ಮಂಗಳವಾರ, ಸೆಪ್ಟೆಂಬರ್ 17, 2019
27 °C

ಮಂಗಳೂರು: ಲಾರಿಗೆ ಸ್ಕಾರ್ಪಿಯೋ ಡಿಕ್ಕಿ: ವಿದ್ಯಾರ್ಥಿನಿ ಸಾವು

Published:
Updated:

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮುಕ್ಕ ಬಳಿ ವಿದ್ಯಾರ್ಥಿಗಳಿದ್ದ ಸ್ಕಾರ್ಪಿಯೋ ರಸ್ತೆ ವಿಭಜಕವನ್ನು ದಾಟಿಕೊಂಡು ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದು, ಒಬ್ಬ ವಿದ್ಯಾರ್ಥಿನಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಚಾಲಕ ಸೇರಿದಂತೆ ಎಂಟು ಮಂದಿ ಅಪಘಾತದಲ್ಲಿ ಗಾಯಗೊಂಡಿದ್ದಾರೆ.

ಮಣಿಪಾಲ ಎಜುಕೇಷನ್ ಅಕಾಡೆಮಿಯ ಇಂಟೀರಿಯರ್ ಡಿಸೈನಿಂಗ್ ವಿಭಾಗದ ವಿದ್ಯಾರ್ಥಿನಿ ಗ್ಲೋರಿಯಾ (24) ಮೃತಪಟ್ಟವರು.

ಸ್ಕಾರ್ಪಿಯೋ ಚಾಲಕ ಅವನತ್ ಮತ್ತು ಅದೇ ಕಾಲೇಜಿನ ವಿದ್ಯಾರ್ಥಿಗಳಾದ ಅಪರ್ಣಾ, ಅಂಕಿತಾ, ಗಾಯತ್ರಿ, ಸುಚಲಿತಾ, ರೇಖಾ, ಅನಿತಾ, ಮೇರಿಟಾ ಗಾಯಗೊಂಡಿದ್ದಾರೆ. ಚಾಲಕ ಸೇರಿದಂತೆ ಮೂವರ ಸ್ಥಿತಿ ಗಂಭೀರವಾಗಿದೆ.

ಎಂಟು ವಿದ್ಯಾರ್ಥಿಗಳು ಕಾರಿನಲ್ಲಿ ಮಣಿಪಾಲದತ್ತ ಹೋಗುತ್ತಿದ್ದರು. ಮುಕ್ಕ ಬಳಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಸ್ಕಾರ್ಪಿಯೋ, ಮಂಗಳೂರಿನತ್ತ ಬರುತ್ತಿದ್ದ ಲಾರಿಗೆ ಗುದ್ದಿದೆ. ಅಪಘಾತದಲ್ಲಿ ಸ್ಕಾರ್ಪಿಯೋ ಸಂಪೂರ್ಣ ನುಜ್ಜುಗುಜ್ಜಾಗಿದೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

Post Comments (+)