ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ₹1.92 ಕೋಟಿ ಮೌಲ್ಯದ ಹಳೆಯ ನೋಟುಗಳು ವಶಕ್ಕೆ, ಮೂವರ ಬಂಧನ  

Last Updated 19 ನವೆಂಬರ್ 2021, 9:10 IST
ಅಕ್ಷರ ಗಾತ್ರ

ಮಂಗಳೂರು: ಅಮಾನ್ಯಗೊಂಡ ನೋಟುಗಳನ್ನು ಸಾಗಿಸುತ್ತಿದ್ದ ಮೂವರನ್ನು ಬಂಧಿಸಿರುವ ನಗರ ಠಾಣೆ ಪೊಲೀಸರು, ಬಂಧಿತರಿಂದ ₹ 1.92 ಕೋಟಿ ಮೊತ್ತದ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.

ಕಣ್ಣೂರಿನ ಜುಬೇರ್ ಹಮ್ಮಬ್ಬ (52), ಪಡೀಲ್‌ನ ದೀಪಕ್ ಕುಮಾರ್ (32) ಮತ್ತು ಬಜ್ಪೆ ನಿವಾಸಿ ಅಬ್ದುಲ್ ನಾಸೀರ್ (40) ಬಂಧಿತರು. ಜುಬೇರ್ ಮತ್ತು ನಾಸೀರ್ ಚಾಲಕರಾಗಿದ್ದು, ದೀಪಕ್ ವಿದ್ಯುತ್ ಗುತ್ತಿಗೆದಾರ.

ಈ ಮೂವರು ಅಡ್ಯಾರ್‌ನಿಂದ ಲಾಲ್‌ಬಾಗ್‌ಗೆ ಅಮಾನ್ಯಗೊಂಡ ನೋಟುಗಳನ್ನು ಸಾಗಿಸುತ್ತಿದ್ದು, ಪೊಲೀಸರು ಕಾರು ನಿಲ್ಲಿಸಿ ತಪಾಸಣೆ ಮಾಡಿದಾಗ ಎರಡು ಬ್ಯಾಗ್‌ಗಳಲ್ಲಿ ಈ ನೋಟುಗಳು ಪತ್ತೆಯಾಗಿವೆ. ₹ 1,000 ಮುಖಬೆಲೆಯ ನೋಟುಗಳ 10 ಬಂಡಲ್‌ಗಳು ಮತ್ತು ₹ 500 ಮುಖಬೆಲೆಯ 57 ಬಂಡಲ್‌ಗಳಿದ್ದು, ಪೊಲೀಸರು ವಾಹನಸಹಿತ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳು ಶಿವಮೊಗ್ಗ ಮತ್ತು ಚಿತ್ರದುರ್ಗದಿಂದ ಅಮಾನ್ಯಗೊಂಡ ನೋಟುಗಳನ್ನು ತಂದಿದ್ದರು ಎಂದು ಪ್ರಾಥಮಿಕ ವಿಚಾರಣೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಚಿತ್ರದುರ್ಗ ಮತ್ತು ಶಿವಮೊಗ್ಗದಲ್ಲಿ ಈ ನೋಟುಗಳನ್ನು ಯಾರಿಂದ ತೆಗೆದುಕೊಂಡಿದ್ದಾರೆ ಮತ್ತು ಅದರಲ್ಲಿ ಭಾಗಿಯಾಗಿರುವ ಇತರರನ್ನು ಕಂಡುಹಿಡಿಯುವ ಸಂಬಂಧ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಹೇಳಿದ್ದಾರೆ.

ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT