ಮಂಗಳೂರು: ‘ತುಳುನಾಡಿನ ಮೂಲ ಸಂಸ್ಕೃತಿಯಲ್ಲೇ ಸೌಹಾರ್ದ ಅಡಕವಾಗಿದೆ. ಈ ನೆಲದ್ದೇ ಆದ ಸಾಂಸ್ಕೃತಿಕ ಚಟುವಟಿಕೆಗಳನ್ನು ಪ್ರಜ್ಞಾಪೂರ್ವಕವಾಗಿ ಹಮ್ಮಿಕೊಂಡು ಸೌಹಾರ್ದವನ್ನು ಇಲ್ಲಿ ಮರುಸ್ಥಾಪಿಸಬಹುದು. ಇದಕ್ಕಾಗಿ ವೈಚಾರಿಕ ಮನಸ್ಸುಗಳನ್ನು ಕಟ್ಟುವ ಕಾರ್ಯ ಸಂಘಟಿತವಾಗಿ ನಡೆಯಬೇಕು’ ಎಂದು ಜಾನಪದ ವಿದ್ವಾಂಸ ಗಣನಾಥ ಎಕ್ಕಾರು ಹೇಳಿದರು.

ಶ್ರೀನಿವಾಸ್ ಬಜಾಲ್ ಹುತಾತ್ಮ ದಿನದ ಅಂಗವಾಗಿ ಡಿವೈಎಫ್ಐ ಇಲ್ಲಿ ಮಂಗಳವಾರ ಏರ್ಪಡಿಸಿದ್ದ ‘ತುಳುನಾಡಿನ ಸೌಹಾರ್ದ ಪರಂಪರೆಗೆ ಕೋಮುವಾದದ ಸವಾಲು’ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ಈ ನೆಲದ್ದಲ್ಲದ ವೈದಿಕತೆ ತುಳುವರ ಆಚರಣೆಗಳಲ್ಲಿ ನುಸುಳಿದ್ದು, ವಿದ್ಯಾರ್ಥಿ, ಕಾರ್ಮಿಕ ಹಾಗೂ ಎಡಪಂಥೀಯ ಚಳವಳಿಗಳ ಅವಸಾನ, ಧಾರ್ಮಿಕ ಕೇಂದ್ರಗಳಲ್ಲಿ ರಾಜಕೀಯ ಬೆರೆತದ್ದು ಇಲ್ಲಿನ ಸೌಹಾರ್ದ ಪರಂಪರೆಯ ಅವಸಾನಕ್ಕೆ ಕಾರಣಗಳು‘ ಎಂದು ಅವರು ವಿಶ್ಲೇಷಿಸಿದರು.

‘ಬೇರೆ ಧರ್ಮವನ್ನು ಒಪ್ಪಿಕೊಂಡೂ ತಮ್ಮ ಧರ್ಮವನ್ನು ಪಾಲಿಸುವ ಪರಿಪಾಟ ತುಳುನಾಡಿನದು. ದೈವಾರಾಧನೆಯಲ್ಲಿ ಮುಸ್ಲಿಮರಿಗೆ ಗೌರವ ಸಲ್ಲಿಸುವ, ದೈವಗಳು ಮಸೀದಿಗೆ ಭೇಟಿ ನೀಡುವ ಸಂಪ್ರದಾಯಗಳು ಇಲ್ಲಿವೆ’ ಎಂದರು.

ಪತ್ರಕರ್ತ ನವೀನ್ ಸೂರಿಂಜೆ, ‘ಕರಾವಳಿಯಲ್ಲಿ ದ್ವೇಷದ ಮಾತುಗಳಿಗೆ ಸಂಬಂಧಿಸಿದ 39 ಪ್ರಕರಣಗಳಲ್ಲಿ ಆರೋಪಿಗಳಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಅವುಗಳನ್ನು ತೆರವುಗೊಳಿಸಲು ಪೊಲೀಸ್ ಇಲಾಖೆ ಕ್ರಮವಹಿಸಿಲ್ಲ. ದ್ವೇಷ ಬಾಷಣ ಮಾಡಿದಕ್ಕೆ 2 ವರ್ಷ ಜೈಲು ಶಿಕ್ಷೆಯಾಗಿ ಉತ್ತರ ಪ್ರದೇಶದ ಶಾಸಕರೊಬ್ಬರು ತಮ್ಮ ಶಾಸಕತ್ವ ಕಳೆದುಕೊಂಡರು. ಇಲ್ಲಿನ ಶಾಸಕರಿಗೂ ಅದೇರೀತಿ ಶಿಕ್ಷೆಯಾದರೆ ಕರಾವಳಿಯಲ್ಲೂ ಕೋಮುವಾದ ಕಡಿಮೆಯಾಗಬಹುದು’ ಎಂದರು.

ಸಿಪಿಎಂ ಜಿಲ್ಲಾ ಘಟಕದ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ, ‘ಕರಾವಳಿಯಲ್ಲಿ ಕೋಮುವಾದವನ್ನು ಪೋಷಿಸುತ್ತಿರುವುದು ಶಿಕ್ಷಣ ಮಾಫಿಯಾ. ತಮಗೆ ಅಗತ್ಯಬಿದ್ದಾಗ ಜಗಳ ಮಾಡಿಸುವ, ನಷ್ಟವಾಗುತ್ತದೆ ಎಂದಾದರೆ ಜಗಳ ನಿಲ್ಲಿಸುವ ಕಲೆ ಅವರಿಗೆ ತಿಳಿದಿದೆ. ಇಲ್ಲಿ ನಡೆಯುತ್ತಿರುವುದು ಹಿಂದೂ–ಮುಸ್ಲಿಂ ಸಂಘರ್ಷವಲ್ಲ. ಜಾತ್ಯತೀತ ಹಾಗೂ ಕೋಮುವಾದದ ಸಂಘರ್ಷವಿದು. ಈ ಸ್ಪಷ್ಟತೆ ಇಲ್ಲದೇ ಇಲ್ಲಿ ಸೌಹಾರ್ದ ಮರುಸ್ಥಾಪನೆಯ ಆಶಯ ಈಡೇರದು’ ಎಂದರು.

ಡಿವೈಎಫ್ಐ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಕೆ.ಇಮ್ತಿಯಾಜ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಸಂತೋಷ್ ಕುಮಾರ್ ಬಜಾಲ್ ಕಾರ್ಯಕ್ರಮ ನಿರೂಪಿಸಿದರು.

Cut-off box -

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.