ಮಂಗಳವಾರ, ಜೂನ್ 22, 2021
27 °C

ತುಂಬೆ ತುಂಬಿದೆ: ಬೇಸಿಗೆ ನಿರಾಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಕೋವಿಡ್‌ ಎರಡನೇ ಅಲೆಯಿಂದ ಆತಂಕದಲ್ಲಿರುವ ಮಹಾನಗರದ ಜನರಿಗೆ ಈ ಬೇಸಿಗೆಯಲ್ಲಿ ಸ್ವಲ್ಪ ನೆಮ್ಮದಿ ಸಿಗಲಿದೆ. ನೀರಿಗಾಗಿ ಪರದಾಡಬೇಕಿಲ್ಲ. ತುಂಬೆ ಅಣೆಕಟ್ಟೆಯ ಜಲಾಶಯ ತುಂಬಿಕೊಂಡಿದೆ.

ಮಂಗಳೂರು ನಗರಕ್ಕೆ ಕುಡಿಯುವ ನೀರಿನ ಮೂಲವಾಗಿರುವ ನೇತ್ರಾವತಿ ನದಿಯ ಬಿ.ಸಿ. ರೋಡ್‌ ಬಳಿಯ ತುಂಬೆ ಕಿಂಡಿ ಅಣೆಕಟ್ಟೆಯಲ್ಲಿ ಈಗ ಸಾಕಷ್ಟು ನೀರು ಇದೆ. ಜನವರಿ ವರೆಗೂ ಸುರಿದ ಕಳೆದ ಹಂಗಾಮಿನ ಹಿಂಗಾರು ಮಳೆ, ಆ ಬಳಿಕ ಆಗಾಗ ಸುರಿಯುತ್ತಿದ್ದ ಮಳೆಯಿಂದಾಗಿ ನೇತ್ರಾವತಿ ಮತ್ತು ಉಪ ನದಿಗಳಿಂದ ಅಣೆಕಟ್ಟೆಗೆ ಸಾಕಷ್ಟು ನೀರು ಹರಿದುಬಂದು ಸೇರಿದೆ ಎಂಬುದು ಅಧಿಕಾರಿಗಳಿಂದ ಲಭಿಸಿರುವ ಮಾಹಿತಿ.

‘ತುಂಬೆ ಕಿಂಡಿ ಅಣೆಕಟ್ಟೆಯಲ್ಲಿ  ಈ ಬಾರಿ ಸಾಕಷ್ಟು ನೀರಿದೆ. ಶನಿವಾರದ ಲೆಕ್ಕಾಚಾರದಂತೆ ಜಲಾಶಯದಲ್ಲಿ 6 ಅಡಿಗಳಷ್ಟು ನೀರು ತುಂಬಿ ನಿಂತಿದೆ.  ತುಂಬೆ ಜಲಾಶಯದಿಂದ ಸರಬರಾಜು ಆಗುವ ನೀರನ್ನೇ ಆಶ್ರಯಿಸಿರುವ ಮಂಗಳೂರು ನಗರ ಹಾಗೂ ಪರಿಸರ ಪ್ರದೇಶದ ಜನರಿಗೆ ಈ ಬೇಸಿಗೆಯಲ್ಲಿ ತೊಂದರೆ ಇರಲಾರದು’  ಎಂದು ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್‌ ಶ್ರೀಧರ್‌ ತಿಳಿಸಿದರು.

 ಪ್ರತಿ ಬೇಸಿಗೆಯಲ್ಲಿ ಕುಡಿಯುವ ನೀರಿನದ್ದೇ ಇಲ್ಲಿನ ಜನರಿಗೆ ಸಮಸ್ಯೆ. ಕೆಲವು ಕಡೆಗಳಲ್ಲಂತೂ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಬೇಕಾಗುತ್ತದೆ. ಈ ಬಾರಿ ಕಳೆದ ವರ್ಷದಂತೆ ಕೋವಿಡ್‌ ನಿರ್ಬಂಧ ಹಾಗೂ ಸೋಂಕು ಹರಡುವ ಬಗ್ಗೆ ಆತಂಕವೂ ಇದೆ. ಇದರೊಂದಿಗೆ ನೀರಿನ ಸಮಸ್ಯೆ ಕಾಡಿದರೆ ಹೇಗೆ ಎಂಬ ಚಿಂತೆ ಇರುವ ಜನರಿಗೆ ನೀರು ಸರಬರಾಜಿನ ಭರವಸೆ ತಂಗಾಳಿಯಂತೆ ನೆಮ್ಮದಿ ನೀಡಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು