ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರಿನಲ್ಲಿ ಬೆಳಿಗ್ಗೆ ಜನ ಸಂಚಾರ ವಿರಳ

Last Updated 30 ಮಾರ್ಚ್ 2020, 5:37 IST
ಅಕ್ಷರ ಗಾತ್ರ

ಮಂಗಳೂರು:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ ಸಂಪೂರ್ಣ ಬಂದ್ ಘೋಷಿಸಲಾಗಿದ್ದು, ನಗರದಲ್ಲಿ ಭಾನುವಾರ ಬೆಳಿಗ್ಗೆ ಜನಸಂಚಾರ ತೀರಾ ವಿರಳವಾಗಿತ್ತು.

ಕೇಂದ್ರ ಮಾರುಕಟ್ಟೆಯಲ್ಲಿ ಸಗಟು ವ್ಯಾಪಾರಸ್ಥರು ಬೆಳಿಗ್ಗೆ ತರಕಾರಿ, ದಿನಸಿ ಇತ್ಯಾದಿಗಳ ಲೋಡ್ ಇಳಿಸಿಕೊಂಡರು. ಅಲ್ಲಲ್ಲಿ ಸಣ್ಣ ಪುಟ್ಟ ವ್ಯಾಪಾರ ಕಂಡುಬಂತು. ಆದರೆ 8 ಗಂಟೆ ಆಗುತ್ತಲೇ ಪೊಲೀಸರು ಅಂಗಡಿ ಮುಚ್ಚಿಸಿದರು.

ಜಪ್ಪು, ತೊಕ್ಕೋಟು, ಕಂಕನಾಡಿ, ಉರ್ವ, ಕದ್ರಿ ಮತ್ತಿತರೆಡೆ ಹಾಲು, ದಿನಸಿ ಖರೀದಿಸಲು ಜನ ಬಂದಿದ್ದರು. ಅತ್ತಾವರ, ಜಪ್ಪು ಮತ್ತಿತರೆಡೆ ಹೊರತು ಪಡಿಸಿ ಬೇರೆಡೆ ಬೆರಳೆಣಿಕೆ ಜನರಿದ್ದರು. ಜನ ದಟ್ಟಣೆ ಇರಲಿಲ್ಲ. ಪೊಲೀಸರೂ ನಿಯಂತ್ರಿಸಿದರು.

ಹಾಲು, ಪತ್ರಿಕೆಗಳು ಔಷಧಿ ಮಳಿಗೆಗಳಿಗೆ ಪೊಲೀಸರು ಅಡ್ಡಿ ಮಾಡಲಿಲ್ಲ. ಸಂಪೂರ್ಣ ಬಂದ್ ಕಾರಣ ಬಹುತೇಕ ಸ್ತಬ್ಧವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT