ಸೇವೆಯನ್ನು ಆ.5ರಂದು ರದ್ದುಪಡಿಸಲಾಗಿದೆ ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT