ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು ಜಂಕ್ಷನ್ ಬೋಗಿ ಡಿಪೋಗೆ ಐಎಂಎಸ್ ಪ್ರಮಾಣಪತ್ರ

Last Updated 10 ಜನವರಿ 2020, 15:39 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ರೈಲ್ವೆಯ ಪಾಲ್ಘಾಟ್ ವಿಭಾಗದಲ್ಲಿರುವ ಸರಕು ಸಾಗಣೆ ಬೋಗಿಗಳ ನಿರ್ವಹಣೆ ಮಾಡುವ ಇಲ್ಲಿನ ಮಂಗಳೂರು ಜಂಕ್ಷನ್ ಬೋಗಿ ಡಿಪೋಗೆ ಇಂಟಿಗ್ರೇಟೆಡ್‌ ಮ್ಯಾನೇಜ್‌ಮೆಂಟ್‌ ಸಿಸ್ಟಂ (ಐಎಂಎಸ್‌) ಪ್ರಮಾಣಪತ್ರ ದೊರೆತಿದೆ.

ಈ ಡಿಪೋದಲ್ಲಿ ಸರಕು ಸಾಗಣೆ ಬೋಗಿಗಳ ಪರೀಕ್ಷೆ ಹಾಗೂ ನಿರ್ವಹಣೆಯನ್ನು ಮಾಡಲಾಗುತ್ತಿದೆ. ಪ್ಲಾಟ್‌ಫಾರಂ, ಬಿಡಿಭಾಗಗಳ ನಿರ್ವಹಣೆಯೂ ಈ ಡಿಪೋಗೆ ಸೇರಿದೆ.

ಪ್ರತಿ ತಿಂಗಳು ಸರಕು ಸಾಗಣೆಯ 49 ಬೋಗಿಗಳ ಪರೀಕ್ಷೆಯನ್ನು ಈ ಡಿಪೋದಲ್ಲಿ ಮಾಡಲಾಗುತ್ತದೆ. ಪಣಂಬೂರು ಮತ್ತು ಉಡುಪಿ ಮಧ್ಯೆ ಕಲ್ಲಿದ್ದಲು ಸಾಗಣೆ ಮಾಡುವ ಬೋಗಿಗಳ ನಿರ್ವಹಣೆಯನ್ನು ಇದೇ ಡಿಪೋದಲ್ಲಿ ಮಾಡಲಾಗುತ್ತದೆ. ಈ ಡಿಪೋದ ಬ್ರೇಕ್‌ ಪವರ್ ಪ್ರಮಾಣಪತ್ರ ದೊರೆತ ನಂತರವೇ ಬೋಗಿಗಳ ಸಂಚಾರಕ್ಕೆ ಅನುಮತಿ ನೀಡಲಾಗುತ್ತದೆ.

ಈ ಡಿಪೋದಲ್ಲಿ ನಾಲ್ಕು ಬೋಗಿಗಳನ್ನು ಇರಿಸುವ ಸಾಮರ್ಥ್ಯವಿದ್ದು, ಕೆಟ್ಟಿರುವ ಬೋಗಿಗಳ ದುರಸ್ತಿ ಮಾಡುವುದರ ಜತೆಗೆ ಸಂಚಾರ ಯೋಗ್ಯವನ್ನಾಗಿ ಮಾಡಲಾಗುತ್ತದೆ.

ಇದರ ಜತೆ ಪ್ರಯಾಣಿಕ ರೈಲುಗಳ ಸಂಚಾರದ ದಿಕ್ಕು ಬದಲಿಸುವ ಹಾಗೂ ಅದರ ಸಾಮರ್ಥ್ಯವನ್ನು ಪರೀಕ್ಷಿಸುವ ಕಾರ್ಯವೂ ಇಲ್ಲಿ ನಡೆಯುತ್ತದೆ. ಕೊಂಕಣ್‌ ರೈಲ್ವೆಯ ಬೋಗಿಗಳಿಗೆ ನೀರು ತುಂಬಿಸುವ ಕಾರ್ಯವನ್ನು ಇಲ್ಲಿ ಮಾಡಲಾಗುತ್ತದೆ.

ಈಗಾಗಲೇ ಗುಣಮಟ್ಟದ ನಿರ್ವಹಣೆಗಾಗಿ ಐಎಸ್ಒ 9001–2005 ಹಾಗೂ ಪರಿಸರ ಸ್ನೇಹಿ ನಿರ್ವಹಣೆಗಾಗಿ ಐಎಸ್ಒ 14001–2015 ಪ್ರಮಾಣಪತ್ರ, ಆರೋಗ್ಯ ಮತ್ತು ಸುರಕ್ಷತೆಗಾಗಿ ಐಎಸ್‌ಒ 42001–2018 ಪ್ರಮಾಣಪತ್ರಗಳು ಡಿಪೋಗೆ ದೊರೆತಿವೆ.

ಐಎಂಎಸ್ ಪ್ರಮಾಣಪತ್ರದ ಅವಧಿ ಮೂರು ವರ್ಷದ್ದಾಗಿದ್ದು, 2022 ರವರೆಗೆ ಇರುತ್ತದೆ ಎಂದು ದಕ್ಷಿಣ ರೈಲ್ವೆ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT