ಶುಕ್ರವಾರ, ಜನವರಿ 27, 2023
27 °C

ಮಂಗಳೂರು | ನಿಲ್ಲಿಸಿದ್ದ ಕಾರಿನಲ್ಲಿ ಬೆಂಕಿ: ಎಂಜಿನ್ ಭಸ್ಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ನಗರದ ಬಲ್ಮಠ ಬಳಿ ನಿಲ್ಲಿಸಿದ್ದ 'ಫೋರ್ಡ್ ಎಕೊ ಸ್ಪೋರ್ಟ್' ಕಾರಿನಲ್ಲಿ ಶನಿವಾರ ಮಧ್ಯಾಹ್ನ ಬೆಂಕಿ ಕಾಣಿಸಿಕೊಂಡಿದೆ.
ಕಾರಿನ ಎಂಜಿನ್ ಹಾಗೂ ಬ್ಯಾಟರಿ ಸುಟ್ಟು ಹೋಗಿದೆ.

'ಜ್ಯೂಸ್ ಜಂಕ್ಷನ್ ಎದುರು ಕಾರನ್ನು ನಿಲ್ಲಿಸಿ ಪಾನೀಯ ಸೇವಿಸುತ್ತಿದ್ದೆವು. ಕಾರಿನ ಎಂಜಿನ್ ಆಫ್ ಮಾಡಿರಲಿಲ್ಲ. ಕಾರಿನ ಮುಂಭಾಗದಲ್ಲಿ ಹೊಗೆ ಬರುತ್ತಿರುವುದು ಕಾಣಿಸಿತು. ನೀರು ಹಾಕಿ ಬೆಂಕಿ ನಂದಿಸುವಷ್ಟರಲ್ಲಿ ಎಂಜಿನ್ ನ ಕೆಲವು ಭಾಗಗಳು ಸುಟ್ಟು ಹೋಗಿವೆ' ಎಂದು ಮಂಗಳೂರಿನವರೇ ಆದ ರಿಫಾದ್ 'ಪ್ರಜಾವಾಣಿ'ಗೆ ತಿಳಿಸಿದರು.

ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಅವರು ಸಂದೇಹ ವ್ಯಕ್ತಪಡಿಸಿದರು.

'ಕಾರಿಗೆ ಏಳು ವರ್ಷಗಳಾಗಿವೆ. ಖರೀದಿಸುವಾಗ ₹ 10 ಲಕ್ಷ ನೀಡಿದ್ದೆ ಇದರ ವಿಮೆ ಊರ್ಜಿತದಲ್ಲಿದೆ. ಎಷ್ಟು ನಷ್ಟ ಪರಿಹಾರ ಸಿಗುತ್ತದೆಯೋ ಗೊತ್ತಿಲ್ಲ' ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು