ಮಂಗಳವಾರ, ಮೇ 26, 2020
27 °C

ಇಲ್ಲದ ಒತ್ತಡ, ಬಹುತೇಕ ಖಾಲಿ ಖಾಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಲಾಕ್ಡೌನ್ ನಡುವೆ ಬುಧವಾರ ಬೆಳಿಗ್ಗೆ 7 ರಿಂದ 12 ರ ತನಕ ಜಿಲ್ಲಾಡಳಿತವು ಜೀವನಾವಶ್ಯಕ ವಸ್ತುಗಳ ಖರೀದಿಗಾಗಿ ನಿರ್ಬಂಧ ಸಡಿಲಿಕೆ ಮಾಡಿದ್ದು, ನಗರದಲ್ಲಿ ಜನ ಖರೀದಿಯಲ್ಲಿ ತೊಡಗಿದ್ದರು.

ಆದರೆ, ಮಂಗಳವಾರದ ಜನ ದಟ್ಟಣೆ ಕಂಡುಬರಲಿಲ್ಲ. ಬಹುತೇಕ ಖಾಲಿ ಖಾಲಿಯಾಗಿತ್ತು. ಕೇಂದ್ರ ಮಾರುಕಟ್ಟೆಗೆ ಸಾಮಾನ್ಯ ಜನರ ಪ್ರವೇಶ ನಿಷೇಧಿಸಲಾಗಿತ್ತು. ರಾತ್ರಿ 11 ರಿಂದ ಬೆಳಿಗ್ಗೆ 4 ರ ತನಕ ಸಗಟು ವ್ಯಾಪಾರ ನಡೆಯಿತು. ಬಳಿಕ ಬಂದ್ ಮಾಡಲಾಯಿತು ಎಂದು ಪೊಲೀಸರು ತಿಳಿಸಿದರು.

ಉಳಿದಂತೆ ಎಲ್ಲಿಯೂ ಒತ್ತಡ ಕಂಡು ಬರಲಿಲ್ಲ. ಆದರೆ ಸಾಮಗ್ರಿ ಕೊರತೆ ಇದೆ. ದರವೂ ಹೆಚ್ಚಿದೆ ಎಂದು ಕೆಲವು ಗ್ರಾಹಕರು ದೂರಿಕೊಂಡರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು