ಸೋಮವಾರ, ಜನವರಿ 25, 2021
16 °C
ವಾರದೊಳಗೆ ಎರಡನೇ ಪ್ರಕರಣ

ಮಂಗಳೂರು: ಮತ್ತೊಂದು ವಿವಾದಾತ್ಮಕ ಗೋಡೆಬರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ನಗರದಲ್ಲಿ ವಾರದೊಳಗೆ ಎರಡನೇ ವಿವಾದಿತ ಗೋಡೆಬರಹವು ಭಾನುವಾರ ಬೆಳಿಗ್ಗೆ ಕಂಡುಬಂದಿದೆ. ಇಲ್ಲಿನ ಪಿವಿಎಸ್ ವೃತ್ತದ ಬಳಿಯ ನ್ಯಾಯಾಲಯ ಸಂಕೀರ್ಣದ ಆವರಣದಲ್ಲಿನ ಜನರೇಟರ್ ಕೊಠಡಿಯ ಗೋಡೆಯ ಮೇಲೆ ‘ಗಸ್ತಕ್‌ ಎ ರಸೂಲ್‌ ಎಕ್‌ ಹಿ ಸಜಾ ತನ್‌ ಸೆ ಜುದಾ’ ಎಂದು ಬರೆಯಲಾಗಿದೆ.

ಉರ್ದು ಉಕ್ತಿಯನ್ನು ಇಂಗ್ಲಿಷ್‌ ಅಕ್ಷರಗಳಲ್ಲಿ ಬರೆದಿದ್ದು, ‘ಪ್ರವಾದಿಗೆ ಕೋಪ‌ ಬಂದರೆ ಒಂದೇ‌ ಶಿಕ್ಷೆ; ಅದು ದೇಹದಿಂದ ತಲೆ‌ ಬೇರ್ಪಡಿಸುವುದು’ ಎಂದು ಉಲ್ಲೇಖಿಸಲಾಗಿದೆ. ಬಂದರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ‌ನೀಡಿ, ಪರಿಶೀಲನೆ‌ ನಡೆಸಿದ್ದಾರೆ.

ನಗರದ ಕದ್ರಿಯಲ್ಲಿರುವ ಸರ್ಕಿಟ್‌ ಹೌಸ್‌ನಿಂದ ಕೆಳಗಡೆ ಹೋಗುವ ರಸ್ತೆ ಬದಿಯಲ್ಲಿನ ಅಪಾರ್ಟ್‌ಮೆಂಟ್‌ನ ಕಾಂಪೌಂಡ್‌ ಮೇಲೆ ‘ಲಷ್ಕರ್ ಜಿಂದಾಬಾದ್’ ಎಂಬಿತ್ಯಾದಿ ಬರಹಗಳು ಶುಕ್ರವಾರ (ನ.27) ಬೆಳಿಗ್ಗೆ ಕಂಡುಬಂದಿದ್ದವು.

‘ಎರಡೂ ಘಟನೆಗಳ ಬಗ್ಗೆ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದ್ದು, ತನಿಖೆಗೆ ತಂಡ ರಚಿಸಲಾಗಿದೆ. ಇವುಗಳನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಕೃತ್ಯ ಎಸಗಿದವರ ಬಗ್ಗೆ ಸಾರ್ವಜನಿಕರಿಗೆ ಯಾವುದೇ ಮಾಹಿತಿ ಗೊತ್ತಿದ್ದರೂ ತಿಳಿಸಬೇಕು. ಮಾಹಿತಿದಾರರ ವಿವರವನ್ನು ಗೋಪ್ಯವಾಗಿ ಇರಿಸಲಾಗುವುದು’ ಎಂದು ಪೊಲೀಸ್‌ ಕಮಿಷನರ್ ವಿಕಾಶ್ ಕುಮಾರ್ ವಿಕಾಶ್ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು